ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಸಹಕಾರಿ: ಬಸವಪ್ರಭು ಸ್ವಾಮೀಜಿ

| Published : Jun 19 2024, 01:07 AM IST

ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಸಹಕಾರಿ: ಬಸವಪ್ರಭು ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಿಲೆಗಳು ಹತ್ತಿರವೂ ಸುಳಿಯದಂತೆ ಆರೋಗ್ಯ ಜೀವನ ನಡೆಸುವ ಆಸೆ ಇದ್ದರೆ ಪ್ರತಿದಿನ ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಯೋಗ ತರಬೇತಿ ಶಿಬಿರ ಆಯುಷ್ ಪರಿಚಯ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಯಿಲೆಗಳು ಹತ್ತಿರವೂ ಸುಳಿಯದಂತೆ ಆರೋಗ್ಯ ಜೀವನ ನಡೆಸುವ ಆಸೆ ಇದ್ದರೆ ಪ್ರತಿದಿನ ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ಶನಿವಾರ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಭಾರತ್ ಸೈಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ 10ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ತರಬೇತಿ ಶಿಬಿರ ಆಯುಷ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ದೇವರು ಸಕಲ ಸಂಪತ್ತು, ಐಶ್ವರ್ಯ ಎಲ್ಲವೂ ಕೊಟ್ಟಿದ್ದಾನೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಉತ್ತಮ ದೇಹ ಮತ್ತು ಆರೋಗ್ಯ ಬಹಳ ಮುಖ್ಯ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕಾದರೂ ಆರೋಗ್ಯ ಚೆನ್ನಾಗಿರಬೇಕು. ಯೋಗದಿಂದ ಪರೀಕ್ಷೆಯ ಭಯವನ್ನು ನೀಗಿಸಬಹುದು ಎಂದು ಉಪದೇಶಿಸಿದರು.

ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಆಯುಷ್ ಇಲಾಖೆ ಸಹಕಾರದಿಂದ ಕಳೆದ 10 ವರ್ಷಗಳ ಕಾಲ ಜಿಲ್ಲಾ ಯೋಗ ಒಕ್ಕೂಟವು ಯೋಗಾಸನ ದಿನಾಚರಣೆ ಆಚರಿಸುತ್ತ ಬಂದಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು. ಯೋಗೇಂದ್ರ ಕುಮಾರ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಬಿಸನಳ್ಳಿ, ಡಾ.ಸಿದ್ದೇಶ್, ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಜೆ., ಚಿಗಟೇರಿ, ಸ್ಕೌಟ್ಸ್ ಆಯುಕ್ತ ಎ.ಪಿ.ಷಡಕ್ಷರಪ್ಪ, ಉಪಾಧ್ಯಕ್ಷೆ ಶಾಂತಾ ಯಾವಗಲ್, ಗೈಡ್ಸ್ ಆಯುಕ್ತೆ ಶಾರದ ಮಾಗನಹಳ್ಳಿ, ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್, ಸಹ ಕಾರ್ಯದರ್ಶಿ ಸುಖವಾನಿ, ಎಸ್‌.ವಿ.ಜಿ ಅಶ್ವಿನಿ, ಎಂ.ರತ್ನ, ಯೋಗಪಟುಗಳಾದ ಹೊಲೂರು ತೀರ್ಥರಾಜ್, ಅನಿಲ್ ರಾಯ್ಕರ್, ಪರಶುರಾಮ ಹಾಗೂ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು, ಯೋಗ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

- - - -15ಕೆಡಿವಿಜಿ37:

ದಾವಣಗೆರೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಯೋಗ ತರಬೇತಿ ಶಿಬಿರ, ಹಾಗೂ ಆಯುಷ್ ಪರಿಚಯ ಕಾರ್ಯಕ್ರಮ ನಡೆಯಿತು.