ಸಾರಾಂಶ
ಕೊಪ್ಪ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಕೊಪ್ಪ ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಳೆದ ಹತ್ತು ದಿನಗಳಿಂದ ಕೊಪ್ಪ ಎ.ಎಲ್.ಎನ್. ರಾವ್ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಶಾಲಾ ಮಕ್ಕಳಿಗೆ ಯೋಗಾಭ್ಯಾಸದ ತರಬೇತಿ ನೀಡುತ್ತಿದ್ದರು.ಬೆಳಿಗ್ಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಪ್ರಕಾಶ್ ಸಿ.ಎಚ್. ಉದ್ಘಾಟಿಸಿ ಮಾತನಾಡಿ, ಯೋಗದಿಂದ ಸರ್ವರೋಗಕ್ಕೂ ಮುಕ್ತಿ ಇದೆ. ಪ್ರತಿದಿನ ಯೋಗ ಮಾಡುವುದರಿಂದ ಮಾನಸಿಕ ಮತ್ತು ಶಾರೀರಿಕವಾಗಿ ಉಲ್ಲಾಸದಿಂದ ಇರಬಹುದು ಎಂದರು.
ನಂತರ ಮಕ್ಕಳಿಂದ ವಿವಿಧ ಯೋಗದ ಆಸನಗಳನ್ನು ಪ್ರದರ್ಶಿಸಲಾಯಿತು. ಆಯುರ್ವೇದ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳಾದ ರಕ್ಷಿತಾ, ಅಂಕಿತ, ರೇಖಾನ್ವಿತ, ಕಿರಣ್ ಮತ್ತು ಪ್ರಜ್ವಲ್ ಎಲ್ಲಾ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಪ್ರಾಥಮಿಕ ವಿಭಾಗದಲ್ಲಿ ಡಾ.ಮಂಜುನಾಥ್ ಹೆಗಡೆ ಮತ್ತು ಡಾ.ಜೆನಿಯಾ ಧರಣಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.ಪ್ರಬಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಎಸ್.ಜಿ. ಮುಖ್ಯೋಪಾಧ್ಯಾಯ ರುದ್ರೇಶ್, ಎಸ್.ಡಿ.ಎಮ್.ಸಿ. ಸದಸ್ಯರಾದ ಜೀನತ್, ಸುಷ್ಮ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮಾನಸಿಕ, ಶಾರೀರಿಕ ಸದೃಡತೆಗೆ ಯೋಗ ಸಹಕಾರಿಶೃಂಗೇರಿ: ಮನುಷ್ಯನಿಗೆ ನೆಮ್ಮದಿಯ ಜೀವನ ನಡೆಸಬೇಕು. ಆರೋಗ್ಯ ಉತ್ತಮವಾಗಿರಬೇಕು. ಮಾನಸಿಕ ಶಾರೀರಿಕ ಸದೃಢತೆಗೆ ಯೋಗ ಸಹಕಾರಿಯಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮೀತಿಯ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು.ಪಟ್ಟಣದ ಶ್ರೀ ರಾಮಕೃಷ್ಣ ಆಂಗ್ಲಮಾದ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗವು ಪ್ರಾಚಿನ ಋಷಿಮುನಿಗಳು ನೀಡಿದ ಕೊಡುಗೆಯಾಗಿದೆ.ಇದು ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆಯಾಗಿದೆ.ಇಂದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಗೊಂಡಿದೆ ಎಂದರು.ಯೋಗ, ಧ್ಯಾನಗಳು ಆರೋಗ್ಯ ನೀಡುವುದರ ಜತೆಗೆ ಮಾನಸಿಕ ನೆಮ್ಮದಿ, ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಇಂದು ವಿಶ್ವಮಟ್ಟದಲ್ಲಿ ಯೋಗ ದಿನಾಚಾರಣೆ ನಡೆಯುತ್ತಿವುದು ಹೆಮ್ಮೆಯ ವಿಷಯ. ಯೋಗವು ನಾನು ಎನ್ನುವ ಬದಲು ನಾವು ಎನ್ನುವ ಭಾವನೆ ಮೂಡಿಸುತ್ತದೆ ಎಂದರು.ಶಾಲಾ ಆಡಳಿತ ಮಂಡಳಿ ಸದಸ್ಯ ಅಂಬಲಮನೆ ಸುಬ್ರಮಣ್ಯ, ಶಾಲಾ ಮುಖ್ಯಶಿಕ್ಷಕ ಮಹೇಶ್ವರಪ್ಪ ಮತ್ತಿತರರು ಹಾಜರಿದ್ದರು. ಮನಸ್ವಿ ಸ್ವಾಗತಿಸಿ ಪೂರ್ವ ನಿರೂಪಿಸಿ ವಂದಿಸಿದರು.
ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ ಯೋಗ ದಿನಕೊಪ್ಪ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಹರಂದೂರು ಮತ್ತು ಎ.ಎಲ್.ಎಲ್ ರಾವ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಇವರ ಸಹಯೋಗದಲ್ಲಿ ವಸತಿ ಶಾಲೆಯ ರಂಗಮಂದಿರದಲ್ಲಿ ಅಂತಾರಾಷ್ಟ್ರೀಯ ೧೧ನೇ ಯೋಗ ದಿನಾಚರಣೆ ಸಂಪನ್ನಗೊಂಡಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರ ರಜನಿ ವಹಿಸಿದ್ದರು ಡಾ.ಪ್ರದೀಪ್, ಉಪ ಪ್ರಾಂಶುಪಾಲರು ಎ.ಎಲ್.ಎನ್ ರಾವ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ಕೊಪ್ಪ ಇವರು ಮುಖ್ಯ ಅತಿಥಿಗಳಾಗಿ ಯೋಗದಿಂದ ಆರೋಗ್ಯವನ್ನು ಕಾಪಾಡಿಕೊಂಡು ದೀರ್ಘಾಯುಷ್ಯ ಹೊಂದಬೇಕು, ಪ್ರತಿನಿತ್ಯ ಸಮಯ ನೀಡಿ ಯೋಗ ಅಭ್ಯಾಸವನ್ನು ಮಾಡಬೇಕು ಎಂದು ತಿಳಿಸಿದರು. ದೈಹಿಕ ಶಿಕ್ಷಕರಾದ ರವಿ ವೈ.ಎನ್. ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾಜ ವಿಜ್ಞಾನದ ಶಿಕ್ಷಕರಾದ ಲಕ್ಷ್ಮಣ ಬಿ. ಇವರು ೧೧ನೇ ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವ ಮತ್ತು ಸವಿಸ್ತಾರವಾಗಿ ಭಾರತದ ಪರಂಪರೆಯಲ್ಲಿ ಯೋಗದ ಬಗ್ಗೆ ಉಪನ್ಯಾಸ ನೀಡಿದರು.ಶಿಕ್ಷಕರಾದ ಅರ್ಚನಾ, ಚಂದ್ರಕಲಾ, ಸುಂದರ ನಾಯ್ಕ, ಸುನೀತಾ, ಚೈತ್ರ, ಪೂಜಾ, ಸಿದ್ದಾರೂಢ ಹಾಗೂ ಎಲ್ಲಾ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಎ.ಎಲ್.ಎನ್.ರಾವ್ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ೧೦ ದಿನಗಳಿಂದ ತರಬೇತಿಯನ್ನು ನೀಡಿದ್ದು ಅವರಿಗೆ ಪ್ರಸಂಶನಾ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಯೋಗ ಪ್ರದರ್ಶನ ನಡೆಯಿತು.;Resize=(128,128))
;Resize=(128,128))
;Resize=(128,128))