ಸಾರಾಂಶ
ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಸೇರಿದ ಬೇವಿನಹಳ್ಳಿ ಗ್ರಾಮದ ರೈತ ನಯಾಜ್ ಅಹ್ಮದ್ ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಗುಡ್ಡದ ಭಾಗದಿಂದ ಬಂದ ಕರಡಿ ದಾಳಿ ಮಾಡಿ ತಲೆ, ಬೆನ್ನಿಗೆ, ಬಲಗಾಲಿನ ತೋಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ.
ಹೊನ್ನಾಳಿ: ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಸೇರಿದ ಬೇವಿನಹಳ್ಳಿ ಗ್ರಾಮದ ರೈತ ನಯಾಜ್ ಅಹ್ಮದ್ ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಗುಡ್ಡದ ಭಾಗದಿಂದ ಬಂದ ಕರಡಿ ದಾಳಿ ಮಾಡಿ ತಲೆ, ಬೆನ್ನಿಗೆ, ಬಲಗಾಲಿನ ತೋಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಗಾಯಗೊಂಡ ರೈತ ನಯಾಜ್ ಅಹ್ಮದ್‍ನನ್ನು ತಕ್ಷಣ ಅಲ್ಲಿನ ರೈತರು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕರಡಿದಾಳಿಗೆ ಒಳಗಾದ ರೈತ ನಯಾಜ್ ಅಹ್ಮದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕರಡಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.