ಸಾರಾಂಶ
ಯುವಕರು ದುಶ್ಚಟದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ದುಶ್ಚಟದಿಂದ ದೂರವಿರಬೇಕು. ಆರೋಗ್ಯದ ಕಾಳಜಿ ವಹಿಸುವುದು ಅಗತ್ಯವಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತನ್ನೂರು ಹೇಳಿದರು.
ತಂಬಾಕು ಮುಕ್ತ ಅಭಿಯಾನ ನಿಮಿತ್ತ ನಡೆದ ವಾಕ್ಥಾನ್ ಜಾಗೃತಿ ಜಾಥಾದಲ್ಲಿ ಶಾಸಕ ತುನ್ನೂರುಕನ್ನಡಪ್ರಭ ವಾರ್ತೆ ಯಾದಗಿರಿ
ಯುವಕರು ದುಶ್ಚಟದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ದುಶ್ಚಟದಿಂದ ದೂರವಿರಬೇಕು. ಆರೋಗ್ಯದ ಕಾಳಜಿ ವಹಿಸುವುದು ಅಗತ್ಯವಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತನ್ನೂರು ಹೇಳಿದರು.ಸೋಮವಾರ ನಗರದ ಲುಂಬಿನಿ ಉದ್ಯಾನವನದಲ್ಲಿ ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾಡಳಿತ, ನಗರಸಭೆ, ಜೆಸ್ಕಾಂ, ವಿವಿಧ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ತಂಬಾಕು ಮುಕ್ತ ಅಭಿಯಾನ ಅಂಗವಾಗಿ ವಾಕ್ಥಾನ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತಂಬಾಕು ಸೇವನೆ ಹಾಗೂ ಇನ್ನಿತರ ಕೆಟ್ಟ ಚಟದಿಂದ ಅನಾರೋಗ್ಯಕ್ಕೆ ತುತ್ತಾದರೆ, ಅವರ ಕುಟುಂಬಸ್ಥರ ಮೇಲೆ ಆರ್ಥಿಕ ಪರಿಣಾಮ ಬೀರುತ್ತದೆ. ಶಿಕ್ಷಣವಂತರೇ ಹೆಚ್ಚು ದುಶ್ಚಟಗಳ ದಾಸರಾಗುತ್ತಿದ್ದಾರೆ. ಆರೋಗ್ಯವೇ ಭಾಗ್ಯ ಎನ್ನುವಂತೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘವು ಉತ್ತಮ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ತಂಬಾಕು ಮುಕ್ತ ಅಭಿಯಾನ ಮಾಡಲು ನಮ್ಮ ನಡೆ ಆರೋಗ್ಯದ ಕಡೆ ವಾಕಥಾನ್ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಸೇವನೆ ಪ್ರಮಾಣ ಹೆಚ್ಚಿದೆ. ತಂಬಾಕು ಸೇವನೆ ಮುಕ್ತ ಮಾಡಿ ಆರೋಗ್ಯವಂತಹ ಸಮಾಜ ಮಾಡಬೇಕಿದೆ. ಹೀಗಾಗಿ ಯುವ ಪೀಳಿಗೆ ಆರೋಗ್ಯ ಕಡೆ ಹೆಚ್ಚಿನ ಪ್ರಮಾಣದಲ್ಲಿ ಕಾಳಜಿ ವಹಿಸಬೇಕಿದೆ ಎಂದರು.ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಡಾ. ವೀರೇಶ್ ಜಾಕಾ ಪ್ರಾಸ್ತಾವಿಕವಾಗಿ ಮಾತನಾಡಿ, ತಂಬಾಕು ಸೇವನೆಯಿಂದ ಯುವಕರು ಕ್ಯಾನ್ಸರ್ ಸೇರಿ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯುವಕರು ದುಶ್ಚಟದಿಂದ ದೂರವಿದ್ದು ಆರೋಗ್ಯವಂತರಾಗಿ ಉತ್ತಮ ಜೀವನ ನಡೆಸಿ, ಪೋಷಕರ ಕನಸು ನನಸು ಮಾಡಬೇಕಿದೆ ಎಂದು ಮನವಿ ಮಾಡಿದರು.ನಗರದ ಲುಂಬಿನಿ ಗಾರ್ಡನ್ ನಿಂದ ವಾಕ್ಥಾನ್ ಆರಂಭವಾಯಿತು. ಡಾ. ಅಂಬೇಡ್ಕರ್ ವೃತ್ತ, ಕನಕ ವೃತ್ತದ, ಅಮರಲೇಔಟ್ ಮೂಲಕ ಮರಳಿ ಲುಂಬಿನಿ ಗಾರ್ಡನ್ ವರಗೆ ವಾಕಥಾನ್ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಎಸ್ಪಿ ಪ್ರಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜೆಸ್ಕಾಂ ಇಇ ರಾಘವೇಂದ್ರ, ಡಿಎಚ್ಓ ಡಾ. ಮಹೇಶ್ ಬಿರಾದಾರ್, ಯಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಸಂದೀಪ್, ಡಾ. ಎಂ.ಎಸ್. ಪಾಟೀಲ್, ಡಾ. ರಿಜ್ವಾನಾ ಬೇಗಂ, ಡಾ. ಸುಭಾಶ್ಚಂದ್ರ ಕೌಲಗಿ, ಲಕ್ಷ್ಮೀಕಾಂತ ಪಾಟೀಲ್, ಡಾ. ಪ್ರಶಾಂತ ಭಾಸುತ್ಕರ್, ಡಾ. ಅಮೋಘ ಸಿದ್ದೇಶ, ಡಾ. ಲಕ್ಷ್ಮೀ ಸೇರಿದಂತೆ ಇತರರಿದ್ದರು.