“ಇಂದಿನ ಯುವ ಪೀಳಿಗೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ರಕ್ತವನ್ನು ಕೃತಕವಾಗಿ ತಯಾರಿಸಲು ಸಾದ್ಯವಿಲ್ಲ. ಒಬ್ಬರು ಮಾಡುವ ರಕ್ತದಾನದಿಂದ ಮೂವರ ಜೀವ ಉಳಿಸಬಹುದಾಗಿದೆ. ರಕ್ತದಾನಕ್ಕೆ ಯುವ ವಿದ್ಯಾರ್ಥಿಗಳು ಮುಂದಾಗಬೇಕು” ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ಹೇಳಿದರು.
ಹೊನ್ನಾವರ: “ಇಂದಿನ ಯುವ ಪೀಳಿಗೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ರಕ್ತವನ್ನು ಕೃತಕವಾಗಿ ತಯಾರಿಸಲು ಸಾದ್ಯವಿಲ್ಲ. ಒಬ್ಬರು ಮಾಡುವ ರಕ್ತದಾನದಿಂದ ಮೂವರ ಜೀವ ಉಳಿಸಬಹುದಾಗಿದೆ. ರಕ್ತದಾನಕ್ಕೆ ಯುವ ವಿದ್ಯಾರ್ಥಿಗಳು ಮುಂದಾಗಬೇಕು” ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ಹೇಳಿದರು. ಅವರು ಪಟ್ಟಣದ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಎನ್ ಎಸ್.ಎಸ್ ಘಟಕ, ಯೂತ್ ರೆಡ್ ಕ್ರಾಸ್, ವಿದ್ಯಾರ್ಥಿ ಒಕ್ಕೂಟ, ರೆಡ್ ರಿಬ್ಬನ್ ಕ್ಲಬ್, ತಾಲೂಕು ಆಸ್ಪತ್ರೆ ಹೊನ್ನಾವರ, ಮತ್ತು ಕಾರವಾರ ಬ್ಲಡ್ ಬ್ಯಾಂಕ್ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. “ ಅಪಘಾತ ಸೇರಿದಂತೆ ಅನೇಕ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ರಕ್ತ ಬೇಕಾಗುತ್ತದೆ. ಹೆರಿಗೆ ಸಂದರ್ಭದಲ್ಲಿ ಒಮ್ಮೊಮ್ಮೆ ರಕ್ತದ ಅವಶ್ಯಕತೆ ತುಂಬಾನೆ ಇರುತ್ತದೆ. ಇನ್ನೊಬ್ಬರ ಜೀವ ಉಳಿಸುವ ರಕ್ತದಾನದಂತಹ ಉತ್ತಮ ಕಾರ್ಯಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ರಕ್ತದಾನ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಹೌದು” ಎಂದು ಹೇಳಿ ರಕ್ತದಾನದ ಕುರಿತು ಸವಿಸ್ತಾರ ಮಾಹಿತಿ ನೀಡಿದ್ದರು. ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಪಟಗಾರ ಮಾತನಾಡಿ “ಎಸ್.ಡಿ.ಎಂ ಕಾಲೇಜಿನವರು ರಕ್ತದಾನದಂತಹ ಕಾರ್ಯದಲ್ಲಿ ಸದಾ ಮುಂದೆ ಇರುವುದು ನಿಜಕ್ಕೂ ಸಂತೋಷದ ವಿಚಾರ. ಹೆಚ್.ಐ.ವಿ/ಏಡ್ಸ್ ಅಪಾಯ ಅರಿಯಲು ಸ್ವಯಂ ಮೌಲ್ಯಮಾಪನಕ್ಕೆ ಯುವ ವಿದ್ಯಾರ್ಥಿಗಳು ಒಳಗಾಗಬೇಕು” ಎಂದು ಕ್ಯೂ ಆರ್ ಕೋಡ್ ಸ್ಕ್ಯಾನ್ ಬಗ್ಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ|| ಜಿ.ಎನ್.ಭಟ್ಟ, “ರಕ್ತದಾನ ಮಾಡುವುದರಿಂದ ಜೀವ ಉಳಿಸುವುದರ ಜೊತೆ ಆರೋಗ್ಯಕರ ಉಪಯೋಗಗಳು ಇದೆ. ವಿದ್ಯಾರ್ಥಿಗಳು ರಕ್ತದಾನ ಶಿಭಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಹೇಳಿದರು.ಎನ್.ಸಿ.ಸಿ ಅಧಿಕಾರಿ ಸಂತೋಷ ಗುಡಿಗಾರ ಸ್ವಾಗತಿಸಿದರು. ಡಾ|| ನಾಗರಾಜ ಹೆಗಡೆ ವಂದಿಸಿದರು.ಇತಿಹಾಸ ವಿಭಾಗದ ಮುಖ್ಯಸ್ಥ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯೂಥ್ ರೆಡ್ ಕ್ರಾಸ್ ಘಟಕ ಸಂಯೋಜಕರಾದ ಡಾ|| ಎಂ.ಜಿ.ಹೆಗಡೆ, ವಿದ್ಯಾರ್ಥಿ ಒಕ್ಕೂಟ ಉಪಾಧ್ಯಕ್ಷ ಡಾ|| ಸುರೇಶ್ ಎಸ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಪ್ರಣತಿ ಭಟ್ ಮತ್ತು ಪವನ ಕುಮಾರ ಸೇರಿದಂತೆ ಕಾಲೇಜಿನ ಅಧ್ಯಾಪಕರು ನೂರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ನಂತರ ತಾಲೂಕು ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೩೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ರಕ್ತದಾನ ಮಾಡಿದರು. ಕಾರವಾರ ಬ್ಲಡ್ ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಹೊನ್ನಾವರ ತಾಲೂಕು ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರಾದ ದೀಪಾ ಮಾರುತಿ ನಾಯ್ಕ, ಮತ್ತು ಉಮೇಶ ಸಹಕರಿಸಿದರು