ಉಡುಪಿ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಚೆನ್ನೈಯಲ್ಲಿ ಬಂಧನ

| Published : Jun 25 2025, 11:47 PM IST

ಉಡುಪಿ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಚೆನ್ನೈಯಲ್ಲಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಇಡಲಾಗಿದೆ ಎಂಬ ಸುಳ್ಳು ಇಮೇಲ್ ಕಳಹಿಸಿದ್ದ ಆರೋಪಿ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಈಕೆ ಉಡುಪಿಯೂ ಸೇರಿ 21 ಕಡೆಗಳಿಗೆ ಇಂತಹ ಹುಸಿ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದಳ‍ು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಇಡಲಾಗಿದೆ ಎಂಬ ಸುಳ್ಳು ಇಮೇಲ್ ಕಳಹಿಸಿದ್ದ ಆರೋಪಿ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಈಕೆ ಉಡುಪಿಯೂ ಸೇರಿ 21 ಕಡೆಗಳಿಗೆ ಇಂತಹ ಹುಸಿ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದಳ‍ು.

ಆರೋಪಿಯನ್ನು ರೀನಾ ಜೋಶಿಲ್ದಾ ಎಂದು ಗುರುತಿಸಲಾಗಿದ್ದು, ಆಕೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾಳೆ. ಚೆನ್ನೈಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೀನಿಯರ್ ಕನ್ಸಲ್‌ಟೆಂಟ್ ಆಗಿದ್ದಾಳೆ.ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಗೆ ಬಾಂಬ್ ಇಟ್ಟಿದ್ದೇವೆ ಎಂದು ಜೂನ್‌ 16ರಂದು ಇಮೇಲ್ ಬಂದಿದ್ದು, ಪೊಲೀಸರು ತಕ್ಷಣ ಶಾಲೆಯನ್ನು ತಮ್ಮ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಯಾವುದೇ ಬಾಂಬ್ ಅಥವಾ ಸ್ಫೋಟಕಗಳು ಸಿಕ್ಕದೆ ನಂತರ ಅದು ಹುಸಿ ಬೆದರಿಕೆ ಎಂದು ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ಉಡುಪಿ ಪೊಲೀಸರು ದೆಹಲಿಯ ಸೈಬರ್ ಕ್ರೈಂ ಸೆಲ್‌ಗೆ ಮಾಹಿತಿ ನೀಡಿದ್ದರು.

ಅಹಮದಾಬಾದ್ ಶಾಲೆಯೊಂದಕ್ಕೆ ಇಂತಹದ್ದೇ ಬೆದರಿಕೆ ಬಂದಿದ್ದು, ಅಲ್ಲಿನ ಪೊಲೀಸರು ಈ ಪ್ರಕರಣವನ್ನು ತಾಂತ್ರಿಕವಾಗಿ ಭೇದಿಸಿದ್ದಾರೆ.

ಆಕೆ 2022ರಿಂದ ಡಾರ್ಕ್ ವೆಬ್ ಮೂಲಕ ನಕಲಿ ಇಮೇಲ್ ವಿಳಾಸದಿಂದ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳ‍ುನಾಡು, ದೆಹಲಿ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ, ಹರ್ಯಾಣಗಳ 21 ಶಾಲೆ, ಕಾಲೇಜು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್‌ಗಳನ್ನು ಕಳಹಿಸಿದ್ದಳು.

ಅದರಲ್ಲೊಂದು ಉಡುಪಿಯ ವಿದ್ಯೋದಯ ಶಾಲೆಗೆ ಕಳುಹಿಸಿದ ಇಮೇಲ್ ಆಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಆಕೆಯನ್ನು ತಮಗೆ ಒಪ್ಪಿಸುವಂತೆ ಅಹಮ್ಮದಾಬಾದ್ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.