ಯುವ ಕಾಂಗ್ರೆಸ್ ಚುನಾವಣೆ: ಪುಟ್ಟು ಬೆಂಬಲಿಗರಿಗೆ ಪಟ್ಟ

| Published : Feb 10 2025, 01:47 AM IST

ಸಾರಾಂಶ

ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಮೊಳಗಿಸಿದ್ದು, ಈ ಗೆಲುವು ಶಿಡ್ಲಘಟ್ಟ ಯುವ ಕಾಂಗ್ರೆಸ್ ಗೆ ಹೊಸ ಉತ್ಸಾಹವನ್ನು ತುಂಬಿದೆ. ಗೆದ್ದ ಅಭ್ಯರ್ಥಿಗಳು ಯುವಜನತೆ ಮತ್ತು ಪಕ್ಷದ ಭವಿಷ್ಯಕ್ಕಾಗಿ ಕಾರ್ಯ ನಿರ್ವಹಿಸಲು ಸಿದ್ಧರಾಗಬೇಕು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ. ದರ್ಶನ ರಾಜ್ ಜಯ ಸಾಧಿಸಿದ್ದಾರೆ.ಚಿಲಕಲನೇರ್ಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರವಿಚಂದ್ರ ಆಯ್ಕೆಯಾಗಿದ್ದಾರೆ. ಶಿಡ್ಲಘಟ್ಟ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ರಾಕೇಶ್ ಎನ್ ಆಯ್ಕೆಯಾಗಿ ಮತ್ತು ಚಾಂದ್ ಪಾಷ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಮೊಳಗಿಸಿದ್ದು, ಈ ಗೆಲುವು ಶಿಡ್ಲಘಟ್ಟ ಯುವ ಕಾಂಗ್ರೆಸ್ ಗೆ ಹೊಸ ಉತ್ಸಾಹವನ್ನು ತುಂಬಿದೆ. ಗೆದ್ದ ಅಭ್ಯರ್ಥಿಗಳು ಯುವಜನತೆ ಮತ್ತು ಪಕ್ಷದ ಭವಿಷ್ಯಕ್ಕಾಗಿ ಕಾರ್ಯ ನಿರ್ವಹಿಸಲು ಸಿದ್ಧರಾಗಬೇಕು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಪುಟ್ಟು ಆಂಜಿನಪ್ಪ ಕಿವಿಮಾತು ಹೇಳಿದರು.

ನೂತನವಾಗಿ ಆಯ್ಕೆಯಾಗಿರುವಂತಹ ನಮಗೆ ಯುವ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರು, ಸಹೋದರಿಯರು ಮತ್ತು ಯುವ ಮಿತ್ರರು ನಮ್ಮ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಧ್ಯಕ್ಷ ದರ್ಶನ್ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ಮಾಧ್ಯಮ ವಿಭಾಗ ನಾಗೇಶ್ ಗೌಡ , ಗ್ರಾಮ ಪಂ. ಅಧ್ಯಕ್ಷ ಮುರಳಿ, ಸಾಧೀಕ್, ಚಂದ್ರು, ತುಮ್ಮನಹಳ್ಳಿ ವೆಂಕಟೇಶ್, ವರದರಾಜ್, ವಾರ್ ಹುಣಸೇನಹಳ್ಳಿ ಮಂಜುನಾಥ್, ದಾಮೋದರ್ , ದೊಡ್ಡದಾಸರಹಳ್ಳಿ ದೇವರಾಜ್, ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಪುಟ್ಟು ಆಂಜಿನಪ್ಪ ಅಭಿಮಾನಿಗಳು ಹಾಜರಿದ್ದರು.