ಸಾರಾಂಶ
ವಿದ್ಯಾರ್ಥಿ ನಿಯಲದ ಮೇಲ್ವಿಚಾರಕರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ.೧೦ರಂದು ದೂರು ಪಡೆದು ಕೊಂಡಿರುವ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ನಗರದ ಹೊರವಲಯದಲ್ಲಿನ ಪಡೀಲ್ ಹಾರಾಡಿ ಎಂಬಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಪರಿಚಿತ ಯುವಕನೊಬ್ಬ ನ. ೬ರಂದು ಮಧ್ಯರಾತ್ರಿ ನುಗ್ಗಿದ್ದು, ಈ ದೃಶ್ಯವು ಇಲ್ಲಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಮಂಗಳವಾರ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ನ.೬ರಂದು ಮಧ್ಯರಾತ್ರಿ ಸುಮಾರು ಸುಮಾರು ೨.೩೦ರಿಂದ ೩.೩೦ ತನಕ ಹಾಸ್ಟೆಲ್ ಒಳಗೇ ಉಳಿದುಕೊಂಡಿದ್ದ ಈತನ ಚಲನವಲನವನ್ನು ಬಾಲಕಿಯೊಬ್ಬಳು ವಿಡಿಯೋ ಮಾಡಿದ್ದಾಳೆ ಬಳಿಕ ಹಾಸ್ಟೆಲ್‌ನ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾಳೆ ಎಂದೂ ತಿಳಿದು ಬಂದಿದೆ. ಹಾಸ್ಟೆಲ್‌ನಲ್ಲಿ ಇರುವ ಸಿಸಿ ಕ್ಯಾಮರಾದಲ್ಲಿಯೂ ಯುವಕ ಓಡಾಡಿರುವುದು ಸೆರೆಯಾಗಿದೆ.
ಈ ಬಗ್ಗೆ ವಿದ್ಯಾರ್ಥಿ ನಿಯಲದ ಮೇಲ್ವಿಚಾರಕರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ.೧೦ರಂದು ದೂರು ಪಡೆದು ಕೊಂಡಿರುವ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.