ಸಾರಾಂಶ
ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಅ. 16ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು "ಜಿಲ್ಲಾ ಮಟ್ಟದ ಯುವಜನೋತ್ಸವ'''''''' ಕಾರ್ಯಕ್ರಮ ಅ.16ರಂದು ಮಡಿಕೇರಿಯಲ್ಲಿ ನಡೆಯಲಿದ್ದು, ಯುವ ಸಮೂಹಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ, ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಸಹಯೋಗದೊಂದಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿದೆ. ಆಸಕ್ತ ಸ್ಪರ್ಧಿಗಳು ಅಂದು ಬೆಳಗ್ಗೆ 9.30 ಗಂಟೆಯೊಳಗೆ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಗುಂಪು ಸ್ಪರ್ಧೆಜನಪದ ನೃತ್ಯ 10 ಜನರ ತಂಡ, 15 ನಿಮಿಷಗಳು, ಜನಪದ ಗೀತೆ 10 ಜನರ ತಂಡ, 7 ನಿಮಿಷ ಕಾಲಾವಕಾಶ ನೀಡಲಾಗುವುದು. ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದ್ದು, ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು.ವೈಯಕ್ತಿಕ ಸ್ಪರ್ಧೆಗಳುಕಥೆ ಬರೆಯುವುದು (60 ನಿಮಿಷ)ಕಥೆ ಆಂಗ್ಲ, ಹಿಂದಿ, ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಇರಬೇಕು, ವಿಷಯ ಆಕ್ರಮಣಕಾರಿಯಾಗಿರಬಾರದು, ಎಲ್ಲೂ ಪ್ರಕಟವಾಗಿರಬಾರದು. ಅಕ್ಷರಗಳು ಸ್ಪಷ್ಟವಾಗಿರಬೇಕು, ಯಾವುದೇ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು, 1000 ಪದಗಳಿಗೆ ಮೀರಬಾರದು.ಕವಿತೆ ಬರೆಯುವ ಸ್ಪರ್ಧೆ (90 ನಿಮಿಷ)ಆಂಗ್ಲ, ಹಿಂದಿ, ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಇರಬೇಕು. ಚಿತ್ರಕಲೆ ಸ್ಪರ್ಧೆ (90 ನಿಮಿಷ)ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ (ಪೋಸ್ಟರ್ ಅಳತೆ ಎ3- 11.7*16.5)ಭಾಷಣ ಸ್ಪರ್ಧೆ (7 ನಿಮಿಷ)ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು. ಸ್ಪರ್ಧಿಗಳು ಸಿದ್ದಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ ಭಾಷಣ ಮಾಡಬೇಕು. ಶಬ್ಧ ಅಥವಾ ಪದಗಳು ಪುನರಾವರ್ತನೆಯಾಗಬಾರದು, ವಿಷಯದ ಬಗ್ಗೆ ಅರಿವು ಮತ್ತು ಆತ್ಮವಿಶ್ವಾಸ ಹೊಂದಿರಬೇಕು. ವಿಜ್ಞಾನ ಮೇಳ ಐದು ಜನರ ಪ್ರತಿ ಗುಂಪಿಗೆ ರಾಜ್ಯಮಟ್ಟದ ವರೆಗೆ ಮಾತ್ರ ಆಯೋಜಿಸಲಾಗುವುದು. *ಕೊಡಗಿನವರು ಭಾಗವಹಿಸಿ*ಯುವಜನೋತ್ಸವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಯುವಕ, ಯುವತಿಯರು, ಶಾಲಾ, ಕಾಲೇಜ್ ನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ವಯೋಮಿತಿ 15 ರಿಂದ 29 ವರ್ಷಗಳಾಗಿರಬೇಕು ಹಾಗೂ ವಯೋಮಿತಿಯ ಬಗ್ಗೆ ಯಾವುದಾದರು ದಾಖಲೆ ಅಥವಾ ಆಧಾರ್ ಕಾರ್ಡ್ ದೃಢೀಕರಣ ಪ್ರತಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುತ್ತಾರೆ. ಎಲ್ಲಾ ಸ್ಪರ್ಧೆಗಳು ಯುವಕ, ಯುವತಿಗೆ ಒಟ್ಟಾಗಿ ನಡೆಯಲಿದೆ. ಭಾಗವಹಿಸುವ ತಂಡಗಳಿಗೆ ಸಾಮಾನ್ಯದರದ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು ಮೊ.9591137275. ಸಾಬಾ ಸುಬ್ರಮಣಿ, ಕಾರ್ಯಾಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು-9845571290, ದಿಲೀಪ್‌ಕುಮಾರ್, ಅಧ್ಯಕ್ಷರು, ತಾಲೂಕು ಯುವ ಒಕ್ಕೂಟ, ಮಡಿಕೇರಿ-8618568173, ಡಿ.ನವೀನ್ ದೇರಳ, ಸದಸ್ಯರು, ಜಿಲ್ಲಾ ಯುವ ಒಕ್ಕೂಟ-9449952008, ಕುಂಜಿಲನ ಮೋಹನ್-9480646382ನ್ನು ಸಂಪರ್ಕಿಸಬಹುದು ಎಂದು ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.