ಹೊಸಪೇಟೆಯಲ್ಲಿ ನಾಳೆ ಯುವ ಚಲನಚಿತ್ರ ಸಂಭ್ರಮ

| Published : Mar 22 2024, 01:03 AM IST

ಸಾರಾಂಶ

ಚಾಮರಾಜನಗರದಲ್ಲಿ ಪ್ರೀ-ಇವೆಂಟ್ ಮಾಡಲಾಗಿದೆ. ಪುನೀತ್ ರಾಜಕುಮಾರ ಅಭಿಮಾನಿಗಳು ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಕಾರ್ಯಕ್ರಮಕ್ಕೆ ೧೫ ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಹೊಸಪೇಟೆ: ಬಹುನಿರೀಕ್ಷಿತ "ಯುವ " ಚಿತ್ರ ಮಾ.೨೯ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.೨೩ರಂದು ಸಂಜೆ ೬ ಗಂಟೆಗೆ (ಪ್ರೀ-ಇವೆಂಟ್) ಯುವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿವಿಆರ್ ಎಂಟರ್ ಟೈನ್‌ಮೆಂಟ್ ರಾಮಗೌಡ ಮತ್ತು ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕಿಚಿಡಿ ವಿಶ್ವ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚಾಮರಾಜನಗರದಲ್ಲಿ ಪ್ರೀ-ಇವೆಂಟ್ ಮಾಡಲಾಗಿದೆ. ಪುನೀತ್ ರಾಜಕುಮಾರ ಅಭಿಮಾನಿಗಳು ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಕಾರ್ಯಕ್ರಮಕ್ಕೆ ೧೫ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ, ಯುವ ರಾಜಕುಮಾರ, ಸಪ್ತಮಿಗೌಡ, ರಾಘವೇಂದ್ರ ರಾಜಕುಮಾರ, ವಿನಯ್ ರಾಜಕುಮಾರ, ನಿಶ್ವಿಕಾ ನಾಯ್ಡು, ಭಾವನಾ, ವಿಜಯ ಪ್ರಕಾಶ, ಸಂಚಿತ್‌ ಹೆಗಡೆ, ಸುಧಾರಾಣಿ, ಅಚ್ಯುತಕುಮಾರ ಭಾಗವಹಿಸಲಿದ್ದಾರೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ ಕೂಡ ಆಗಮಿಸಲಿದ್ದಾರೆ ಎಂದರು.ಯುವ ಸಿನಿಮಾ ಪಕ್ಕಾ ಕೌಟುಂಬಿಕ ಸಿನಿಮಾ. ಎಲ್ಲ ಮೆಚ್ಚುವ ಸಿನಿಮಾ ಇದು. ಪುನೀತ್ ಅಭಿಮಾನಿಗಳು ಕೂಡ ಕಾತುರದಿಂದ ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಹೊಂಬಾಳೆ ಸಂಸ್ಥೆಯ ಈ ಸಿನಿಮಾ ಯಶಸ್ಸು ಸಾಧಿಸಲಿದೆ ಎಂಬ ಆಶಾಭಾವ ಇದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ ಎಂದರು.ಹೊಂಬಾಳೆ ಸಂಸ್ಥೆಯ ಮನೋಹರ್, ಪುನೀತ್ ಅಭಿಮಾನಿಗಳಾದ ಕುಮಾರ, ಬಸವರಾಜ, ಹನುಮಂತ, ನಾಣಿಕೇರಿ ಸದಾಶಿವ, ಜೋಗಿ ತಾಯಪ್ಪ, ಅಂಜಿ, ಮೂರ್ತಿ, ಮಹಾಂತೇಶ, ಪ್ರಿಯಾಂಕಾ, ಪೆನ್ನಪ್ಪ, ವಿನೋದ್ ಮತ್ತಿತರರಿದ್ದರು.