Deputy Superintendent of Police M.Suresh stated that young people should avoid drug addiction and build a bright future for themselves.

-ಗುರುಮಠಕಲ್‌ : ''''''''ಬೇಡ ಬ್ರೋ ಡ್ರಗ್ಸ್'''''''' ಜಾಗೃತಿ ಕಾರ್ಯಕ್ರಮ

---

ಕನ್ನಡಪ್ರಭ ವಾರ್ತೆ ಗುರುಮಠಕಲ್

ಯುವಕರು ಮಾದಕ ವ್ಯಸನಕ್ಕೆ ಒಳಗಾಗದೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಪೊಲೀಸ್ ಉಪಾಧೀಕ್ಷಕರಾದ ಎಂ. ಸುರೇಶ್ ಹೇಳಿದರು.

ವಿಎನ್ಆರ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ''''''''''''''''''''''''''''''''ಬೇಡ ಬ್ರೋ ಡ್ರಗ್ಸ್'''''''''''''''''''''''''''''''' ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ವಿವಿಧ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಮಾಡಿದಾಗ 7,000ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಗಳು ದಾಖಲು, ಮುಂದಿನ ದಿನಮಾನದಲ್ಲಿ ಪರೀಕ್ಷೆ ಮಾಡಿದರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಮಾದಕ ವಸ್ತುಗಳನ್ನು ಇಂಜೆಕ್ಷನ್ ಮೂಲಕ ಸೇವಿಸುವಾಗ ಸೋಂಕಿತ ಸಿರಿಂಜ್ಗಳನ್ನು ಹಂಚಿಕೊಂಡ ಬಳಸುವುದರಿಂದ ಎಚ್ಐವಿ ಸೇರಿದಂತೆ ಗಂಭೀರ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ವೈದ್ಯಾಧಿಕಾರಿ ಡಾ. ನೀಲಾಂಬಿಕಾ ಮಣ್ಣೂರ್, ಡ್ರಗ್ಸ್ ಸೇವನೆಯಿಂದ ಮೆದುಳಿನಲ್ಲಿ ಡೋಪಮಿನ್ ಎಂಬ ನ್ಯೂರೋಟ್ರಾನ್ಸ್ಮಿಟ್ಟರ್ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ನಿರಂತರವಾಗಿ ಡ್ರಗ್ಸ್ ಸೇವಿಸುವುದರಿಂದ ವ್ಯಸನ ಉಂಟಾಗಿ, ಮೆದುಳಿನ ನಿಷ್ಕ್ರಿಯ, ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ತಿಳಿಸಿದರು.

ಮಾನಸಿಕ ಖಿನ್ನತೆ, ಆತಂಕ, ಭಯ ಹಾಗೂ ಕೌಟುಂಬಿಕ ಸಮಸ್ಯೆಗಳಂತಹ ಮಾನಸಿಕ ಆರೋಗ್ಯ ಸಂಬಂಧಿತ ತೊಂದರೆಗಳಿದ್ದರೆ ಆರೋಗ್ಯ ಇಲಾಖೆಯ ವತಿಯಿಂದ ‘ಟೆಲಿ ಮಾನಸ್ ‘ ಉಚಿತ ಸಹಾಯವಾಣಿ 14416ಕ್ಕೆ ಕರೆ ಮಾಡಿ ತಜ್ಞರ ಸಲಹೆ ಹಾಗೂ ನೆರವು ಪಡೆಯಬಹುದು ಎಂದು ತಿಳಿಸಿದರು.

ನಾಗಭೂಷಣ ಶೆಟ್ಟಿ ಮಾತನಾಡಿ, ಪ್ರೌಢಶಾಲಾ ಹಂತದಿಂದಲೇ ಕೆಲ ಮಕ್ಕಳು ಮತ್ತು ಯುವಕರು ಮಾದಕ ವ್ಯಸನದ ಪಿಡುಗಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿ ಜೀವನ ಮತ್ತು ಆರೋಗ್ಯ ಎರಡೂ ಹಾಳಾಗುತ್ತವೆ ಎಂದು ಹೇಳಿದರು.

ಮಾದಕ ವಸ್ತು ವಿರೋಧಿ ಜಾಗೃತಿ ಪೋಸ್ಟರ್‌ ಬಿಡುಗಡೆ ಬಳಿಕ ಮಕ್ಕಳಿಗೆ ಪ್ರತಿಜ್ಞೆಯನ್ನು ಮಾಡಿದರು

ಈ ಸಂದರ್ಭದಲ್ಲಿ ಪಿಐ ದೌಲತ್ ಎನ್.ಕೆ., ಪಿಎಸ್ಐಯಾದ ಭೀಮರಾಯ, ಎ.ಎಸ್. ಶಾಬಾದಿ, ಗ್ರೇಡ್-1 ತಹಶೀಲ್ದಾರ್ ನರಸಿಂಹಸ್ವಾಮಿ, ರಾಜ್ಯ ತರಬೇತಿದಾರ ಹಣಮಂತರಾವ್ ಗೋಗ್ಳೆ, ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ್, ನಿರೂಪಕಿ ಜ್ಯೋತಿಲತಾ ತಡಿಬಿಡಿ, ವಿರೂಪಾಕ್ಷ ಮಾಲಿ ಪಾಟೀಲ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗುರುಮಠಕಲ್ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

-

ಕೋಟ್-1 : ಪ್ರತಿ ಕಾಲೇಜಿನಲ್ಲೂ ಡ್ರಗ್ಸ್ ತಡೆ ಸಮಿತಿ ರಚನೆ ಮಾಡುತ್ತಿದ್ದೇವೆ, ಮಾದಕ ವಸ್ತುಗಳ ಬಳಕೆ ಅಥವಾ ಮಾರಾಟದ ಬಗ್ಗೆ ಮಾಹಿತಿ ಕಂಡು ಬಂದರೆ, ಅದನ್ನು ಸಮಿತಿ ಅಥವಾ ಪೊಲೀಸ್ ಇಲಾಖೆಗೆ ತಿಳಿಸುವುದು.

-ಎಂ. ಸುರೇಶ ಡಿವೈಎಸ್ಪಿ, ಯಾದಗಿರಿ.

-

4ವೈಡಿಆರ್‌11 : ಗುರುಮಠಕಲ್‌ ಪಟ್ಟಣದ ವಿಎನ್ಆರ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ''''''''''''''''''''''''''''''''ಬೇಡ ಬ್ರೋ ಡ್ರಗ್ಸ್'''''''''''''''''''''''''''''''' ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಉಪಾಧೀಕ್ಷಕರಾದ ಉದ್ಘಾಟಿಸಿ, ಮಾತನಾಡಿದರು.

-

4ವೈಡಿಆರ್12 : ಗುರುಮಠಕಲ್‌ ಪಟ್ಟಣದ ವಿಎನ್ಆರ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ''''''''''''''''''''''''''''''''ಬೇಡ ಬ್ರೋ ಡ್ರಗ್ಸ್'''''''''''''''''''''''''''''''' ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು.