ಸಾರಾಂಶ
ಆಲಮಟ್ಟಿ: ಇಂದು ಯುವಜನತೆ ಒಂದಿಷ್ಟು ಒಳ್ಳೆಯ ಮೌಲ್ಯಾಧಾರಿತ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನ ಪಥದಲ್ಲಿ ಸಾಗಬೇಕು. ಆದರ್ಶಗಳಿಲ್ಲದಿದ್ದರೆ ಬದುಕಿಗೆ ಅರ್ಥವೇ ಇಲ್ಲ ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.
ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆ ಎಂ.ಎಚ್.ಎಂ.ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶುಭಕೋರುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳೆಂದರೆ ಪುಟಿಯುವ ಶಕ್ತಿ ಹೊಂದಿರುವ ಅದ್ಬುತ ಚೆಂಡುಗಳು ಇದ್ದಹಾಗೆ. ಆ ನಿಟ್ಟಿನಲ್ಲಿ ಮಕ್ಕಳು ಕೂಡ ಸರಿಯಾಗಿ ವಿದ್ಯಾಭ್ಯಾಸದ ಸಾಧನೆಯ ದಾರಿಯಲ್ಲಿ ಸಾಗಬೇಕು. ಉತ್ತಮ ಪ್ರಗತಿ, ಸಾಧನೆಗೆ ಸಮಾಜವೇ ಎದ್ದುನಿಂತು ಪ್ರೋತ್ಸಾಹಿಸುತ್ತದೆ. ಅಂಥದೊಂದು ಉತ್ಕಟ ಬದುಕನ್ನು ಯುವಜನತೆ ಕಟ್ಟಿಕೊಳ್ಳಬೇಕು ಎಂದರು.ಎಂಜಿನಿಯರ್ ದಸ್ತಗೀರಸಾಬ್ ಮೇಲಿನಮನಿ ಮಾತನಾಡಿ, ಶಾಲೆಗಳಲ್ಲಿ ಉತ್ತಮವಾದ ಸರಿಯಾದ ವಾತಾವರಣ ಇರಬೇಕು. ಧನ ಹಾಗೂ ವಿದ್ಯೆ ಸದ್ವಿನಿಯೋಗವಾಗಬೇಕು. ಜನರ ಸಮಸ್ಯೆ, ಕಷ್ಟ ನೋವು, ನಲಿವು ಅಲಿಸುವ ಭಾವ ಮೂಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ವಾಲಿಕಾರ, ಸದಸ್ಯ ಮುಬಾರಕ ಬಾಗಲಕೋಟ, ಪತ್ರಕರ್ತ ನೀಲೇಶ ಗಾಂಧಿ ಪಾಲ್ಗೊಂಡಿದ್ದರು. ಪ್ರತಿಭಾವಂತೆ ವಿದ್ಯಾರ್ಥಿನಿ ಅಶ್ವಿನಿ ಮುತ್ತಲದಿನ್ನಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಂತಾ ಪೂಜಾರಿ, ಬಸವರಾಜ ತಳವಾರ, ರೂಪಾ ಮುತ್ತಗಿ ಅನಿಸಿಕೆ ಹಂಚಿಕೊಂಡರು. ಮುಖ್ಯ ಶಿಕ್ಷಕ ಎಸ್.ಐ.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಯು.ಎ.ಹಿರೇಮಠ, ಜಿ.ಎಂ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಕೆ.ಜಗದೇವಿ, ಸರಸ್ವತಿ ಈರಗಾರ, ವಿದ್ಯಾರ್ಥಿ ಪ್ರತಿನಿಧಿ ಸಚಿನ ಲಮಾಣಿ, ಮಹಿಳಾ ಪ್ರಧಾನಿ ಸೃಷ್ಠಿ ಬಡಿಗೇರ ಇತರರಿದ್ದರು. ಅಶ್ವಿನ ಮಾದರ ಸ್ವಾಗತಿಸಿದರು. ಮಹೇಶ ಶಾರಪದೆ ಪುಷ್ಪಾರ್ಚನೆ, ಸೌಜನ್ಯ ವಡ್ಡರ ಸಂಗಡಿಗರು ಸ್ವಾಗತ ಗೀತೆ ನಡೆಸಿಕೊಟ್ಟರು. ಭವಾನಿ ಕನಸೆ ವಂದಿಸಿದರು.