ಸಾರಾಂಶ
ಗುತ್ತಲ: ಮದುವೆಗೂ ಮುನ್ನ ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ. ನಿಲೇಶ್ ಎಂ.ಎನ್. ತಿಳಿಸಿದರು.
ಸಮೀಪದ ಜಿ.ವಿ. ಹಳ್ಳಿಕೇರಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಭವಿಷ್ಯದ ಆಸ್ತಿ ಯುವಕ- ಯುವತಿಯರು. ಆದ್ದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅವಶ್ಯ ಎಂದರು.ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರು ಮಾತನಾಡಿ, ಹದಿಹರೆಯದವರ ದೇಹದಲ್ಲಿ ಪ್ರಾಕೃತಿಕ ಬದಲಾವಣೆಗಳು ಸಹಜ. ಅದಕ್ಕೆ ಹೊಂದಿಕೊಂಡು ಬದುಕಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಂ.ಎಂ. ವಗ್ಗಣ್ಣನವರ ಮಾತನಾಡಿ, ದೇಶದ ಯುವಕರು ಸ್ವಾಮಿ ವಿವೇಕಾನಂದರ ಹಿತನುಡಿಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಸುಧಾಕರ್ ದೈವಜ್ಞ ರಕ್ತದಾನದ ದೃಢಸಂಕಲ್ಪ ಹಾಗೂ ಪ್ರತಿಜ್ಞಾ ವಿಧಿಯನ್ನುಬೋಧಿಸಿದರು. ಸಮುದಾಯ ಆರೋಗ್ಯ ಕೇಂದ್ರ ಗುತ್ತಲದ ಆಪ್ತ ಸಮಾಲೋಚಕ ನಾಗರಾಜ ಇಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿ.ವಿ. ಹಳ್ಳಿಕೇರಿ ಕಾಲೇಜಿನ ಪ್ರಾಂಶುಪಾಲರಾದ ಎಫ್.ಐ. ಶಿಗ್ಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಪುಟ್ಟನಗೌಡ್ರು, ಉಪನ್ಯಾಸಕ ವೈ.ಇ. ಸವೂರ ಇತರರು ಇದ್ದರು. ಇಂದಿನಿಂದ ತಾಲೂಕು, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಹಾವೇರಿ: 2025- 26ನೇ ಸಾಲಿನ ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಆ. 29ರಿಂದ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ತಾಲೂಕು ಮಟ್ಟದ ದಸರ ಕ್ರೀಡಾಕೂಟ ಆ. 29ರಂದು ಬ್ಯಾಡಗಿ, ಆ. 30ರಂದು ರಾಣಿಬೆನ್ನೂರು, ಆ. 31ರಂದು ಶಿಗ್ಗಾಂವಿ, ಹಿರೇಕೆರೂರು, ಹಾವೇರಿ, ಸೆ. 1ರಂದು ರಟ್ಟೀಹಳ್ಳಿ, ಸೆ. 2ರಂದು ಹಾನಗಲ್ಲ ಹಾಗೂ ಸೆ. 3ರಂದು ಸವಣೂರು ತಾಲೂಕಿನಲ್ಲಿ ಜರುಗಲಿದೆ. ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್ ಹಾಗೂ ಯೋಗಾಸನ ಕ್ರೀಡೆಗಳನ್ನು ಆಯೋಜಿಸಲಾಗುವುದು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸೆ. 6 ಮತ್ತು 7ರಂದು ನಗರದಲ್ಲಿ ಜರುಗಲಿದೆ. ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಬಾಸ್ಕೇಟ್‌ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಬಾಲ್, ಟೆಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಯೋಗಾಸನ ಕ್ರೀಡಾಕೂಟ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟೆನ್ನಿಸ್, ನೆಟ್‌ಬಾಲ್ ಹಾಗೂ ಈಜು ಕ್ರೀಡೆಗೆ ಆಯ್ಕೆ ಮಾಡಲಾಗುವುದು.