ವಿದ್ಯಾರ್ಥಿಗಳು ಕಾಲೇಜಿನಲ್ಲಿ ಯೂತ್ ರೆಡ್‌ಕ್ರಾಸ್‌ಗೆ ಸೇರ್ಪಡೆಯಾಗುವುದರಿಂದ ಭವಿಷ್ಯದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದು ಯೇನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ನಿತ್ಯಶ್ರೀ ಬಿ.ವಿ. ಹೇಳಿದರು.
ಮಂಗಳೂರು : ವಿದ್ಯಾರ್ಥಿಗಳು ಕಾಲೇಜಿನಲ್ಲಿ ಯೂತ್ ರೆಡ್‌ಕ್ರಾಸ್‌ಗೆ ಸೇರ್ಪಡೆಯಾಗುವುದರಿಂದ ಭವಿಷ್ಯದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದು ಯೇನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ನಿತ್ಯಶ್ರೀ ಬಿ.ವಿ. ಹೇಳಿದರು.
ನಗರದ ಕೂಳೂರಿನ ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಯೂತ್ ರೆಡ್‌ಕ್ರಾಸ್ ಮಾಹಿತಿ ಕಾರ್ಯಕ್ರಮ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪಿ.ಬಿ.ಹರೀಶ್ ರೈ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ನಾರಾಯಣ ಸುಕುಮಾರ್ ಎ., ಪ್ರೊ.ಶರೀನಾ ಪಿ., ವಿಭಾಗ ಮುಖ್ಯಸ್ಥರಾದ ಡಾ.ರತ್ನಾಕರ ಶೆಟ್ಟಿ, ನೀಕ್ಷಿತಾ ವಿ.ಶೆಟ್ಟಿ, ಮಹಮ್ಮದ್ ಶಹೀದ್, ಕಾರ್ಯಕ್ರಮ ಸಂಯೋಜಕರಾದ ಡಾ.ಸುರೇಶ್ ಶೆಟ್ಟಿ, ಡಾ.ಡಿ.ಬಿಂದು, ಸೌಮ್ಯ ಜಿ. ಮತ್ತಿತರರು ಇದ್ದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ಯೇನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಹರಿನಾರಾಯಣನ್ ಎ. ಪ್ರಥಮ ಚಿಕಿತ್ಸೆ ತರಬೇತಿ ನೀಡಿದರು. ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ಜ್ಯೋತಿ ಡಿ.ಸ್ವಾಗತಿಸಿದರು. ಪಿನಾಕಿನಿ ನಿರೂಪಿಸಿದರು.