ಸಾರಾಂಶ
ಇಂದಿನ ಪ್ರತಿಯೊಬ್ಬ ಯುವಕರು ವಿಶ್ವ ಗುರು ಬಸವಣ್ಣವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ನರಗುಂದ: ಇಂದಿನ ಪ್ರತಿಯೊಬ್ಬ ಯುವಕರು ವಿಶ್ವ ಗುರು ಬಸವಣ್ಣವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಶಿರೋಳದ ತೋಂಟದಾರ್ಯ ಮಠದಲ್ಲಿ ಬಸವ ಪುರಾಣ ನಿಮಿತ್ತ ಕೂಡಲಸಂಗಮದಿಂದ ಬಸವ ಜ್ಯೋತಿ ವಾಹನವನ್ನು ಬರ ಮಾಡಿಕೊಂಡು ಆನಂತರ ಮಾತನಾಡಿ, ಹಿಂದಿನಿಂದಲೂ ಕಲ್ಯಾಣ ಕರ್ನಾಟಕ ಭಾಗ ಶರಣರು ಜನ್ಮ ತಾಳಿದ ನಾಡಾಗಿದೆ. ವಿವಿಧ ಸಮುದಾಯದ ಶರಣರನ್ನು ಅನುಭವ ಮಂಟಪದಲ್ಲಿ ಸೇರಿಸಿ ಈ ಜಗದ ಉದ್ಧಾರಕ್ಕೆ ಶ್ರಮಿಸಿದ ಬಸವಣ್ಣವರ ಕಾರ್ಯ ದೊಡ್ಡದು ಎಂದು ಹೇಳಿದರು.ಈ ಪುರಾಣ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಬಸವಣ್ಣವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೂಡಲಸಂಗಮದಿಂದ ವಾಹನ ಮೂಲಕ ಬಂದ ಜ್ಯೋತಿ ಮೂಲಕ ಬಸವ ಪುರಾಣ ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ಉಮೇಶಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ದ್ಯಾಮಣ್ಣ ಕಾಡಪ್ಪನವರಿ, ಬಿ.ಆರ್. ಸಾಲಿಮಠ, ಲಾಲಸಾಬ ಅರಗಂಜಿ, ಆರ್.ಐ. ನದಾಫ್, ಹನಮಂತ ಕಾಡಪ್ಪನವರ, ಶಿಕ್ಷಕ ಮಹಾಂತೇಶ ಹಿರೇಮಠ, ನಿಂಗಪ್ಪ ಗಾಡಿ, ವೀರಯ್ಯ ದೊಡ್ಡಮನಿ, ವೆಂಕಪ್ಪ ಶಾಂತಗೇರಿ, ಕುಮಾರ ಮರಿಗುದ್ದಿ, ದೇವೇಂದ್ರಪ್ಪ ಶಾಂತಗೇರಿ, ಬಸವರಾಜ ಕುರಿ, ಗುರುಬಸಯ್ಯ ನಾಗಲೋಟಿಮಠ ಕಾರ್ಯಕ್ರಮದ ವಿವಿಧ ಸಮಿತಿಯ ಪದಾಧಿಕಾರಿಗಳು ಇದ್ದರು.