ಸಾರಾಂಶ
ಶಿಗ್ಗಾಂವಿ: ಸ್ವಾತಂತ್ರ‍್ಯಕ್ಕಾಗಿ ನಮ್ಮ ಪೂರ್ವಜರು ಸಾಕಷ್ಟು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ದೇಶದ ಅಭಿವೃದ್ಧಿ ಚಿಂತನೆ, ಆಗು ಹೋಗುಗಳ ಬಗೆಗೆ ಯುವಕರು ಆಸಕ್ತಿ ವಹಿಸಬೇಕು ಎಂದು ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.ತಾಲೂಕಿನ ಕುನ್ನೂರು ಗ್ರಾಮದಲ್ಲಿ ಭಗತ್ ಸಿಂಗ್ ಯುವಕ ಮಂಡಳದಿಂದ ಆಯೋಜಿಸಲಾದ ಭಗತ್ ಸಿಂಗ್ ಅವರ ೧೧೭ನೇ ಜಯಂತ್ಯುತ್ಸವ ಹಾಗೂ ನೂತನ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಸ್ವಾತಂತ್ರ‍್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಹೀಗೆ ದೇಶಕ್ಕಾಗಿ ಹೋರಾಡಿದ ಹಲವಾರು ಮಹನೀಯರ ಆದರ್ಶ ಯುವಕರಿಗೆ ಬರಲಿ ಎಂದರು.ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಭಾರತ ಎಲ್ಲರಿಗೂ ಸ್ಫೂರ್ತಿ ನೀಡುವಂತ ದೇಶ, ವಿಶೇಷ ಸಂಸ್ಕೃತಿ ಹೊಂದಿರುವಂತದ್ದು, ದೇಶದ ರಕ್ಷಣೆಗಾಗಿ ಹೋರಾಡಿದ ಮಹಾತ್ಮರನ್ನು ನೆನೆಸಿಕೊಂಡು ಆರಾಧಿಸಿ, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ ಗೋಕಾಕ, ನವೀನ ಸಾಸನೂರ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ ಮಾತನಾಡಿದರು.
ಸೋಮಯ್ಯನವರ ಹಿರೇಮಠ ಅವರು ಸಾನಿಧ್ಯ ವಹಿಸಿದ್ದರು. ಜೋಡಿ ಬಸವೇಶ್ವರ ಜನಪದ ಕಲಾ ತಂಡದ ಕಲಾವಿದರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಿದ್ದಪ್ಪ ಹದ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಕಾಂತವ್ವ ಮೊರಬದ, ಸದಸ್ಯರಾದ ಮರಿಯವ್ವ ಬಸರಿಕಟ್ಟಿ, ಬಸನಗೌಡ ಬ್ಯಾಹಟ್ಟಿ, ಶಿಗ್ಗಾಂವಿ ಉದ್ಯಮಿ ರಾಘವೇಂದ್ರ ದೇಶಪಾಂಡೆ, ಗ್ರಾಮದ ಹಿರಿಯರಾದ ವರ್ಧಮಾನ ಶೆಟ್ಟಪ್ಪನವರ, ರಾಯಪ್ಪ ಸಾವಂತಣ್ಣವರ, ಯಲ್ಲಪ್ಪ ನವಲೂರ, ಸುರೇಶಗೌಡ ಪಾಟೀಲ, ಮೈಲಾರಪ್ಪ ಮಮದಾಪುರ, ಕಲ್ಲಪ್ಪ ಬೀರವಳ್ಳಿ, ಮೈಲಾರಪ್ಪ ಇಂದೂರ, ಅಶೋಕ ಮರಿಸಿದ್ದಣ್ಣವರ, ಭೀಮಪ್ಪ ಬಾರ್ಕಿ, ಹಾರುನ್ ಜಿಗಳೂರ, ಆಸ್ಪಕಲಿ ಮತ್ತೇಖಾನ ಭಗತ್ ಸಿಂಗ್ ಯುವಕ ಮಂಡಳದ ಖಜಾಂಚಿ ಗುರುನಾಥಗೌಡ ಪಾಟೀಲ, ಕಾರ್ಯದರ್ಶಿ ದಾದಾಪೀರ ಸಂಶಿ, ಸದಸ್ಯರಾದ ನಾಗರಾಜ ಶೆಟ್ಟಪ್ಪನವರ, ಮಹಾಲಿಂಗಸ್ವಾಮಿ ಹಿರೇಮಠ, ಮಂಜುನಾಥ ಕರಡಿ, ರಾಘವೇಂದ್ರ ಗುಂಡಣ್ಣವರ, ಕಿರಣ ಮರಿಸಿದ್ದಣ್ಣವರ, ಸಚೀನ ಬೀರವಳ್ಳಿ, ಹನುಮಂತ ಮಣಕಟ್ಟಿ, ಸಂತೋಷ ಓಲೇಕಾರ, ಸಾಧಿಕ ಮತ್ತೇಖಾನ, ಸಲ್ಮಾನಖಾನ ಹೊಸೂರ, ಚೌಡೇಶ್ವರ ಮಣಕಟ್ಟಿ ಸೇರಿದಂತೆ ಇತರರಿದ್ದರು. ಜಾನಪದ ಕಲಾವಿದ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಭಗತ್ ಸಿಂಗ್ ಯುವಕ ಮಂಡಳದ ಅಧ್ಯಕ್ಷ ಈರಣ್ಣ ಓಲೇಕಾರ ಸ್ವಾಗತಿಸಿದರು. ಉಪಾಧ್ಯಕ್ಷ ಬಸವರಾಜ ದೊಡ್ಡಮನಿ ವಂದಿಸಿದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಭಗತ್ ಸಿಂಗ್ ಯುವಕ ಮಂಡಳದ ಅಧ್ಯಕ್ಷ ಈರಣ್ಣ ಓಲೇಕಾರ ಸ್ವಾಗತಿಸಿದರು. ಉಪಾಧ್ಯಕ್ಷ ಬಸವರಾಜ ದೊಡ್ಡಮನಿ ವಂದಿಸಿದರು,