ಸಾರಾಂಶ
ಸೂಲಿಬೆಲೆ: ಭಾರತ ಬಲಿಷ್ಠ ದೇಶವಾಗಬೇಕಾದರೆ ಯುವ ಸಮುದಾಯ ದೇಶದ ಬಗ್ಗೆ ಚಿಂತಿಸಬೇಕು. ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಯುವಕರ ಪಾತ್ರ ಅವಶ್ಯ ಎಂದು ಸೂಲಿಬೆಲೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಶಂಕರಪ್ಪ ಹೇಳಿದರು.
ಸೂಲಿಬೆಲೆ: ಭಾರತ ಬಲಿಷ್ಠ ದೇಶವಾಗಬೇಕಾದರೆ ಯುವ ಸಮುದಾಯ ದೇಶದ ಬಗ್ಗೆ ಚಿಂತಿಸಬೇಕು. ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಯುವಕರ ಪಾತ್ರ ಅವಶ್ಯ ಎಂದು ಸೂಲಿಬೆಲೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಶಂಕರಪ್ಪ ಹೇಳಿದರು.
ಬೆಂಗಳೂರು ಜಿಲ್ಲಾ ಪೊಲೀಸ್ ಹಾಗೂ ಸೂಲಿಬೆಲೆ ಪೊಲೀಸ್ ಠಾಣೆ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳು ಒಂದು ಸಾಮಾಜಿಕ ಪಿಡುಗು ಆಗಿದ್ದು ಇದನ್ನು ನಿಯಂತ್ರಣ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಕೈಜೋಡಿಸಿದರೆ ಇದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಮಾದಕ ವ್ಯಸನದಿಂದ ಸಮಾಜದಲ್ಲಿ ಆಶಾಂತಿ ನಿರ್ಮಾಣವಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ನಾಶದಂತಹ ಪ್ರಕರಣಗಳು ದಾಖಲಾಗುತ್ತದೆ. ಇದರಿಂದ ಸಾಮಾಜಿಕ ಸ್ವಾಸ್ತ್ಯ ಹಾಗೂ ಯುವಜನತೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ದೇಶದ ಯುವ ಶಕ್ತಿ ಕ್ಷೀಣಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮದ್ಯಪಾನ, ರಸ್ತೆ ಸಾರಿಗೆ ನಿಯಮಗಳು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ, ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಕಾಲೇಜು ಪ್ರಾಚಾರ್ಯ ಸುಬ್ರಮಣಿ, ಸಹಾಯಕ ಇನ್ಸ್‌ಪೆಕ್ಟರ್ ನಟರಾಜ್, ಮೂರ್ತಿ, ಅಸ್ಕಿ, ಉಪನ್ಯಾಸಕರಾದ ಕುಮಾರ್, ರೇಷ್ಮಾ, ಶ್ರೀಕೃಪಾ, ನಾಗರಾಜ್, ಸರಸ್ವತಿ, ಶಿವಕುಮಾರ್, ರೂಪ, ಮುನಿಲಕ್ಷ್ಮಮ್ಮ ಇತರರಿದ್ದರು.
ಚಿತ್ರ; ೨೬ ಸೂಲಿಬೆಲೆ ೦೧ ಜೆಪಿಜೆ ನಲ್ಲಿದೆ