ಪದವಿ ನಂತರ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿ. ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಮತ್ತು ಬಾಂಧವ್ಯದ ಬೆಸುಗೆ ಬೆಸೆಯುವ ಮನೋಭಾವನೆ ಯುವಕರು ಬೆಳೆಸಿಕೊಳ್ಳಬೇಕು ಎಂದು ಡಾ. ನಾಗರಾಜ್ ದ್ಯಾಮನಕೊಪ್ಪ ಹೇಳಿದರು.

ಶಿಗ್ಗಾಂವಿ: ಪದವಿ ನಂತರ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿ. ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಮತ್ತು ಬಾಂಧವ್ಯದ ಬೆಸುಗೆ ಬೆಸೆಯುವ ಮನೋಭಾವನೆ ಯುವಕರು ಬೆಳೆಸಿಕೊಳ್ಳಬೇಕು ಎಂದು ಡಾ. ನಾಗರಾಜ್ ದ್ಯಾಮನಕೊಪ್ಪ ಹೇಳಿದರು.

ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಶಿಗ್ಗಾಂವಿ ಮಹಾವಿದ್ಯಾಲಯದ ೨೦೨೫-೨೬ನೇ ಸಾಲಿನ ಕಾಲೇಜು ಒಕ್ಕೂಟ ಮತ್ತು ವಿವಿಧ ಸಂಘಗಳ ಮತ್ತು ಎನ್. ಎಸ್. ಎಸ್. ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧನೆಗೈದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ, ಕ್ರೀಡಾ ಸಿರಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಗಳ ಪ್ರಶಸ್ತಿಗಳನ್ನು ನೀಡಲಾಯಿತು. ೨೦೨೫- ೨೬ನೇ ಸಾಲಿನ ವರದಿ ಮಂಡಿಸಿ ಮಾತನಾಡಿದ ಡಾ. ಬಿ.ವೈ. ತೊಂಡಿಹಾಳ್ ಅವರು ಕಾಲೇಜಿನ ಸಾಧನೆ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ. ರೆ. ಶಿ. ಪ್ರತಿಷ್ಠಾನದ ಆಡಳಿತಾಧಿಕಾರಿ ಲಿಂಗಯ್ಯ ಎ. ಹಿರೇಮಠ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಆರ್‌ಜೆವಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಫ್. ಎಸ್. ಶಿವಣ್ಣವರ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಮತ್ತು ಕಾಲೇಜು ಒಕ್ಕೂಟ ಕಾರ್ಯಾಧ್ಯಕ್ಷ ಡಾ. ಎಚ್. ಕೆ. ವಿನಯ ಅವರು ಹಾಗೂ ಎನ್. ಎಸ್. ಎಸ್. ಕಾರ್ಯಕ್ರಮಧಿಕಾರಿಗಳಾದ ಡಾ. ಆರ್. ಸಿ. ದಾದುಗೌಡರ ಮತ್ತು ಸರ್ವಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬಸಮ್ಮ ಸತ್ಯಪ್ಪನವರ್ ಮತ್ತು ವೀರೇಶಗೌಡ ಪಾಟೀಲ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಅಂಜಲಿ ಡವಗಿ ವಂದಿಸಿದರು. ಮಧ್ಯಾಹ್ನದ ನಂತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.