ಸಾರಾಂಶ
ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಯುವ ಜನಾಂಗ ಸಂಸ್ಕಾರವಂತರಾಗಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ನುಗ್ಗೇಹಳ್ಳಿ ಹೋಬಳಿಯ ಸೋಸಲಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾಲಭೈರವೇಶ್ವರ ಸ್ವಾಮಿ ನೂತನ ಸ್ಥಿರ ವಿಗ್ರಹ ಪ್ರತಿಷ್ಠಾಪನೆ ಮತ್ತು ಶ್ರೀ ಆಂಜನೇಯ ಸ್ವಾಮಿ ನೂತನ ದೇಗುಲ ಜೀರ್ಣೋದ್ಧಾರ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿದರು.
ಕಾಲಭೈರವೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಯುವ ಜನಾಂಗ ಸಂಸ್ಕಾರವಂತರಾಗಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಸೋಸಲಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾಲಭೈರವೇಶ್ವರ ಸ್ವಾಮಿ ನೂತನ ಸ್ಥಿರ ವಿಗ್ರಹ ಪ್ರತಿಷ್ಠಾಪನೆ ಮತ್ತು ಶ್ರೀ ಆಂಜನೇಯ ಸ್ವಾಮಿ ನೂತನ ದೇಗುಲ ಜೀರ್ಣೋದ್ಧಾರ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.
ಆಧ್ಯಾತ್ಮ ಜ್ಞಾನ ಭಾರತದ ಉಸಿರು, ಸಂಸ್ಕೃತಿ, ಸಭ್ಯತೆ, ಸಾಮರಸ್ಯ ಬೆಳೆಸುವುದೇ ಧರ್ಮದ ಗುರಿಯಾಗಬೇಕು. ತಂದೆ ತಾಯಂದಿರು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.ತೋಟಿ ಏತ ನೀರಾವರಿ ಯೋಜನೆಯ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ಈ ಭಾಗದ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲಾಗುವುದು. 1 ಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ಆಂಜನೇಯ ಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ 2 ಲಕ್ಷ ರು. ಹಣ ನೀಡಲಾಗಿದೆ. 3 ಲಕ್ಷ ರು. ಅನುದಾನ ಕೊಡಿಸಲಾಗುವುದು. ಗ್ರಾಮದ ಅಭಿವೃದ್ಧಿಗೆ ಶುದ್ಧ ನೀರಿನ ಘಟಕ, ಡಾಂಬರ್ ರಸ್ತೆ, ಡೈರಿ ಕಟ್ಟಡ, ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್. ಪಿ. ನವೀನ್ ಕುಮಾರ್, ದೇಗುಲ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್. ಜೆ.ವಾಸುದೇವ್, ಮುಖಂಡರಾದ ತೋಟಿ ನಾಗರಾಜ್, ಜೆ. ಮಾವಿನಳ್ಳಿ ಸುರೇಶ್, ಭೀಮೇಶ್, ಎಸ್.ಜೆ. ವಿಶ್ವನಾಥ್, ಮಧು, ಚೇತನ್, ದಿಲೀಪ್, ಯದು ನಂದನ್, ಹರೀಶ್, ಎಸ್.ಎಮ್. ಶಂಕರ್, ಭುವನೇಶ್, ಅಂಗಡಿ ಕೃಷ್ಣಮೂರ್ತಿ, ಎಸ್.ಪಿ.ಚಂದ್ರಶೇಖರ್ ಇದ್ದರು.ಶ್ರೀ ಆಂಜನೇಯ ಸ್ವಾಮಿ ದೇಗುಲದ ಜೀರ್ಣೋದ್ಧಾರ ವಿಮಾನ ಗೋಪುರ ಲೋಕಾರ್ಪಣೆಯ ಧಾರ್ಮಿಕ ಸಮಾರಂಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಜೀರ್ಣೋದ್ಧಾರ ಸಮಿತಿಯ ಸದಸ್ಯರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.