ಯುವಕರು ಸಮಯ ವ್ಯರ್ಥ ಮಾಡಬೇಡಿ: ಶರಣು ಗೌರೆ

| Published : Mar 06 2024, 02:17 AM IST

ಸಾರಾಂಶ

ಯುವಕರು ಸಮಯ ವ್ಯರ್ಥ ಮಾಡಬಾರದು. ಆಟದ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೆತ್ತವರ ಕನಸು ನನಸು ಮಾಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಅಭಿಮಾನಿ ಬಳಗದ ತಾಲೂಕು ಘಟಕ ಅಧ್ಯಕ್ಷ ಶರಣು ಗೌರೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಯುವಕರ ಜೀವನ ಬಂಗಾರ ಇದ್ದಂತೆ. ಈ ಸಮಯ ಮತ್ತೆ ಬರುವುದಿಲ್ಲ. ಹೀಗಾಗಿ ಯುವಕರು ಸಮಯ ವ್ಯರ್ಥ ಮಾಡಬಾರದು. ಆಟದ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೆತ್ತವರ ಕನಸು ನನಸು ಮಾಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಅಭಿಮಾನಿ ಬಳಗದ ತಾಲೂಕು ಘಟಕ ಅಧ್ಯಕ್ಷ ಶರಣು ಗೌರೆ ಹೇಳಿದರು.

ಹೊಳಕುಂದಾ ಗ್ರಾಮದ ಟೆನ್ನಿಸ್‌ ಬಾಲ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೊಳಕುಂದಾ ವರ್ಸಸ್ ಕಮಲಾಪುರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಹೊಳಕುಂದಾ ತಂಡ 22 ರನ್ ಅಂತರದಿಂದ ಜಯಗಳಸಿದಂತಹ ಕ್ರಿಕೆಟ್‌ ತಂಡಕ್ಕೆ ತಮ್ಮ ವೈಯಕ್ತಿಕ 31 ಸಾವಿರ ರು. ಬಹುಮಾನ ನಿಡಿ ಮಾತನಾಡಿದರು.

ಕ್ರೀಡೆ ಎಂದಮೇಲೆ ಸೋಲು-ಗೆಲುವು ಸಹಜ ಯುವಕರು ಯಾವುದೇ ರೀತಿಯ ಮನಸ್ತಾಪ ಮಾಡಿಕೊಳ್ಳದೆ ಎಲ್ಲರೂ ಸಹೋದರರಂತೆ ಕೂಡಿಕೊಂಡು, ಅರಿತು ಬೆರೆತು ಜಗಳವಾಗದಂತೆ, ಕಾನೂನು, ನಿಮಗಳ ಪ್ರಕಾರವಾಗಿ ಆಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಮಸ್ತಾನ ಚಿನ್ನಾ ಮಾತನಾಡಿ, ನಮ್ಮ ಗ್ರಾಮದ ಯುವಕರಿಗೆ ಕ್ರೀಡೆಗೆ ಸಹಕಾರ ನೀಡಿ ಪ್ರಥಮ ಬಹುಮಾನ ನೀಡಿರುವ ಶರಣು ಗೌರೆ, ದ್ವಿತೀಯ ಬಹುಮಾನ ನೀಡಿರುವ ಕಾಂಗ್ರೆಸ್ ಮುಖಂಡ ಸಂತೋಷ್ ಶಾಖ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಇನ್ನು ಎತರಕ್ಕೆ ಹೊಗಲ್ಲಿ ಎಂದು ನಮ್ಮೂರಿನ ಯುವಕರು ಹಾಗೂ ಗ್ರಾಮದ ಪರವಾಗಿ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.