ಯುವಕರು ದುಶ್ಚಟದಿಂದ ದೂರವಿರಿ: ಮಾಜಿ ಸಚಿವ ಎಸ್.ಆರ್.ಪಾಟೀಲ

| Published : Dec 16 2024, 12:47 AM IST

ಯುವಕರು ದುಶ್ಚಟದಿಂದ ದೂರವಿರಿ: ಮಾಜಿ ಸಚಿವ ಎಸ್.ಆರ್.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡ ಪ್ರಮಾಣದ ಗ್ಯಾಲರಿ ಹಾಕಿಸಿ ಬಾಡಗಂಡಿ ಕಬಡ್ಡಿ ವೈಭವ ಇಡೀ ತಾಲೂಕಿಗೆ ಮಾದರಿ ಆಗುವಂತೆ ಮಾಡೋಣ

ಕನ್ನಡಪ್ರಭ ವಾರ್ತೆ ಬೀಳಗಿ

ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ದುಶ್ಚಟಗಳಿಗೆ ಬಲಿಯಾಗದೆ, ವ್ಯಸನ ಮುಕ್ತರಾಗಿ ಸದೃಢ ಮತ್ತು ಆರೋಗ್ಯಕರ ದೇಹ ಹೊಂದಿ ಕ್ರೀಡೆಗಳಲ್ಲಿ, ಸಾಮಾಜಿಕ ಕೆಲಸಗಳೊಂದಿಗೆ ಉತ್ತಮ ಶಿಕ್ಷಣ ಪಡೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತ ತಂದೆ ತಾಯಿ ಹಾಗೂ ಊರಿನ ಕೀರ್ತಿ ಹೆಚ್ಚಿಸಬೇಕು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯುವಕ ಸಂಘ ಬಾಡಗಂಡಿ ಹಾಗೂ ಬಾಗಲಕೋಟೆ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ನಡೆದ ಬಾಡಗಂಡಿ ಕಬಡ್ಡಿ ವೈಭವ 50 ಕೆಜಿ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಮತ್ತು ಟಗರಿನ ಕಾಳಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ವರ್ಷದ ಈ ಬಾಡಗಂಡಿ ಕಬಡ್ಡಿ ವೈಭವ ಯಶಸ್ವಿಯಾಗಲಿ ಹಾಗೂ ಮುಂದಿನ ವರ್ಷ ದೊಡ್ಡ ಪ್ರಮಾಣದ ಗ್ಯಾಲರಿ ಹಾಕಿಸಿ ಬಾಡಗಂಡಿ ಕಬಡ್ಡಿ ವೈಭವ ಇಡೀ ತಾಲೂಕಿಗೆ ಮಾದರಿ ಆಗುವಂತೆ ಮಾಡೋಣ ಎಂದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸೋತ ತಂಡದವರು ಸೋಲೆ ಗೆಲುವಿನ ಸೋಪಾನ ಎನ್ನುವ ಮಾತು ನೆನಪಿಸಿಕೊಳ್ಳಬೇಕು. ಗೆದ್ದವರು ಇಲ್ಲಷ್ಟೆ ನಮ್ಮ ಕೆಲಸ ಮುಗಿಯಿತು ಅಂತಾ ಅಂದುಕೊಳ್ಳದೆ ನಿಮ್ಮ ಪ್ರದರ್ಶನವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತೊರಿಸಿದರೇ ಆಗ ನಾವು ಹುಟ್ಟಿದ ಮನೆತನದ ಹಾಗೂ ಹುಟ್ಟಿದ ಮಣ್ಣಿನ ಬಗ್ಗೆ ನಿಜವಾಗಿಯೂ ಗೌರವ ತಂದಂತೆ ಆಗುವುದು ಎಂದರು.

ಈ ವೇಳೆ ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಕುಂದರಗಿ ಚರಂತಿಮಠದ ವೀರಸಂಗಮೇಸ್ವರ ಶಿವಾಚಾರ್ಯರು, ಬಾಡಗಂಡಿ ಮಾತೊಶ್ರೀ ಬಸಮ್ಮತಾಯಿ, ಜಗದೀಶ ಸುರಗಿಮಠ, ರಾಮಸ್ವಾಮಿ ನಾಯ್ಕರ, ಎಂ.ಪಿ.ಪಾಟೀಲ, ದಯಾನಂದ ಪಾಟೀಲ, ಅರ್ಜುನ ಅನಗವಾಡಿ, ಶಂಭುಲಿಂಗಪ್ಪ ಬೆಳವಲ, ಈರಣ್ಣ ಅನಗವಾಡಿ, ರಂಗಪ್ಪ ಪೂಜಾರಿ, ವಿಠ್ಠಲ ಕವಳ್ಳಿ, ಗೌಡಪ್ಪಗೌಡ ಪಾಟೀಲ, ಸಿದ್ಲಿಂಗಪ್ಪ ನಾಯ್ಕರ ಹಾಗೂ ಬಾಡಗಂಡಿ ಗ್ರಾಪಂ ಸದಸ್ಯರು ಇದ್ದರು.