ಯುವ ಜನತೆ ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಅರಿತು ಅವುಗಳಿಂದ ದೂರವಿರಬೇಕು ಎಂದು ಪಾಲಿಬೆಟ್ಟ ಪೊಲೀಸ್ ಉಪ ಠಾಣಾಧಿಕಾರಿ ಎಎಸ್‌ಐ ಶ್ರೀನಿವಾಸ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಯುವ ಜನತೆ ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಅರಿತು ಅವುಗಳಿಂದ ದೂರವಿರಬೇಕು ಎಂದು ಪಾಲಿಬೆಟ್ಟ ಪೊಲೀಸ್ ಉಪ ಠಾಣಾಧಿಕಾರಿ ಎಎಸ್‌ಐ ಶ್ರೀನಿವಾಸ್ ಕರೆ ನೀಡಿದರು.

ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಾದಕ ವಸ್ತು ದುರುಪಯೋಗ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಸಾಮರ್ಥ್ಯ ಕುಂಠಿತವಾಗುವುದಲ್ಲದೆ, ವಿವಿಧ ಕಾಯಿಲೆಗಳು, ಕುಟುಂಬ ಕಲಹ ಹಾಗೂ ನೆಮ್ಮದಿ ಇಲ್ಲದ ಜೀವನ ಎದುರಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ರೀತಿಯ ಮಾದಕ ವಸ್ತುಗಳ ಚಟಕ್ಕೊಳಗಾಗಬಾರದು ಎಂದು ಸಲಹೆ ನೀಡಿದರು.

ಪೊಲೀಸ್ ಸಿಬ್ಬಂದಿಗಳಾದ ಅಲೀಬ್ ಹಾಗೂ ಸಜಿತ್ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಾಗೃತಿಯ ಅಗತ್ಯವನ್ನು ವಿವರಿಸಿದರು.

ಈ ಸಂದರ್ಭ ಶಿಕ್ಷಕರಾದ ಮಮತಾ ಕಾಮತ್, ನಯನ ಕುಮಾರಿ, ಮದನ್ ಕುಮಾರ್, ಆಶಾ ಮೋಹನ್, ಆರತಿ ಎಸ್.ಪಿ. ಹಾಗೂ ಆರತಿ ಬಿ.ಎಸ್. ಉಪಸ್ಥಿತರಿದ್ದರು.

ಇದೇ ವೇಳೆ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪಿರಿಯಾಪಟ್ಟಣದ ಶಿಕ್ಷಕರಾದ ಮಂಜುನಾಥ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಕ್ರೀಡಾ ಸಮವಸ್ತ್ರವನ್ನು ಎಎಸ್‌ಐ ಶ್ರೀನಿವಾಸ್ ವಿತರಿಸಿದರು.