ಸೂಕ್ತ ಮಾರ್ಗದರ್ಶನ ದೊರೆತರೆ ದೇಶದ ದೊಡ್ಡ ಶಕ್ತಿಯಾಗಿ ಯುವಜನತೆ: ಆನಂದ್‌

| Published : Jan 17 2024, 01:50 AM IST

ಸಾರಾಂಶ

ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಾಗಿರಬೇಕು. ಇನ್ನು ಕ್ರೀಡೆಯಲ್ಲಿ ಭಾಗವಹಿಸು ವುದರಿಂದ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಡಿ.ಆನಂದ್‌ ಕಿವಿಮಾತು ಹೇಳಿದರು.

- ರಾಷ್ಟ್ರೀಯ ಯುವ ದಿನಾಚರಣೆ, ಯುವ ಸಪ್ತಾಹ ಹಿನ್ನೆಲೆ ವಾಲಿಬಾಲ್ ಪಂದ್ಯಾವಳಿಕನ್ನಡಪ್ರಭ ವಾತೆ ಸಿರಿಗೆರೆ

ದೇಶದ ಶಕ್ತಿಯಂತಿರುವ ಯುವಜನತೆ ಸರಿಯಾದ ಮಾರ್ಗದರ್ಶನ ದೊರೆತಲ್ಲಿ ಅವರು ಬಹುದೊಡ್ಡ ಶಕ್ತಿಯಾಗಿ ಬೆಳೆಯುತ್ತಾರೆ ಎಂದು ಮಡಿಲು ಸಂಸ್ಥೆಯ ಕಾರ್ಯದರ್ಶಿ ಡಿ.ಆನಂದ್‌ ಅಭಿಪ್ರಾಯಪಟ್ಟರು.

ಸಮೀಪದ ದೊಡ್ಡಾಲಘಟ್ಟ ಗ್ರಾಮದಲ್ಲಿ ನೆಹರು ಯುವ ಕೇಂದ್ರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಸಪ್ತಾಹ ಅಂಗವಾಗಿ ಯುವಕರಿಗೆ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ ಯುವಕರ ಸಂಖ್ಯೆ ಗಣನೀಯವಾಗಿದೆ. ಅವರು ಆರೋಗ್ಯವಂತರಾದರೆ ದೇಶದ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಾಗಿರಬೇಕು. ಯುವಕರು ಪ್ರತಿಯೊಬ್ಬರು ಒಂದೊಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಮತ್ತು ದೇಹ ಸದೃಢವಾಗಿರುವಂತೆ ನೋಡಿ ಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಿ.ಬಿ.ವಿಜಯ್ ಕುಮಾರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ಗಳನ್ನು ನೀಡುವುದರ ಮೂಲಕ ಅವರನ್ನು ರಾಷ್ಟ್ರ ಮತ್ತು ರಾಜ್ಯಮಟ್ಟಕ್ಕೆ ಹೋಗುವಂತೆ ಪ್ರೋತ್ಸಾಹ ನೀಡಬೇಕು. ಕ್ರೀಡೆ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಆಗಲಿದೆ ಎಂದರು.

ದೊಡ್ಡಲಘಟ್ಟ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಪಿ.ಎನ್.ನಾಗರಾಜ್ ಮಾತನಾಡಿ, ಮಡಿಲು ಸಂಸ್ಥೆಯ ಯುವಕರು ವಾಲಿಬಾಲ್ ಪಂದ್ಯಾವಳಿಗಳನ್ನು ಮಾಡಿ ಯುವಕರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ಪರ್ಧಾತ್ಮಕವಾಗಿ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ಅಂತರ್ ರಾಜ್ಯಗಳ ಮಟ್ಟಗಳಲ್ಲಿ ಹೆಸರು ಪಡೆದು ಗ್ರಾಮಕ್ಕೆ ಹೆಸರು ತರಬೇಕಾಗಿದೆ ಎಂದರು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಫಿಕ್ಸರ್ಸ್ ಮೊದಲ ಸ್ಥಾನ ಪಡೆದುಕೊಂಡಿತು. ಕೋಟೆ ರಾಯಲ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಗೆದ್ದಂತಹ ತಂಡಗಳಿಗೆ ಪದಕಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಡಿಲು ಸಂಸ್ಥೆಯ ಪದಾಧಿಕಾರಿಗಳಾದ ಮಹಾಂತೇಶ, ಪ್ರದೀಪ್, ಲಕ್ಷ್ಮೀಪತಿ, ಕುಮಾರಸ್ವಾಮಿ, ಗ್ರಾಮಸ್ಥರಾದ ಶೇಕ್ ಫಾರೂಕ್, ರಾಜಣ್ಣ, ಸುಧಾಕರ್, ಚಂದ್ರಶೇಖರ್, ಶ್ರೀನಿವಾಸ್, ಮಂಜುನಾಥ್, ರಾಘವೇಂದ್ರ, ಸುನಿಲ್ ಕುಮಾರ್, ಸುಮನ್, ಇತರರು ಕೂಡ ಭಾಗವಹಿಸಿದ್ದರು.