ಸ್ವಯಂ ಉದ್ಯೋಗಕ್ಕೆ ಯುವ ರೈತರು ಮುಂದಾಗಬೇಕು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಗುಬ್ಬಿ

ಸ್ವಯಂ ಉದ್ಯೋಗಕ್ಕೆ ಯುವ ರೈತರು ಮುಂದಾಗಬೇಕು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಕಸಬ ಹೋಬಳಿ ತೊಂಗನಹಳ್ಳಿ, ಗ್ರಾಮದಲ್ಲಿ ತೈಲ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಮಾಡುವರು ಪ್ರಾಮಾಣಿಕವಾಗಿ, ಗುಣಮಟ್ಟದ ಪದಾರ್ಥಗಳನ್ನು ಉತ್ಪಾದಿಸಿದ ಮಾತ್ರ ಅಧಿಕ ಲಾಭಗಳಿಸಲು ಸಾಧ್ಯವಾಗುತ್ತದೆ.

ತಾಲೂಕಿನ ತೊಗನಹಳ್ಳಿ ಗ್ರಾಮದ ರೈತ ಮಹಿಳೆ ಬಿ.ಜೆ.ಪ್ರೇಮ ಯತೀಶ್ ಕೊಬ್ಬರಿ ಎಣ್ಣೆ ಗಾಣವನ್ನು ಮಾಡುವ ಮೂಲಕ ಇನ್ನಿತರ ರೈತರಿಗೆ ಈ ಮಾರ್ಗದರ್ಶಕರಾಗಿದ್ದಾರೆ ಮತ್ತು ಸ್ವ ಉದ್ಯೋಗಕ್ಕೆ ಮುಂದಾಗಿರುವುದು ಅತ್ಯಂತ ವಿಶೇಷತೆ ಎನಿಸಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಇತ್ತೀಚೆಗೆ ಗಾಣ ಗಳು ಆರಂಭವಾಗಿದ್ದು, ಇದರ ಮೂಲಕ ಯುವಕರಿಗೆ ಸ್ವ ಉದ್ಯೋಗ ಸಿಗುತ್ತಿರುವುದು ಒಂದು ಕಡೆಯಾದರೆ ಲಕ್ಷಾಂತರ ಹೆಕ್ಟರ್ ನಲ್ಲಿ ಬೆಳೆದಿರುವಂತಹ ಕೊಬ್ಬರಿಗೆ ಕೇವಲ ಕೊಬ್ಬರಿ ಮಾರಾಟ ಅಲ್ಲದೆ ಕೊಬ್ಬರಿ ಎಣ್ಣೆಯನ್ನು ಮಾಡುವಂತಹ ನವೀನ ಮಾದರಿ ಯಂತ್ರಗಳು ಬಂದಿವೆ. ಹಸಿ ತೆಂಗಿನ ಕಾಯಿ ಎಣ್ಣೆಯನ್ನು ಉತ್ಪಾದಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮಾರುಕಟ್ಟೆಯೂ ಸಹ ಹೆಚ್ಚುತ್ತದೆ ಎಂದರು.

ಡಾ.ಬಿ.ಎಂ.ನಾಗಭೂಷಣ್ ಮಾತನಾಡಿ ಸರ್ಕಾರ ಸಬ್ಸಿಡಿ ನೀಡುತ್ತಿದ್ದು ಅವುಗಳನ್ನು ಯುವ ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, , ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಲೋಕೇಶ್, ಶಿವಕುಮಾರ್, ಸತ್ತಿಗಪ್ಪ, ರವೀಶ್ , ಮುಖಂಡರಾದ ಟಿ .ಆರ್ ಸಿದ್ದರಾಮಯ್ಯ, ರತ್ನಮ್ಮ, ಕೃಷ್ಣೇಗೌಡ, ಲಕ್ಷ್ಮೀನಾರಾಯಣ, ಪುಟ್ಟಸ್ವಾಮಿ, ರಮೇಶ್ ಇತರರಿದ್ದರು.