ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ವೇದಿಕೆ

| Published : Jan 25 2024, 02:06 AM IST

ಸಾರಾಂಶ

ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ತಮ್ಮ ಮಹಾವಿದ್ಯಾಲಯದ ಕೀರ್ತಿ ತರುವಂತಾಗಲಿ

ಹೊಳೆಆಲೂರ: ಯುವ ಜನತೆಯಲ್ಲಿ ಅಗಾಧ ಪ್ರತಿಭೆಯಿದ್ದು, ಯುವಜನೋತ್ಸವದಂತ ವೇದಿಕೆ ಉತ್ತಮ ಅವಕಾಶ ಕಲ್ಪಿಸುತ್ತದೆ. ಇದನ್ನು ಸಮರ್ಪಕ ಬಳಸಿಕೊಂಡಲ್ಲಿ ಯುವ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದು ಶ್ರೀಯಚ್ಚರೇಶ್ವರ ಮಠದ ಶ್ರೀಯಚ್ಚರ ಸ್ವಾಮಿಗಳು ಹೇಳಿದರು.

ಇಲ್ಲಿನ ಶ್ರೀಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಕಲಾ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಕವಿವಿಯ ೨೦೨೩-೨೪ನೇ ಸಾಲಿನ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ತಮ್ಮ ಮಹಾವಿದ್ಯಾಲಯದ ಕೀರ್ತಿ ತರುವಂತಾಗಲಿ ಎಂದರು.

ನಿವೃತ್ತ ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ, ನಿರ್ದೇಶಕ ಡಿ.ಎಸ್. ಶೆಲ್ಲಿಕೇರಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸತತ ಅಭ್ಯಾಸ ಮಾಡುವವನ್ನು ಯಶಸ್ಸು ಸಾಧಿಸುತ್ತಾನೆ ಎಂದರು.

ಸಂಸ್ಥೆಯ ನಿರ್ದೇಶಕ ಬಿ.ಬಿ. ಸಾಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಮಹಾಂತೇಶ ಬ್ಯಾಡಗಿ, ಡಿ.ಎಸ್. ಶೆಲ್ಲಿಕೇರಿ, ಸಿ.ಆರ್. ಕಂಬಿ, ಪ್ರಾ.ಪಿ.ಎಸ್. ಕಣವಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕುರಿ, ಮಹಿಳಾ ಪ್ರತಿನಿಧಿ ಅನಿತಾ ಅಂಗಡಕಿ, ಯುವಜನೋತ್ಸವ ಸಂಚಾಲಕ ವಿ.ಪಿ. ಪಾಟೀಲ, ಪ್ರೊ.ಶರಣಯ್ಯ ಹಳ್ಳೂರ, ಪ್ರೊ. ಎನ್.ಆರ್. ಹಿರೇಸಕ್ಕರಗೌಡರ, ಡಾ. ಎಸ್.ಬಿ. ಸಜ್ಜನರ, ಡಾ. ಪ್ರಭು ಗಂಜಿಹಾಳ, ಪ್ರೊ. ಎಸ್.ವೈ. ಪೂಜಾರ, ಡಾ. ಕುಮಾರ ಹಂಜಗಿ, ಪ್ರಾಧ್ಯಾಪಕ ಆನಂದ ಕೆಂಚನಗೌಡ್ರ, ಎಂ.ಎಸ್. ಬೇವೂರ, ರೇಶ್ಮಾ ಟೆಕ್ಕೇದ, ಸಂತೋಷ ಮಾಳವಾಡ, ಜಯಶ್ರೀ ಪಾಟೀಲ, ಎಂ.ಆರ್.ಆರೇರ, ಕೆ.ಎಸ್.ಕೊಪ್ಪದ, ಶಿಲ್ಪಾ ಮೆದನಾಪೂರ, ಜಿ.ಎಂ. ಪೊಲೀಸಪಾಟೀಲ, ವಿ.ಬಿ. ಜಾಲಿಹಾಳ, ವೈ.ಎಂ. ನದಾಫ, ಎಸ್.ಐ. ಗಡಗಿ, ಎಸ್.ಆರ್. ಮುಂದಿನಮನಿ, ಎಸ್.ಜಿ. ಮಾಳವಾಡ, ಮಂಜುನಾಥ ಸೋಮನಕಟ್ಟಿ, ಮಂಜುನಾಥ ಬಸರಕೋಡ ಉಪಸ್ಥಿತರಿದ್ದರು.