ಯುವವಾಹಿನಿ ಕೊಲ್ಯ ಘಟಕ ಪದಗ್ರಹಣ
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೊಲ್ಯ ಘಟಕದ 2026-27ನೇ ಸಾಲಿನ ನಿಯೋಜಿತ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಮತ್ತು ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಮಂಗಳೂರಿನ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆಯಿತು.ಕೊಲ್ಯ ಸೋಮೇಶ್ವರ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಉದ್ಘಾಟಿಸಿದರು. ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ನಿತಿನ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ಎಸ್‌ಆರ್‌ಆರ್ ಮಸಾಲಾ ಸಂಸ್ಥೆ ಸಂಸ್ಥಾಪಕ ಮತ್ತು ಗುರು ಚಾರಿಟೇಬಲ್ ಟ್ರಸ್ಟ್ ಮಾಜಿ ಅಧ್ಯಕ್ಷ ಶೈಲೇಂದ್ರ ವೈ.ಸುವರ್ಣ, ಮಂಗಳೂರು ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಪ್ರಾಧ್ಯಾಪಕ ಮೋಹನ್ ರಾಜ್, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಗೀತಾ ಯಶೋಧರ್, ಗಣೇಶ್ ಕೆ.ಮಹಾಕಾಳಿ ಶಕ್ತಿನಗರ, ಗೋಪಾಲ್ ಎಸ್.ಕೊಂಡಾಣ, ತ್ರಿವೇಣಿ ಉದಯ್ ಕುಂಪಲ, ಕಾರ್ಯದರ್ಶಿ ಸೌಮ್ಯ ಯೋಗೀಶ್, ನಿಯೋಜಿತ ಕಾರ್ಯದರ್ಶಿ ಮುಕೇಶ್ ಕಿನ್ನಿ, ನಿಯೋಜಿತ ಅಧ್ಯಕ್ಷ ಜೀವನ್ ಕೊಲ್ಯ ಮತ್ತಿತರರು ಇದ್ದರು.ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು ಪ್ರತಿಜ್ಞಾವಿಧಿ ಬೋಧಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ: ಸ್ಪರ್ಧಾ ಫಲಿತಾಂಶ ಮತ್ತು ಬಹುಮಾನ ವಿತರಣೆಯನ್ನು ಆಶಾ ರಾಮನಾಥ್ ಕೋಟೆಕಾರ್ ನಿರ್ವಹಿಸಿದರು. ವಿದ್ವಾನ್ ದಿ. ರಮಾನಾಥ್ ಕೋಟೆಕಾರ್ ಸ್ಮರಣಾರ್ಥ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಡಾ.ಸುರೇಶ್ ನೆಗಳಗುಳಿ ಅವರ ಅನಾವರಣ ಹೆಸರಿನ ಕಥೆ ಪ್ರಥಮ ಬಹುಮಾನವಾಗಿ 10,000 ರು., ಕವನ ಸ್ಪರ್ಧೆಯಲ್ಲಿ ರಮ್ಯಾ ರಘುಪತಿ ಕೊಕ್ಕಡ ಅವರು 7,500 ರು. ನಗದು ಸಹಿತ ಪ್ರಥಮ ಬಹುಮಾನವನ್ನು ಪಡೆದರು. ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನೂ ಹಿತೇಶ್ ಕುಮಾರ, ಚೇತನ್ ವರ್ಕಾಡಿ ಮತ್ತಿತರರು ಪಡೆದರು.ಬೆಳಗ್ಗೆ ಯುವವಾಹಿನಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಲತೀಶ್ ಸಂಕೋಳಿಗೆ ಸಾರಥ್ಯದಲ್ಲಿ ನಡೆದ ಸ್ಪರ್ಧೆಗಳ ತೀರ್ಪುಗಾರರಾಗಿ ಹಿರಿಯ ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ವ.ಉಮೇಶ ಕಾರಂತ ಸಹಕರಿಸಿದರು.