ಕನ್ನಡಪ್ರಭ ವಾರ್ತೆ ಬೆಳಗಾವಿಜಿಲ್ಲೆಯ 15 ತಾಲೂಕುಗಳ ತಾಲೂಕು ಪಂಚಾಯತಿ ಒಟ್ಟು 301 ಸ್ಥಾನಗಳ ಮೀಸಲಾತಿ ಚಿತ್ರಣ ಹೊರಬಿದ್ದಿದ್ದು, ರಾಜಕೀಯವಾಗಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಒಟ್ಟು ತಾಪಂ ಸ್ಥಾನಗಳ ಪೈಕಿ 154 ಸ್ಥಾನಗಳು ವಿವಿಧ ಮೀಸಲು ವರ್ಗಗಳಿಗೆ ನಿಗದಿಯಾಗಿದ್ದರೆ, ಇಷ್ಟೇ 154 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಅಂದರೆ, ಒಟ್ಟು ಸ್ಥಾನಗಳ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಮೀಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ 15 ತಾಲೂಕುಗಳ ತಾಲೂಕು ಪಂಚಾಯತಿ ಒಟ್ಟು 301 ಸ್ಥಾನಗಳ ಮೀಸಲಾತಿ ಚಿತ್ರಣ ಹೊರಬಿದ್ದಿದ್ದು, ರಾಜಕೀಯವಾಗಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಒಟ್ಟು ತಾಪಂ ಸ್ಥಾನಗಳ ಪೈಕಿ 154 ಸ್ಥಾನಗಳು ವಿವಿಧ ಮೀಸಲು ವರ್ಗಗಳಿಗೆ ನಿಗದಿಯಾಗಿದ್ದರೆ, ಇಷ್ಟೇ 154 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಅಂದರೆ, ಒಟ್ಟು ಸ್ಥಾನಗಳ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಮೀಸಲಾಗಿದೆ.ಒಟ್ಟು 301 ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ 37 , ಅನುಸೂಚಿತ ಪಂಗಡಕ್ಕೆ 28, ಹಿಂದುಳಿದ ವರ್ಗ ಅ ಕ್ಕೆ 68 ಹಾಗೂ ಹಿಂದುಳಿದ ವರ್ಗ ಬ ಕ್ಕೆ 14 ಸ್ಥಾನಗಳು ಮೀಸಲಾಗಿವೆ. ಉಳಿದ 147 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. ಮೀಸಲು ವರ್ಗಗಳ ಪೈಕಿ ಹಿಂದುಳಿದ ವರ್ಗ ಅ ಗೆ ಅತಿ ಹೆಚ್ಚು 68 ಸ್ಥಾನಗಳು ದೊರೆತಿರುವುದು ಗಮನಾರ್ಹ.
ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗ ಅ ಮುಂಚೂಣಿಯಲ್ಲಿದೆ. ಈ ವರ್ಗದ 68 ಸ್ಥಾನಗಳ ಪೈಕಿ 39 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿಯ 37 ಸ್ಥಾನಗಳಲ್ಲಿ 21, ಅನುಸೂಚಿತ ಪಂಗಡದ 28ರಲ್ಲಿ 20 ಹಾಗೂ ಹಿಂದುಳಿದ ವರ್ಗ ಬ ದ 14ರಲ್ಲಿ 6 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಸಾಮಾನ್ಯ ವರ್ಗದಲ್ಲೂ 68 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ತಾಲೂಕುವಾರು ನೋಡಿದರೆ ಬೆಳಗಾವಿ ತಾಲೂಕು 32 ಸ್ಥಾನಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಲ್ಲಿ 16 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹುಕ್ಕೇರಿ 29, ಅಥಣಿ 28, ರಾಯಬಾಗ 23, ಚಿಕ್ಕೋಡಿ, ಬೈಲಹೊಂಗಲ ಹಾಗೂ ರಾಮದುರ್ಗ ತಲಾ 22, ಗೋಕಾಕ ಮತ್ತು ಸವದತ್ತಿ ತಲಾ 21, ಖಾನಾಪುರ ಮತ್ತು ನಿಪ್ಪಾಣಿ ತಲಾ 20 ಸ್ಥಾನಗಳನ್ನು ಹೊಂದಿವೆ.
ಮೀಸಲಾತಿಯಲ್ಲೂ ತಾಲೂಕುಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಹಿಂದುಳಿದ ವರ್ಗ ಅ ಮೀಸಲಾತಿಯಲ್ಲಿ ಬೆಳಗಾವಿ ಹಾಗೂ ಅಥಣಿ ತಲಾ 7 ಸ್ಥಾನಗಳೊಂದಿಗೆ ಮುಂಚೂಣಿಯಲ್ಲಿವೆ. ಬೈಲಹೊಂಗಲ, ಖಾನಾಪುರ ಮತ್ತು ಚಿಕ್ಕೋಡಿಯಲ್ಲಿ ತಲಾ 6 ಸ್ಥಾನಗಳಿವೆ. ಅನುಸೂಚಿತ ಜಾತಿ ಮೀಸಲಾತಿಯಲ್ಲಿ ನಿಪ್ಪಾಣಿ, ರಾಮದುರ್ಗ, ರಾಯಬಾಗ ಹಾಗೂ ಅಥಣಿ ತಲಾ 4 ಸ್ಥಾನಗಳನ್ನು ಹೊಂದಿವೆ. ಅನುಸೂಚಿತ ಪಂಗಡ ಮೀಸಲಾತಿಯಲ್ಲಿ ಬೆಳಗಾವಿ ತಾಲೂಕು 5 ಸ್ಥಾನಗಳೊಂದಿಗೆ ಅಗ್ರಸ್ಥಾನದಲ್ಲಿದೆ.ಒಟ್ಟಾರೆ ಮೀಸಲಾತಿ ಲೆಕ್ಕಾಚಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಹೊಸ ಆಯಾಮ ನೀಡಿದೆ. ಹೀಗಾಗಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಲೆಕ್ಕಾಚಾರ, ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಥಳೀಯ ಮಟ್ಟದ ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆ ಹೆಚ್ಚಾಗಿದೆ.
ಅಂಕಿ-ಅಂಶ
ವರ್ಗ ಒಟ್ಟು ಸ್ಥಾನ ಮಹಿಳಾ ಸ್ಥಾನಅನುಸೂಚಿತ ಜಾತಿ 37 - 21
ಅನುಸೂಚಿತ ಪಂಗಡ 28 - 20ಹಿಂದುಳಿದ ವರ್ಗ ಅ 68 - 39
ಹಿಂದುಳಿದ ವರ್ಗ ಬ 14- 6ಸಾಮಾನ್ಯ 154 - 68
ಒಟ್ಟು 301 - 154