2024-25ನೇ ಸಾಲಿನ ನಿಡಗುಂದಿ ಬಿ ವಲಯ ಮಟ್ಟದ ಕ್ರೀಡೆಗಳು : ಚಿಮ್ಮಲಗಿ ಶಾಲಾ ಮಕ್ಕಳ ಉತ್ತಮ ಸಾಧನೆ

| Published : Aug 25 2024, 02:08 AM IST / Updated: Aug 25 2024, 11:31 AM IST

ಸಾರಾಂಶ

ನಿಡಗುಂದಿ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಜರುಗಿದ 2024-25ನೇ ಸಾಲಿನ ನಿಡಗುಂದಿ ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ ಭಾಗ-2 ಸರ್ಕಾರಿ ಪ್ರೌಢಶಾಲಾ ಮಕ್ಕಳು ವಿವಿಧ ಆಟೋಟಗಳ ಸ್ಪರ್ಧೆಯ ವಿಜೇತರಾಗಿ ಮಿಂಚಿದ್ದಾರೆ.

 ಆಲಮಟ್ಟಿ :  ನಿಡಗುಂದಿ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಜರುಗಿದ 2024-25ನೇ ಸಾಲಿನ ನಿಡಗುಂದಿ ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ ಭಾಗ-2 ಸರ್ಕಾರಿ ಪ್ರೌಢಶಾಲಾ ಮಕ್ಕಳು ವಿವಿಧ ಆಟೋಟಗಳ ಸ್ಪರ್ಧೆಯ ವಿಜೇತರಾಗಿ ಮಿಂಚಿದ್ದಾರೆ.

ಶಾಲೆಯ ಬಾಲಕ-ಬಾಲಕಿಯರು ಹಲ ಸ್ಪರ್ಧೆಗಳಲ್ಲಿ ಅಮೋಘ ಗೆಲುವು ಸಾಧಿಸಿ ಮಿಂಚಿದ್ದಾರೆ. ಬಾಲಕ ಹಾಗೂ ಬಾಲಕಿಯರ ವಿಭಾಗದ ಕಬಡ್ಡಿ ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಚಿಮ್ಮಲಗಿ ಶಾಲಾ ತಂಡ ಜಯಭೇರಿ ಬಾರಿಸಿ ಗೆಲುವಿನ ನಗೆಯೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ತಂಡದ ನಾಯಕಿ ಸಂಗೀತಾ ಹಳಕಟ್ಟಿ ಹಾಗೂ ಬಾಲಕರ ತಂಡದ ನಾಯಕ ಅಭಿಷೇಕ ಜಗತಾಪ ಅವರ ಮುಂದಾಳತ್ವದಲ್ಲಿ ಕ್ರೀಡಾಪಟುಗಳು ಸಾಂಘಿಕ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. 

ಬಾಲಕಿಯರ ವಿಭಾಗದ 3000 ಮೀ.ಓಟದಲ್ಲಿ ಲಕ್ಷ್ಮೀ ಲಮಾಣಿ ಪ್ರಥಮ ಸ್ಥಾನ, ಐಶ್ವರ್ಯ ಲಮಾಣಿ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾರೆ. 1500 ಮೀ ಓಟದಲ್ಲಿ ಸ್ನೇಹಾ ಸಾತಿಹಾಳ ದ್ವಿತೀಯ, 3000 ಮೀ ನಡಿಗೆಯಲ್ಲಿ ಜಾನಮ್ಮ ಚಿನಗೊಂಡ ದ್ವಿತೀಯ, 400 ಮೀ.ಓಟದಲ್ಲಿ ಸುಶೀಲಾಬಾಯಿ ಲಮಾಣಿ ದ್ವಿತೀಯ ಸ್ಥಾನ ಪಡೆದು ಮಿನುಗಿದ್ದಾರೆ.ಬಾಲಕರ ವಿಭಾಗದ 3000 ಮೀ ಹಾಗೂ 800 ಮೀ ಓಟದ ಸ್ಪರ್ಧೆಯಲ್ಲಿ ಅಭಿಷೇಕ ಜಗತಾಪ ಪ್ರಥಮ ಸ್ಥಾನದೊಂದಿಗೆ ಗೆಲುವು ಸಾಧಿಸಿ ಕೂಟದಲ್ಲಿ ಮಿಂಚಿದ್ದಾರೆ. 

3000 ಮೀ ಓಟದಲ್ಲಿ ಲಕ್ಷ್ಮಣ ಸಿದ್ದನಾಥ ದ್ವಿತೀಯ, 1500 ಮೀ ಓಟದಲ್ಲಿ ತೃತೀಯ ಸ್ಥಾನ. ತ್ರಿವಿಧ ಜಿಗಿತದಲ್ಲಿ ರಾಜು ಮುತ್ತಿಗೆ ಪ್ರಥಮ ಸ್ಥಾನ, 200 ಮೀ.ಹಾಗೂ100 ಮೀ.ಓಟದಲ್ಲಿಯೂ ದ್ವೀತಿಯ ಸ್ಥಾನ ಗಳಿಸಿ ಮಿಂಚಿದ್ದಾನೆ. 5000 ಮೀ ನಡಿಗೆಯಲ್ಲಿ ಆಕಾಶ ಸಿದ್ದನಾಥ ದ್ವಿತೀಯ. ಉದ್ದ ಜಿಗಿತದ ಸ್ಪರ್ಧೆಯಲ್ಲಿ ಪ್ರಜ್ವಲ್ ಅಳ್ಳಿಚಂಡಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.ವಲಯ ಮಟ್ಟದ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಹಾಗೂ ಮಕ್ಕಳಿಗೆ ಉತ್ತಮ ತರಬೇತಿಗೊಳಿಸಿ ಕ್ರೀಡಾಕೂಟದಲ್ಲಿ ಮಿನುಗುವಂತೆ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಬಳಬಟ್ಟಿ ಅವರಿಗೆ ಶಾಲೆ ಮುಖ್ಯ ಗುರುಮಾತೆ ಜ್ಯೋತಿ ಹೊಸಮನಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.