ಸಾರಾಂಶ
ಬಾಗೇಪಲ್ಲಿ: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್‌ಗೆ ಮತ ನೀಡಿ ಗೆಲ್ಲಿಸಿದರೆ ಬಯಲುಸೀಮೆಗೆ ಕೃಷ್ಣಾ ನದಿ ನೀರು ಹರಿಸುವುದಲ್ಲದೆ ಈ ಭಾಗಕ್ಕೆ ಕೈಗಾರಿಕೆಗಳ ಸ್ಥಾಪನೆ ಮಾಡುವುದು ಖಚಿತ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್ ರವರ ಸಹೋದರಿ ಅಶ್ವಿನಿ ತಿಳಿಸಿದರು.
ಪಟ್ಟಣದ ಎಸ್‍ಬಿಎಂ ರಸ್ತೆಯಲ್ಲಿರುವ ಶ್ರೀರಾಮನ ದೇವಾಲಯದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಮಾದರಿ ಬ್ಯಾಲೆಟ್ ಕರಪತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮನೆ ಮನೆ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿ, ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಶಾಸಕರಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ರಾಜ್ಯದ ಗಮನ ಸೆಳೆದಿರುವ ನಾಯಕರು ಎಂದರು.
ಡಾ. ಸುಧಾಕರ್‌ಗೆ ಮತ ನೀಡಿ
ಅಂತಹ ಉತ್ತಮ ನಾಯಕರು ಲೋಕಸಭಾ ಸದಸ್ಯರಾದರೆ ಈ ಭಾಗದ ಜನರನ್ನು ಕಾಡುತ್ತಿರುವ ನೀರಾವರಿ ಸಮಸ್ಯೆ ಪರಿಹರಿಸಲು ಕೃಷ್ಣಾ ನದಿಯ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುವ ಪ್ರಾಮಾಣಿಕ ಕೆಲಸವನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಡಾ.ಕೆ. ಸುಧಾಕರ್ ರವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಬಾಗೇಪಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಮಮತಾ ನಾಗರಾಜುರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಾವಜೇನಹಳ್ಳಿ ನಾಗರಾಜರೆಡ್ಡಿ, ಗುಡಿಬಂಡೆ ಕೃಷ್ಣಾರೆಡ್ಡಿ, ಪುರಸಭೆ ಸದಸ್ಯ ಆ.ನ. ಮೂರ್ತಿ, ಮಾಜಿ ಸದಸ್ಯ ಎಲ್. ಬಾಸ್ಕರ್, ಮಂಜುಳಾಬಾಯಿ, ವನಜಾ ಮತ್ತಿತರರು ಇದ್ದರು.