‘ನಾನು ಆರೆಸ್ಸೆಸ್‌, ಇವನು ತಾಲಿಬಾನ್ ಏಜೆಂಟಾ?’ ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದ ಕೊತ್ತೂರು ಮಂಜುನಾಥ್

| Published : Aug 29 2024, 12:48 AM IST / Updated: Aug 29 2024, 04:17 AM IST

‘ನಾನು ಆರೆಸ್ಸೆಸ್‌, ಇವನು ತಾಲಿಬಾನ್ ಏಜೆಂಟಾ?’ ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದ ಕೊತ್ತೂರು ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮುಬಾರಕ್‌ಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ, ಆತನನ್ನು ಪಕ್ಷವು ಅಮಾನತ್ತುಪಡಿಸಿದೆ, ಆತನಿಗೆ ನಮ್ಮನ್ನು ಪ್ರಶ್ನಿಸುವಂತ ನೈತಿಕತೆ ಇಲ್ಲ, ಅಧಿಕಾರವೂ ಇಲ್ಲ, ಮುಬಾರಕ್ ಏನೆಂದು ಮೊಬೈಲ್‌ನಲ್ಲಿ ಚಿತ್ರಿಸಿದ್ದ ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿದುಕೊಂಡಿರುವ ಪೋಟೋವನ್ನು ಶಾಸಕ ಕೋತ್ತೂರು ಪ್ರದರ್ಶಿಸಿದರು.

 ಕೋಲಾರ :  ಹೌದು ನಾನು ಆರ್.ಎಸ್.ಎಸ್‌ನವನೇ ಏನೀಗ, ನಾನು ಆರ್.ಎಸ್.ಎಸ್ ಆದರೆ ಇವನು ಒಬ್ಬ ತಾಲಿಬಾನ್ ಏಜೆಂಟ್. ಇವನಿಂದ 50-60 ಮನೆಗಳು ಮುಳುಗಿಸಿ ನಾಶವಾಗಿದೆ, ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮುಬಾರಕ್ ಯಾರು, ಅವನ್ಯಾರು ನನ್ನನ್ನು ಪ್ರಶ್ನಿಸಲು ಅವನಿಗೇನು ಅಧಿಕಾರ ಇದೆ ಎಂದು ಶಾಸಕ ಕೊತ್ತೂರು ಮಂಜುನಾಥ್, ನಗರಸಭಾ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದರು.

ನಾನು ಗೆಸ್ಟ್ ಹೌಸ್‌ನಲ್ಲಿ, ತೋಟದ ಮನೆಯಲ್ಲಿ, ಎಲ್ಲಿ ಬೇಕಾದರೂ ಮೀಟಿಂಗ್ ಮಾಡುತ್ತೇನೆ. ಇದನ್ನು ಕೇಳಲು ಇವನ್ಯಾರು, ನಾನು ಕರೆದ ಮೀಟಿಂಗ್‌ಗೂ ಇವನಿಗೂ ಏನು ಸಂಬಂಧ. ನಾನು ಕೂತ್ತೂರು ಮಂಜುನಾಥ್ ನನ್ನ ಇಷ್ಟ, ನನ್ನ ಅಧಿಕಾರ, ಇವನ್ಯಾರು ಎಂದು ಪ್ರಶ್ನಿಸಿದರು.

  ಸವಾಲು

ನಗರದ ನಗರಸಭೆ ನೂತನ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮತ್ತು ಉಪಾಧ್ಯಕ್ಷೆ ಸಂಗೀತಾರ ಅಧಿಕಾರಿಗಳ ಸ್ವೀಕಾರ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ನಾನು ಆರ್.ಎಸ್.ಎಸ್ ಎಂದು ಮುಬಾರಕ್‌ ರುಜುವಾತುಪಡಿಸಲಿ ಎಂದು ಸವಾಲು ಹಾಕಿದರು. ಮುಬಾರಕ್‌ಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ, ಆತನನ್ನು ಪಕ್ಷವು ಅಮಾನತ್ತುಪಡಿಸಿದೆ, ಆತನಿಗೆ ನಮ್ಮನ್ನು ಪ್ರಶ್ನಿಸುವಂತ ನೈತಿಕತೆ ಇಲ್ಲ, ಅಧಿಕಾರವೂ ಇಲ್ಲ, ಮುಬಾರಕ್ ಏನೆಂದು ಮೊಬೈಲ್‌ನಲ್ಲಿ ಚಿತ್ರಿಸಿದ್ದ ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿದುಕೊಂಡಿರುವ ಪೋಟೋವನ್ನು ಪ್ರದರ್ಶಿಸಿದ ಅವರು ಮುಬಾರಕ್ ಎಂತಹವನು, ಎಂತಹ ಒಳ್ಳೆ ಕೆಲಸಗಳು ಮಾಡಿದ್ದಾನೆಂದು ನೀವೇ ಅರ್ಥ ಮಾಡಿಕೊಳ್ಳಿ, ಇಂತಹವನನ್ನು ನಾವು ನಗರಸಭೆಗೆ ಅಧ್ಯಕ್ಷರನ್ನಾಗಿ ಮಾಡಬೇಕಾ ಎಂದು ಪ್ರಶ್ನಿಸಿದರು.

ಅಧ್ಯಕ್ಷರಿಂದ ಅಧಿಕಾರಿ ಸ್ವೀಕಾರ ನಗರಸಭೆ ಅಧ್ಯಕ್ಷೆಯಾಗಿ ಲಕ್ಮೀದೇವಮ್ಮ ಉಪಾಧ್ಯಕ್ಷೆಯಾಗಿ ಸಂಗೀತಾ ಅವರುಗಳು ಇಂದು ಷಷ್ಟಿ ಹಾಗೂ ದಶಮಿಯಾಗಿದ್ದು ಒಳ್ಳೆಯ ದಿನವಾಗಿರುವುದರಿಂದ ಅಧಿಕಾರ ಸ್ವೀಕಾರಕ್ಕೆ ಉತ್ತಮ ದಿನವೆಂದು ಹಿರಿಯರು ತಿಳಿಸಿದ ಹಿನ್ನಲೆಯಲ್ಲಿ ಅವರು ತಮ್ಮ ನಗರಸಭೆ ಕಾರ್ಯಾಲಯದಲ್ಲಿ ತಮ್ಮ ಕೊಠಡಿಗಳಲ್ಲಿ ದೇವರ ಪೂಜೆ ನೆರವೇರಿಸಿ ಅಧಿಕಾರ ಸ್ವೀಕರಿಸಿದ್ದಾರೆ, ನಾವು ಹಾಜರಾಗಿ ಶುಭ ಹಾರೈಸಿದ್ದೇವೆ ಎಂದು ಹೇಳಿದರು.

ನೂತನ ಮಹಿಳಾ ಪೌರಾಯುಕ್ತೆ

ನಗರಸಭೆಗೆ ನೂತನ ಪೌರಾಯುಕ್ತರನ್ನು ನೇಮಿಸಲಾಗಿದೆ. ಇನ್ನು 3 - 4  ದಿನದಲ್ಲಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಅವರಿಂದಲೂ ನಗರದ ಅಭಿವೃದ್ದಿಯೊಂದಿಗೆ ಉತ್ತಮ ಕೆಲಸ ನಿರ್ವಹಿಸುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು ಎಂದರು. ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಮಹಿಳೆಯರಾಗಿದ್ದು, ಆಯುಕ್ತರೂ ಮಹಿಳೆಯಾಗಿರುವ ಕಾರಣ ಖಂಡಿತವಾಗಿ ನಗರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಿದ್ದಾರೆ, ಆಡಳಿತದಲ್ಲಿ ನಿರ್ವಹಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅವರ ಪತಿಯಂದಿರು ಯಾರು ಬೇಕಾದರು ಮಾರ್ಗದರ್ಶನ ನೀಡಬಹುದೇ ಹೊರತು ಅಧಿಕಾರ ಚಲಾಯಿಸಲು ಬರುವುದಿಲ್ಲ, ಅವರು ಪತ್ನಿಯ ಜೊತೆಗೆ ಇರಲು ಯಾವೂದೇ ಅಭ್ಯಂತರವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ಗೆ ವಂಚಿಸಿದ ವ್ಯಕ್ತಿ

ಬಿ.ಎಂ.ಮುಬಾರಕ್‌ರನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವು ಆದರೆ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ್ದೇನು, ಚುನಾವಣೆಗೆ ಇನ್ನು ಒಂದು ವಾರ ಇರುವಾಗ ಜೆಡಿಎಸ್‌ ಸೇರ್ಪಡೆಯಾಗಿ ಕಾಂಗ್ರೆಸ್‌ಗೆ ವಂಚಿಸಿದರು, ಆಗಲೇ ಅವರನ್ನು ಪಕ್ಷದಿಂದ ಅಮಾನತಿನಲ್ಲಿಡಲಾಗಿದೆ. ಯಾರೇ ಆಗಲಿ ಮಾತನಾಡಬೇಕಾದರೆ ನೈತಿಕತೆ ಇಟ್ಟುಕೊಂಡು ಮಾತನಾಡಬೇಕು ಎಂದರು.

ಕಾಂಗ್ರೆಸ್‌ ಸರ್ಕಾರ 15 ತಿಂಗಳಲ್ಲಿ ಒಟ್ಟು 120 ಕೋಟಿ ರೂ.ಗಳನ್ನು ಅಭಿವೃದ್ದಿ ಕಾರ್ಯಗಳಿಗೆ ಮಂಜೂರು ಮಾಡಿದೆ, ಆದರೆ ಚುನಾವಣೆಯ 3 ತಿಂಗಳ ಪ್ರಕ್ರಿಯೆಗಳಿಂದ ಅನುಷ್ಟಾನಕ್ಕೆ ವಿಳಂಬವಾಗಿರುವುದು ಇದು ಎಲ್ಲಾ ಸದಸ್ಯರಿಗೂ ತಿಳಿದಿದ್ದು ಹಾಗಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಸಹಕಾರ ವ್ಯಕ್ತಪಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಸದಸ್ಯರಾದ ಅಪ್ಸರ್, ಅಂಬರೀಷ್, ಶಂಕರ್, ಪ್ರವೀಣ್ ಗೌಡ, ರಾಕೇಶ್ ಗೌಡ, ಗ್ಯಾರೆಂಟಿ ಅನುಷ್ಟನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ಮುಖಂಡರಾದ ಅಮರ್, ಬಾಲು, ಜೆ.ಕೆ.ಜಯರಾಮ್. ಕುರಿಗಳ ರಮೇಶ್, ಜಗದೀಶ್, ಇದ್ದರು.