ಸಾರಾಂಶ
ಮಹಾರಾಷ್ಟ್ರ ಬಿಜೆಪಿಯ ಅಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಅವರು ಚೀನಾ ಬಳಿಯ ಮಕಾವ್‌ನ ಕ್ಯಾಸಿನೋ ಒಂದರಲ್ಲಿ ಜೂಜಾಟದಲ್ಲಿ ತೊಡಗಿದ್ದಾರೆ ಎನ್ನಲಾದ ಚಿತ್ರವೊಂದನ್ನು ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರು ಬಿಡುಗಡೆ ಮಾಡಿದ್ದು, ಅಲ್ಲಿ ಅವರು ಜೂಜಾಡಲು 3.5 ಕೋಟಿ ರು. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ಬಿಜೆಪಿಯ ಅಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಅವರು ಚೀನಾ ಬಳಿಯ ಮಕಾವ್‌ನ ಕ್ಯಾಸಿನೋ ಒಂದರಲ್ಲಿ ಜೂಜಾಟದಲ್ಲಿ ತೊಡಗಿದ್ದಾರೆ ಎನ್ನಲಾದ ಚಿತ್ರವೊಂದನ್ನು ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರು ಬಿಡುಗಡೆ ಮಾಡಿದ್ದು, ಅಲ್ಲಿ ಅವರು ಜೂಜಾಡಲು 3.5 ಕೋಟಿ ರು. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಇದು ತಿರುಚಿದ ದೃಶ್ಯ. ಬಾವನ್‌ಕುಳೆ ಅವರು ತಮ್ಮ ಜೀವಿತಾವಧಿಯಲ್ಲೇ ಜೂಜಾಟ ಆಡಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರು ಮದ್ಯ ಹಿಡಿದಿದ್ದಾರೆ ಎನ್ನಲಾದ ಗಾಜಿನ ಲೋಟವೊಂದರ ಚಿತ್ರವನ್ನು ಟ್ಯಾಗ್ ಮಾಡಿ ತಮ್ಮ ಜೀವನವನ್ನೇ ಜೂಜಿನ ಅಡ್ಡೆ ಮಾಡಿಕೊಂಡಿರುವವರಿಗೆ ಅದನ್ನು ಬಿಟ್ಟು ಬೇರೇನೂ ಕಾಣುವುದಿಲ್ಲ ಎಂದು ಅಡಿಬರಹದಲ್ಲಿ ದಾಖಲಿಸಿದೆ.