ಮೈತ್ರಿ ಅಭ್ಯರ್ಥಿ ವೈಎಎನ್‌ ಗೆಲುವು ಶತಸಿದ್ಧ: ವಿಶ್ವಾಸ

| Published : Jun 04 2024, 12:33 AM IST / Updated: Jun 04 2024, 04:23 AM IST

ಮೈತ್ರಿ ಅಭ್ಯರ್ಥಿ ವೈಎಎನ್‌ ಗೆಲುವು ಶತಸಿದ್ಧ: ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ಬಾರಿ ಗೆದ್ದು ಶಿಕ್ಷಕರ ಪರವಾಗಿ ಧ್ವನಿಯೆತ್ತಿ ಹಲವಾರು ಕೆಲಸಗಳನ್ನು ಮಾಡಿರುವುದರಿಂದ ವೈ.ಎ.ಎನ್‌ಗೆ ಎದುರಾಳಿ ಯಾರೂ ಇಲ್ಲ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಶಿಕ್ಷಕರು ಎನ್‌ಡಿಎ ಪರವಾಗಿದ್ದಾರೆ ಎನ್ನುತ್ತಾರೆ ಸಂಸದ ಮುನಿಸ್ವಾಮಿ

 ಕೆಜಿಎಫ್ :    ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಿರುವ ಈ ಬಾರಿಯ ಎನ್‌ಡಿಎ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ೪ನೇ ಬಾರಿ ಮತ್ತೊಮ್ಮೆ ಗೆಲ್ಲಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಚುನಾವಣಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕಳೆದ ಮೂರು ಬಾರಿ ಗೆದ್ದು ಶಿಕ್ಷಕರ ಪರವಾಗಿ ಧ್ವನಿಯೆತ್ತಿ ಹಲವಾರು ಕೆಲಸಗಳನ್ನು ಮಾಡಿರುವುದರಿಂದ ವೈ.ಎ.ಎನ್‌ಗೆ ಎದುರಾಳಿ ಯಾರೂ ಇಲ್ಲ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿಯಾದ ಬಳಿಕ 5 ಜಿಲ್ಲೆಗಳ 36ವಿಧಾನಸಭಾ ಕ್ಷೇತ್ರಗಳ ಪೈಕಿ 23 ಸಾವಿರಕ್ಕೂ ಹೆಚ್ಚಿಗೆ ಇರುವ ಶಿಕ್ಷಕರು ಎನ್‌ಡಿಎ ಮೈತ್ರಿ ಅಭ್ಯರ್ಥಿ ಪರವಾಗಿ ಒಲವು ತೋರುತ್ತಿದ್ದು, ಗೆಲುವು ನಿಶ್ಚಿತ ಎಂದರು. ಪರಿಶಿಷ್ಟರ ಹಣ ನೆರೆ ರಾಜ್ಯಕ್ಕೆ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ತೆಲಂಗಾಣ ಮತ್ತಿತರ ರಾಜ್ಯಗಳ ಚುನಾವಣೆಗಾಗಿ ವಿನಿಯೋಗಿಸುವ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುವ ಮಟ್ಟಕ್ಕೆ ಹೋಗಿರುವುದು ದುರದೃಷ್ಟಕರ ಸಂಗತಿಯಾಗಿದೆ, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಕುಂಠಿತವಾಗಿರುವುದರಿಂದ ವೈ.ಎ.ಎನ್‌ಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಿದಲ್ಲಿ ಇನ್ನಷ್ಟು ಶಿಕ್ಷಕರ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದರು. ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ಬಾಬು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್‌ನವರು ಈಗಾಗಲೇ ೫ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ, ಒಂದು ಮತದ ಅಂತರದಲ್ಲಾಗಲೀ ನಾವು ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ.

ಇವಿಎಂ ಮೇಲೆ ಕಾಂಗ್ರೆಸ್‌ಗೆ ಅನುಮಾನ

ಕಾಂಗ್ರೆಸ್‌ನವರು ಗೆದ್ದ ಸಂದರ್ಭದಲ್ಲಿ ಇವಿಎಂ ಮಷಿನ್‌ಗಳು ಮತ್ತು ಎಕ್ಸಿಟ್ ಪೋಲ್‌ಗಳ ಮೇಲೆ ಅನುಮಾನ ಪಡುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಜಯಗಳಿಸಲಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದರೆ ಆಗ ಎಕ್ಸಿಟ್ ಪೋಲ್‌ಗಳ ಮೇಲೆ ಮತ್ತು ಇವಿಎಂ ಮೆಶಿನ್‌ಗಳ ಮೇಲೆ ಸಂದೇಹ ಪಡುವುದನ್ನು ಮೊದಲಿನಿಂದಲೂ ರೂಢಿಸಿಕೊಂಡುಬಿಟ್ಟಿದ್ದು, ಯಾರು ಏನೇ ಹೇಳಿದರೂ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ಯಾರಿದಂತಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು. ನಗರ ಘಟಕದ ಮಾಜಿ ಅಧ್ಯಕ್ಷ ಕಮಲ್‌ನಾಥನ್, ರವಿರೆಡ್ಡಿ, ಜನಾರ್ಧನ್, ಸಂಗಮಿತ್ರ, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯರಾದ ಗಾಂಧಿ, ಸಂತೋಷ್ ಕುಮಾರ್ ಇದ್ದರು.