ವಿಧಾನಸಭೆ ಚುನಾವಣೆ: 21ಕ್ಕೆ 21ರಲ್ಲಿ ಗೆದ್ದು ಜನಸೇನಾ ದಾಖಲೆ

| Published : Jun 06 2024, 12:32 AM IST

ವಿಧಾನಸಭೆ ಚುನಾವಣೆ: 21ಕ್ಕೆ 21ರಲ್ಲಿ ಗೆದ್ದು ಜನಸೇನಾ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 21 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಶೇ.100 ಸ್ಟ್ರೈಕ್‌ರೇಟ್‌ ಸಾಧನೆ ಮಾಡಿದೆ.

ವಿಜಯವಾಡ: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ ಜೋಡಿ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಮಾಲ್ ಮಾಡಿದ್ದು, ತಮ್ಮ ಎದುರಾಳಿ, ವೈಎಸ್ಸಾರ್‌ ಕಾಂಗ್ರೆಸ್‌ನ ಜಗನ್ ಮೋಹನ ರೆಡ್ಡಿ ಅವರ ಪಕ್ಷವನ್ನು ಧೂಳೀಪಟ ಮಾಡುವಲ್ಲಿ ಯಶಸ್ವಿಯಾಗಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 21 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಶೇ.100 ಸ್ಟ್ರೈಕ್‌ರೇಟ್‌ ಸಾಧನೆ ಮಾಡಿದೆ.

ಇದೇ ವೇಳೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 2 ಕ್ಷೇತ್ರಗಳಲ್ಲೂ ಜಯಿಸಿದೆ.

ಆಂಧ್ರಪ್ರದೇಶದ ಒಟ್ಟು 175 ಕ್ಷೇತ್ರಗಳ ಪೈಕಿ ಪವನ್ ಕಲ್ಯಾಣ್ ನೇತೃತ್ವದ ಜನಾಸೇನಾ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಅಚ್ಚರಿಯೆಂಬಂತೆ ಎಲ್ಲ ಕಡೆ ಜಯಭೇರಿ ಬಾರಿಸಿದೆ.ಹೆಲೋ ಎಪಿ(ಆಂದ್ರಪ್ರದೇಶ) ಬಾಯ್ ಬಾಯ್ ವೈಸಿಪಿ(ಜಗನ್ ಪಕ್ಷ) ಎನ್ನುತ್ತಾ ಶೇ.90 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಗುರಿ ಹೊಂದಿದ್ದ ಪವನ್ ಶೇ.100ರ ಗುರಿ ತಲುಪಿದ್ದಾರೆ.

ಸಂಭ್ರಮಾಚರಣೆ ವೇಳೆ ತಮ್ಮ ಗೆಲುವಿನ ಕುರಿತು ಮಾತನಾಡಿದ್ದ ಪವನ್ ,‘ಆಂಧ್ರ ಪ್ರದೇಶಕ್ಕೆ ಇದು ಐತಿಹಾಸಿಕ ದಿನ. ನಾನು ನನ್ನ ಜೀವನದಲ್ಲಿ ಯಶಸ್ಸಿನ ರುಚಿಯನ್ನು ನೋಡಿಲ್ಲ. ನನ್ನ ಜೀವನ ಕಷ್ಟ ಮತ್ತು ಸೋಲಿನಿಂದಲೇ ತುಂಬಿತ್ತು. ಆದರೆ 21ಕ್ಕೆ 21 ವಿಧಾನಸಭಾ ಕ್ಷೇತ್ರ ಮತ್ತು ಸ್ಪರ್ಧಿಸಿದ 2 ಲೋಕಸಭಾ ಕ್ಷೇತ್ರಗಳಲ್ಲಿ ಶೇ.100 ಸ್ಟ್ರೈಕ್‌ರೇಟ್‌ನಲ್ಲಿನ ಗೆಲುವು ಹೆಮ್ಮೆ ತಂದಿದೆ. ದೇಶದಲ್ಲಿ ಈ ಸಾಧನೆ ಮಾಡಿದ ಏಕೈಕ ಪಕ್ಷ ನಮ್ಮದು’ ಎಂದಿದ್ದಾರೆ.