ಮುನಿರತ್ನ ದೂರುದಾರನ ಜೊತೆ ಕುಸುಮಾ ತಂದೆ ಮಾತು ವೈರಲ್‌ - ಸರ್ಕಾರವಿದೆ, ಸಮಸ್ಯೆ ಬಗೆಹರಿಸುವೆ ಎನ್ನುವ ಆಡಿಯೋ

| Published : Sep 17 2024, 09:36 AM IST

Hanumantharayappa

ಸಾರಾಂಶ

ಶಾಸಕ ಮುನಿರತ್ನ ವಿರುದ್ಧ ಜೀವ ಬೆದರಿಕೆ ದೂರು ನೀಡಿರುವ ಚಲುವರಾಜು ಜತೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ತಂದೆ ಹಾಗೂ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಮಾತನಾಡಿದ್ದಾರೆ ಎಂದು ಹೇಳಲಾದ ಆಡಿಯೋ ವೈರಲ್‌ ಆಗಿದೆ.

ಬೆಂಗಳೂರು :  ಶಾಸಕ ಮುನಿರತ್ನ ವಿರುದ್ಧ ಜೀವ ಬೆದರಿಕೆ ದೂರು ನೀಡಿರುವ ಚಲುವರಾಜು ಜತೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ತಂದೆ ಹಾಗೂ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಮಾತನಾಡಿದ್ದಾರೆ ಎಂದು ಹೇಳಲಾದ ಆಡಿಯೋ ವೈರಲ್‌ ಆಗಿದೆ.

ಆಡಿಯೋವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದ್ದು, ಅದರಲ್ಲಿರುವಂತೆ ಚಲುವರಾಜು ಅವರೊಂದಿಗೆ ಮಾತನಾಡಿರುವ ಹನುಮಂತರಾಯಪ್ಪ, ‘ನಮ್ಮದೇ ಸರ್ಕಾರವಿದೆ. ನೀರು ಯಾರ ಬಳಿಯೂ ಹೋಗಬೇಡ. ನನ್ನ ಬಳಿ ಬಾ ನಿನ್ನ ಸಮಸ್ಯೆ ಬಗೆಹರಿಸುತ್ತೇನೆ. ನೀನು ನಮ್ಮವನು, ನಮ್ಮ ತಾಲೂಕಿನವನು. ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಆಡಿಯೋ ಕುರಿತಂತೆ ಹನುಮಂತರಾಯಪ್ಪ ಪ್ರತಿಕ್ರಿಯಿಸಿದ್ದು, ‘ನಾನು ಬೇರೆಯವರಂತೆ ನನ್ನ ಧ್ವನಿಯಲ್ಲ ಎಂದು ಹೇಳುವುದಿಲ್ಲ. ಅದು ನನ್ನದೇ ಧ್ವನಿ, ನಾನೇ ಮಾತನಾಡಿರುವುದು. ಚಲುವರಾಜು ತುಂಬಾ ನೋವು ಅನುಭವಿಸಿದ್ದಾನೆ. ಯಾವುದೋ ಸಣ್ಣ ವಿಚಾರಕ್ಕೆ ಮತ್ತೊಬ್ಬರ ಮೇಲೆ ದೂರು ನೀಡಿದ್ದ. ಅದನ್ನು ನಾನು ಸರಿಪಡಿಸುತ್ತೇನೆ, ಸಣ್ಣ ವಿಚಾರಕ್ಕೆಲ್ಲ ಪೊಲೀಸರ ಬಳಿ ಹೋಗುವುದು ಬೇಡ