ಸಾರಾಂಶ
ಬಾಂಗ್ಲಾದೇಶದ ಇಸ್ಲಾಮಿಕ್ ಪಕ್ಷವನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ 10 ವರ್ಷಗಳ ಹಿಂದಿನ ಹೈಕೋರ್ಟ್ ತೀರ್ಪನ್ನು ಬಾಂಗ್ಲಾ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಢಾಕಾ: ಬಾಂಗ್ಲಾದೇಶದ ಇಸ್ಲಾಮಿಕ್ ಪಕ್ಷವನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ 10 ವರ್ಷಗಳ ಹಿಂದಿನ ಹೈಕೋರ್ಟ್ ತೀರ್ಪನ್ನು ಬಾಂಗ್ಲಾ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಮುಂದಿನ ವರ್ಷದ ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಭಾಗವಹಿಸುವ ಜಮಾತ್ ಎ ಇಸ್ಲಾಮಿ ಸಂಘಟನೆಗೆ ಉದ್ದೇಶಕ್ಕೆ ಭಾರೀ ಹೊಡೆತ ಬಿದ್ದಿದೆ. ಸಂವಿಧಾನವು ಕಲ್ಪಿಸುವ ಜಾತ್ಯತೀತಗೆ ಅವಕಾಶವನ್ನ ಉಲ್ಲಂಘಿಸಿದ ಕಾರಣ ನೀಡಿ ಹೈಕೋರ್ಟ್, ಜಮಾತ್ ಎ ಇಸ್ಲಾಮ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿತ್ತು. ಅದನ್ನು ಪಕ್ಷ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.