ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದ ಹುತಾತ್ಮದವರಿಗೆ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಕೇಂದ್ರ ಕಚೇರಿ ಆವರಣದಲ್ಲಿ ಕ್ಯಾಂಡಲ್‌ ಬೆಳಗಿ ನಮನ ಸಲ್ಲಿಸಿದರು.

 ಬೆಂಗಳೂರು : ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದ ಹುತಾತ್ಮದವರಿಗೆ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಕೇಂದ್ರ ಕಚೇರಿ ಆವರಣದಲ್ಲಿ ಕ್ಯಾಂಡಲ್‌ ಬೆಳಗಿ ನಮನ ಸಲ್ಲಿಸಿದರು.

ಶುಕ್ರವಾರ ಬಿಬಿಎಂಪಿಯ ಕಚೇರಿಯ ಆವರಣದಲ್ಲಿಯೇ ಕ್ಯಾಂಡಲ್‌ ಹಿಡಿದು ಅಧಿಕಾರಿ ಸಿಬ್ಬಂದಿಯು ಮೌನ ಮೆರವಣಿಗೆ ನಡೆಸಿದ ಬಳಿಕ ಮೌನಚರಣೆ ನಡೆಸಿ ಹುತಾತ್ಮರ ಭಾವಚಿತ್ರಕ್ಕೆ ಕ್ಯಾಂಡಲ್‌ ಬೆಳಗಿ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಿಬಿಎಂಪಿಯ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್‌, ಉಗ್ರವಾದಿಗಳ ವಿರುದ್ಧ ಹೋರಾಟ ನಡೆಸಲು ದೇಶದ 140 ಕೋಟಿ ಜನರು ಒಟ್ಟಾಗಬೇಕು. ಈ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಧೈರ್ಯ, ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕ‌ರ್, ಕೆ.ಜಿ.ರವಿ, ಎಸ್.ಜಿ.ಸುರೇಶ್, ರಾಮಚಂದ್ರ, ಕೆ.ಮಂಜೇಗೌಡ, ಎಚ್.ಬಿ.ಹರೀಶ್ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಇದ್ದರು.