ಚಿಲ್ಲರೆ ಭಿಕ್ಷೆ ಹಾಕಿ, ನೋಟು ಕದಿಯುವ ಕೆಲಸ : ಬಿವೈ ವಿಜಯೇಂದ್ರ

| Published : Jun 24 2024, 10:37 AM IST

Vijayendra
ಚಿಲ್ಲರೆ ಭಿಕ್ಷೆ ಹಾಕಿ, ನೋಟು ಕದಿಯುವ ಕೆಲಸ : ಬಿವೈ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕುರುಡನಿಗೆ ಚಿಲ್ಲರೆ ಭಿಕ್ಷೆ ಹಾಕಿ ನೋಟನ್ನು ಕದಿಯುವ ಕೆಲಸದಂತೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.

ಮೈಸೂರು :  ಕುರುಡನಿಗೆ ಚಿಲ್ಲರೆ ಭಿಕ್ಷೆ ಹಾಕಿ ನೋಟನ್ನು ಕದಿಯುವ ಕೆಲಸದಂತೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.

ನಗರದ ವರ್ತುಲ ರಸ್ತೆಯ ಆಲನಹಳ್ಳಿ ಬಡಾವಣೆಯಲ್ಲಿ ಕುದೇರು ಮಠ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ 125ನೇ ಪ್ರಥಮ ಗಣರಾಧನೆ, ಶ್ರೀ ಗುರುಲಿಂಗಸ್ವಾಮಿಗಳ 33ನೇ ವಾರ್ಷಿಕ ಗಣಾರಾಧನೆ, ಶ್ರೀ ತೋಂಟದಾರ್ಯ ಸ್ವಾಮಿಗಳ ಪ್ರಾರ್ಥನಾ ಮಂದಿರ ಉದ್ಘಾಟನೆ, ಶ್ರೀ ಗುರುಶಾಂತ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದೆಡೆ ಮಳೆ ಇಲ್ಲದೆ, ಬರಗಾಲ ಕಾಣಿಸಿಕೊಂಡಿದೆ. ಜನರು ಬರದಿಂದ ತತ್ತರಿಸಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಬಿತ್ತನೆ ಬೀಜ ಸೇರಿ ಅನೇಕ ಪದಾರ್ಥಗಳ ಬೆಲೆ ಹೆಚ್ಚಾಗಿ ಜನರು ಕ್ಲಿಷ್ಟಕರ ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ಕಣ್ಣೀರು ಒರೆಸಬೇಕಾದ ಸರ್ಕಾರ ಬೆಲೆ ಹೆಚ್ಚಿಸಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಟೀಕಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರು ಮಠಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಮಠಗಳು ಅನ್ನ, ಜ್ಞಾನ ದಾಸೋಹದ ಕೆಲಸ ಮಾಡುತ್ತಿದ್ದು, ಅದರ ಮುಂದ ಯಾವುದೂ ಇಲ್ಲ. ಹಿರಿಯರು ಅದಕ್ಕಾಗಿ ಮಠಗಳು ನಮಗಾಗಿ ಕೊಡುಗೆ ನೀಡಿದ್ದಾರೆ. ಈಗ ನಾನು ಎಲ್ಲಿಯೇ ಹೋದರೂ ಯಡಿಯೂರಪ್ಪ ಅವರ ಮಗನೆಂದು ಗುರುತಿಸುವ ಶಕ್ತಿ ನೀಡಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ನಾಡಿನ ಮಠಗಳು ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದನ್ನು ಗಮನಿಸಿ ಆರ್ಥಿಕ ಶಕ್ತಿ ತುಂಬಿದರು. ಸಣ್ಣ ಸಣ್ಣ ಮಠಗಳಿಗೆ ಅನುದಾನ ನೀಡಿದರು. ದಾಸೋಹದ ಪರಂಪರೆಗೆ ವೀರಶೈವ ಲಿಂಗಾಯತ ಮಠಗಳು ಹೆಸರುವಾಸಿಯಾಗಿವೆ. ಅನ್ನ, ಜ್ಞಾನ ದಾಸೋಹ ಮೂಲಕ ಸೇವೆ ಮಾಡಿಕೊಂಡು ಬಂದಿದ್ದರಿಂದ ಅನೇಕರು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಅವರು ತಿಳಿಸಿದರು.

ಸಿದ್ದಗಂಗಾ, ಸುತ್ತೂರು ಮಠದಲ್ಲಿ ವಿದ್ಯಾಭ್ಯಾಸ ಮಾಡಿದವರು ದೊಡ್ಡ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳಾಗಿದ್ದಾರೆ. ಆದರೆ, ಮಠ ಮಾನ್ಯಗಳ ಬಗ್ಗೆ ಕಾಳಜಿ, ಶ್ರದ್ಧೆ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮಗೆ ಒಂದೊತ್ತು ಊಟ ಸಿಗದೆ ಇದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದರೂ ಕೂಡ ಸಂಸ್ಕಾರದ ಕೊರತೆ ಕಾಡುತ್ತಿದೆ. ಮಠಗಳ ಬಗ್ಗೆ ನಾವು ನಡೆದುಕೊಂಡಂತೆ ನಮ್ಮ ಮಕ್ಕಳು ಅನುಸರಿಸಬೇಕು. ತಂದೆಯ ಜೀವನೋಪಾಯಕ್ಕಾಗಿ ಕೆಳಹಂತದ ನ್ಯಾಯಾಂಲಯವು ಅದೇಶ ನೀಡಿದ್ದರೂ ಪಾಲಿಸದೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದರೇ ಯಾವ ರೀತಿಯಲ್ಲಿ

ಬದಲಾಗುತ್ತದೆ ಎನ್ನುವ ಯೋಚನೆ ಬರುತ್ತದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಕಷ್ಟಪಟ್ಟು ದುಡಿದರೂ ಅದನ್ನು ಮರೆತು ಸ್ವಾರ್ಥಕ್ಕಾಗಿ ದೂರ ಮಾಡುತ್ತಾರೆ. ಸರ್ಕಾರಗಳು ಮಠಮಾನ್ಯಗಳನ್ನು ಹೇಗೆ ನೋಡುತ್ತಾರೆ ಎಲ್ಲೋ ಒಂದು ಕಡೆ ಮನಸ್ಸಿಗೆ ನೋವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮಠಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತ ಬಂದಿವೆ. ಮಠಗಳು ಮಾನವೀಯ ಮೌಲ್ಯ ಬಿತ್ತುವ ಜತೆಗೆ ಸಮಾಜ ಯಾವ ಧಿಕ್ಕಿನಲ್ಲಿ ಸಾಗಬೇಕು ಎನ್ನುವ ವಿಚಾರ ಹೇಳುತ್ತವೆ. ನೈತಿ ಮೌಲ್ಯಗಳು ಉಳಿಯಬೇಕಾದರೆ ಧರ್ಮ ಮತ್ತು ಮಠಮಾನ್ಯಗಳ ಅಗತ್ಯವಿದೆ ಎಂದರು. ಕಷ್ಟವನ್ನು ಎದುರಿಸುವ ಶಕ್ತಿ ಧರ್ಮದಿಂದ ಮನುಷ್ಯನಿಗೆ ದೊರಕುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳುವುದರಿಂದ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಿಎ ನಿವೇಶನ ಮಂಜೂರು ಮಾಡುವಾಗ ನಮ್ಮ ಸರ್ಕಾರ ಅನುಮತಿ ನೀಡಿತ್ತು. ಹಾಗಾಗಿ, ಶ್ರೀಮಠಕ್ಕೆ ಅಗತ್ಯ ಇರುವ ನೆರವು, ಸಹಕಾರ ಕೊಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕವೀಶ್‌ ಗೌಡ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಡಿ.ಎಸ್. ಸದಾಶಿವಮೂರ್ತಿ ಕಾಯಕದ ಮಹತ್ವ ಮತ್ತು ಮಠಗಳ ಕೊಡುಗೆ ಕುರಿತು ಮಾತನಾಡಿದರು.

ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಸಿದ್ದಗಂಗಾಮಠದ ಶ್ರೀಸಿದ್ಧಲಿಂಗಸ್ವಾಮೀಜಿ, ದೇಗುಲಮಠದ ಕಿರಿಯಶ್ರೀ ಚನ್ನಬಸವಸ್ವಾಮೀಜಿ, ವಿರಕ್ತಮಠದ ಶ್ರೀತೋಂಟದಾರ್ಯಸ್ವಾಮೀಜಿ, ಕುಂದೂರುಮಠದ ಶ್ರೀಶರತ್‌ ಚಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬದನವಾಳು ನಾದಸ್ಚರ ಗಾಯನ ತಂಡದ ಬಿ. ಶಿವಕುವಾರ್ ಶಾಸ್ತ್ರಿ ಮತ್ತು ತಂಡದವರು ಬಸವಣ್ಣನವರ ವಿರಚಿತ ಗಾಯನ ನಡೆಸಿಕೊಟ್ಟರು.

ಜೆಡಿಎಸ್‌ ಕಂಡರೆ ಒಮ್ಮೊಮ್ಮೆ ಭಯ. ಜಿ.ಟಿ. ದೇವೇಗೌಡರು ನಮ್ಮ ಆತ್ಮೀಯರು ಹಾಗೂ ನಾಯಕರೂ ಕೂಡ. ಜೆಡಿಎಸ್‌ ಗೆ ನಮ್ಮಿಂದಲೂ ಅಧಿಕಾರ ದೊರಕಿದೆ, ಅವರಿಂದಲೂ ನಮಗೆ ಅಧಿಕಾರ ದೊರಕಿದೆ.

- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

ವೇದಿಕೆ ಹಂಚಿಕೊಂಡ ವಿಜಯೇಂದ್ರ, ಯತೀಂದ್ರ

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಮೈಸೂರಿನ ಆಲನಹಳ್ಳಿ ಕುದೇರು ಮಠದ‌ ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತು ವೇದಿಕೆ ಹಂಚಿಕೊಂಡರು. ಈ ಮುಂಚೆ ವಿಜಯೇಂದ್ರ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾಗ, ಯತೀಂದ್ರ ಅವರು ಕಾಂಗ್ರೆಸ್‌ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.