ಸಾರಾಂಶ
ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಂತಹ ಅಕ್ರಮಗಳು ಸೇರಿದಂತೆ ಒಟ್ಟು 26 ಹಗರಣಗಳ ಕುರಿತಂತೆ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಬೆಂಗಳೂರು : ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಂತಹ ಅಕ್ರಮಗಳು ಸೇರಿದಂತೆ ಒಟ್ಟು 26 ಹಗರಣಗಳ ಕುರಿತಂತೆ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಮಂಗಳವಾರ ಈ ಕುರಿತು ಖುದ್ದು ಪರಮೇಶ್ವರ್ ಅವರೇ ಮಾಹಿತಿ ನೀಡಿದ್ದಾರೆ. ಎರಡು ತಿಂಗಳಿನ ಒಳಗಾಗಿ ವರದಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುಮಾರು 20 ರಿಂದ 25 ಹಗರಣಗಳ ಪಟ್ಟಿ ಮಾಡಿದ್ದೇವೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಯಾವೆಲ್ಲ ಹಗರಣ ನಡೆದಿವೆಯೋ ಅವೆಲ್ಲ ಹಗರಣಗಳು ಹೊರಬರಲಿವೆ ಎಂದು ತಿಳಿಸಿದರು.