ಸಾರಾಂಶ
ಪುರಸಭೆ ಮಾಜಿಂ ಅಧ್ಯಕ್ಷ ಮುಬಾರಕ್ ಸಹ ೨೦೧೪ ರಿಂದ ೨೦೧೬ ರ ವರೆಗೆ ಅಧ್ಯಕ್ಷರಾಗಿ ಸುಮಾರು ೧.೪೦ ಕೋಟಿ ಅನುದಾನ ನಿರ್ಮಿತಿ ಕೇಂದ್ರಕ್ಕೆ ಹಾಗೂ ಕಿಯೋನಿಕ್ಸ್ ಇಲಾಖೆಗೆ ಬಿಡುಗಡೆ ಮಾಡಿದ್ದರು. ಆವತ್ತು ಯಾವ ಉದ್ದೇಶಕ್ಕಾಗಿ ಕೊಟ್ಟಿದ್ದರು. ಇವತ್ತು ಆ ಇಲಾಖೆಗಳ ಬಗ್ಗೆ ಆರೋಪ ಮಾಡಲಿಕ್ಕೆ ಯಾವ ನೈತಿಕತೆ ಇದೆ. ಆರೋಪ ಮಾಡುವ ಮೊದಲು ದಾಖಲೆ ನೀಡಲಿ.
ಕನ್ನಡಪ್ರಭ ವಾರ್ತೆ ಕೋಲಾರ ನಿರ್ಮಿತಿ ಕೇಂದ್ರ-ಕ್ರೆಡಿಲ್ ಇಲಾಖೆ ಶಾಸಕರು ಮತ್ತು ಎಂಎಲ್ಸಿಗಳನ್ನು ಸಾಕುವ ಕೇಂದ್ರಗಳಾಗಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಮಾಡಿರು ಆರೋಪಕ್ಕೆ ತಿರುಗೇಟು ನೀಡಿರುವ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ದಾಖಲೆ ಸಮೇತ ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಿದ್ದಾರೆ.
ನಗರಸಭೆ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರದಿಂದ ೩೦ ಕೋಟಿ ಅನುದಾನ ಬಂದಿರುವ ಹಣವನ್ನು ನಿರ್ಮಿತಿ ಕೇಂದ್ರ-ಕ್ರೆಡಿಲ್ ಇಲಾಖೆಗೆ ನೀಡಿರುವ ಬಗ್ಗೆ ಮುಬಾರಕ್ ಶಾಸಕರನ್ನು ಟೀಕಿಸಿದ್ದಾರೆ. ನೈತಿಕತೆ ಇದ್ದರೆ ಮೊದಲು ದಾಖಲೆಗಳನ್ನು ನೀಡಲಿ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಸದಸ್ಯರೇ ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆರೋಪ ಸಾಬೀತುಪಡಿಸಿ
ಸದಸ್ಯ ಎನ್.ಅಂಬರೀಷ್ ಮಾತನಾಡಿ, ಮುಬಾರಕ್ ಸಹ ೨೦೧೪ ರಿಂದ ೨೦೧೬ ರ ವರೆಗೆ ಅಧ್ಯಕ್ಷರಾಗಿ ಸುಮಾರು ೧.೪೦ ಕೋಟಿ ಅನುದಾನ ನಿರ್ಮಿತಿ ಕೇಂದ್ರಕ್ಕೆ ಹಾಗೂ ಕಿಯೋನಿಕ್ಸ್ ಇಲಾಖೆಗೆ ಬಿಡುಗಡೆ ಮಾಡಿದ್ದರು. ಆವತ್ತು ಯಾವ ಉದ್ದೇಶಕ್ಕಾಗಿ ಕೊಟ್ಟಿದ್ದೀರಿ. ಇವತ್ತು ಅ ಇಲಾಖೆಗಳ ಬಗ್ಗೆ ಆರೋಪ ಮಾಡಲಿಕ್ಕೆ ಯಾವ ನೈತಿಕತೆ ಇದೆ. ಆರೋಪ ಮಾಡುವ ಮೊದಲು ದಾಖಲೆ ನೀಡಲಿ ಇಲ್ಲದೇ ಹೋದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸದಸ್ಯರಾದ ಸುರೇಶ್ ಬಾಬು, ಸದಸ್ಯ ಅಫ್ಸರ್, ರಫೀ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್ ಸದಸ್ಯರಾದ ಹಿದಾಯಿತ್ ಉಲ್ಲಾ, ಏಜಾಜ್, ಗುಣಶೇಖರ್, ಶ್ಯಾಮೀರ್, ಏಜಾಜ್ ಪಾಷ ಇದ್ದರು.
;Resize=(128,128))
;Resize=(128,128))
;Resize=(128,128))