ಸಾರಾಂಶ
ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಪುತ್ರ ಡಾ.ಯತೀಂದ್ರನ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ''ವಿವೇಕಾನಂದ'' ಹೆಸರಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ''ಆ ವಿವೇಕಾನಂದನೇ ಬೇರೆ, ಈ ವಿವೇಕಾನಂದನೇ ಬೇರೆ. ಅವರು ಬಿಇಒ, ಇವರು ಇನ್ಸ್‌ಪೆಕ್ಟರ್'' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಪುತ್ರ ಡಾ.ಯತೀಂದ್ರನ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ''''ವಿವೇಕಾನಂದ'''' ಹೆಸರಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ''''ಆ ವಿವೇಕಾನಂದನೇ ಬೇರೆ, ಈ ವಿವೇಕಾನಂದನೇ ಬೇರೆ. ಅವರು ಬಿಇಒ, ಇವರು ಇನ್ಸ್‌ಪೆಕ್ಟರ್'''' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಇಒ ವಿವೇಕಾನಂದ ನಮ್ಮ ಕ್ಷೇತ್ರ(ವರುಣ)ವರು. ಈಗ ವರ್ಗಾವಣೆ ಆಗಿರುವುದು ಇನ್ಸ್‌ಪೆಕ್ಟರ್ ವಿವೇಕಾನಂದ. ಅವರದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಎಂಬುದನ್ನು ಆ ಕ್ಷೇತ್ರದ ಶಾಸಕರನ್ನು ಕೇಳಿ’ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.