ಬಂಗಾರಪೇಟೆ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ - ಮೀಸಲಾತಿ ಪ್ರಕಟ

| Published : Aug 09 2024, 12:33 AM IST / Updated: Aug 09 2024, 04:21 AM IST

ಸಾರಾಂಶ

ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯನ್ನು ಕೂರಿಸದರೂ ಅಶ್ಚರ್ಯವಿಲ್ಲ.ಆದರೆ ಜೆಡಿಎಸ್‌ನ ಸುನೀಲ್ ಹಾಗೂ ಪಕ್ಷೇತರ ಸದಸ್ಯರಾಗಿ ಕೆರೆಕೋಡಿ ವಾರ್ಡಿನ ಕಪಾಲಿ ಶಂಕರ್ ಎಸ್‌ಸಿ ಮೀಸಲಿನಿಂದ ಆಯ್ಕೆಯಾಗಿರುವುದರಿಂದ ಇವರಿಗೂ ಅಧ್ಯಕ್ಷರಾಗುವ ಬಯಕೆ ಇದ್ದರೂ ಸದಸ್ಯರ ಬೆಂಬಲದ ಕೊರತೆ ಎದುರಾಗುವ ಸ್ಧಾಯತೆ ಇದೆ.

 ಬಂಗಾರಪೇಟೆ :  ಕಳೆದ 17 ತಿಂಗಳಿಂದ ಪುರಸಭೆ ಆಡಳಿತ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಆಡಳಿತಾಧಿಕಾರಿಗಳ ಕೈಯಲ್ಲಿ ಆಡಳಿತದ ಚುಕ್ಕಾಣಿಯಿದ್ದು, ಈಗ ಕೊನೆಗೂ ಮೀಸಲಾತಿ ಗೊಂದಲದಿಂದ ಹೊರ ಬಂದಿರುವ ಸರ್ಕಾರ ಪುರಸಭೆಗೆ ಪ್ರಮುಖರ ಆಯ್ಕೆಗೆ ಮೀಸಲಾತಿ ಪ್ರಕಟಿಸಿದ್ದು ಅಧ್ಯಕ್ಷ ಉಪಾಧ್ಯಕ್ಷರ ಆಕಾಂಕ್ಷಿ ಸದಸ್ಯರಲ್ಲಿ ಚಟುವಟಿಕೆಗಳು ಗರಿಗೆದರುವಂತಾಗಿದೆ.

ಅಧ್ಯಕ್ಷ ಸ್ಥಾನ ಎಸ್‌ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,ಕಾಂಗ್ರೆಸ್ ಪಕ್ಷದ ಕೈಯಲ್ಲಿ ಪುರಸಭೆ ಆಡಳಿತವಿದ್ದು,ಅಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಿಟ್ಟಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿನ ವಿವೇಕಾನಂದ ನಗರದ ಗೋವಿಂದ ಒಬ್ಬರೇ ಎಸ್‌ಸಿ ಮೀಸಲಿನ ಸದಸ್ಯರಿರುವುದರಿಂದ ಪಕ್ಷದಲ್ಲಿ ಅಧ್ಯಕ್ಷ ಗಿರಿಗೆ ಪೈಪೋಟಿ ಇಲ್ಲ, ಆದರೂ ಶಾಸಕರು ಯಾರನ್ನು ಸೂಚಿಸುವರೋ ಅವರೇ ಅಧ್ಯಕ್ಷರಾಗುವುದು ಖಚಿತ,

ಆದರೆ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯನ್ನು ಕೂರಿಸದರೂ ಅಶ್ಚರ್ಯವಿಲ್ಲ.ಆದರೆ ಜೆಡಿಎಸ್‌ನ ಸುನೀಲ್ ಹಾಗೂ ಪಕ್ಷೇತರ ಸದಸ್ಯರಾಗಿ ಕೆರೆಕೋಡಿ ವಾರ್ಡಿನ ಕಪಾಲಿ ಶಂಕರ್ ಎಸ್‌ಸಿ ಮೀಸಲಿನಿಂದ ಆಯ್ಕೆಯಾಗಿರುವುದರಿಂದ ಇವರಿಗೂ ಅಧ್ಯಕ್ಷರಾಗುವ ಬಯಕೆ ಇದ್ದರೂ ಸದಸ್ಯರ ಬೆಂಬಲದ ಕೊರತೆ ಎದುರಾಗುವ ಸ್ಧಾಯತೆ ಇದೆ. ಪುರಸಭೆ ಸದಸ್ಯರ ಬಲಾಬಲ

ಒಟ್ಟು ೨೭ ಸದಸ್ಯರನ್ನು ಒಳಗೊಂಡಿರುವ ಪುರಸಭೆ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ೨೦ಸದಸ್ಯರು ಚುನಾಯಿತರಾಗಿದ್ದು, ಬಿಜೆಪಿ ಒಬ್ಬರು ಜೆಡಿಎಸ್‌ನಿಂದ ಇಬ್ಬರು ಹಾಗೂ ಪಕ್ಷೇತರರಾಗಿ ನಾಲ್ವರು ಆಯ್ಕೆಯಾಗಿದ್ದಾರೆ. ಇದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಯಾರೆ ಆದರೂ ಅದು ಕಾಂಗ್ರೆಸ್ ಸದಸ್ಯರೇ ಆಯ್ಕೆಯಾಗುವುದು ಖಚಿತ. ಚಂದ್ರವಾಣಿ ಉಪಾಧ್ಯಕ್ಷೆ?

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಸಿರುವುದರಿಂದ ಕುಂಬಾರಪಾಳ್ಯ ವಾರ್ಡಿನ ಚಂದ್ರವಾಣಿ ಮಂಜುನಾಥ್ ಸಹ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗಿದೆ. ಪಕ್ಷದಲ್ಲಿ ಇವರೊಬ್ಬರೇ ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದು, ಚಂದ್ರವಾಣಿ ಕಳೆದ ಅವಧಿಯಲ್ಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಪಕ್ಷದಲ್ಲಿನ ಒಳಒಪ್ಪಂದಂತೆ ಹಿಂದಿನ ಅಧ್ಯಕ್ಷೆ ಫರ್ಜಾನ ಅಧಿಕಾರ ಬಿಟ್ಟುಕೊಡದೆ ಅವಧಿಯನ್ನು ಪೂರ್ಣಗೊಳಿಸಿದ್ದರು. ಇಷ್ಟರಲ್ಲೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಯಾವುದೇ ಚುನಾವನೆ ನಡೆದರೂ ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯುವುದು ಸಾಮಾನ್ಯ ಆದರೆ ಇಲ್ಲಿ ಅಂತಹ ಪರಿಸ್ಥಿತಿ ಇಲ್ಲ.ಕಳೆದ ಹಲವು ದಶಕಗಳಿಂದ ಪುರಸಭೆ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಪಾರುಪತ್ಯವಾಗಿದೆ.

ಶಾಸಕರ ಕೈಯಲ್ಲಿ ಅಧಿಕಾರ

ಪುರಸಭೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಸದಸ್ಯರಿಗೆ ಹಾಲಿ ಮೀಸಲಾತಿ ನಿರಾಸೆ ಮೂಡಿಸಿದೆ. ಸಾಮಾನ್ಯ ಅಥವಾ ಬಿಸಿಎಂ(ಎ)ಮೀಸಲು ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಎಸ್‌ಸಿ ಮೀಸಲಾತಿಯಿಂದ ಆಘಾತವಾಗಿದೆ. ಇಲ್ಲಿ ಯಾರೇ ಅಧ್ಯಕ್ಷ ಉಪಾಧ್ಯಕ್ಷರಾದರೂ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ, ಶಾಸಕರ ಮಾರ್ಗದಲ್ಲೆ ನಡೆಯಬೇಕು ಎಂಬುದು ಗುಟ್ಟೇನಲ್ಲ.