ಡಾ.ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌: ಎಂಪಿ ಟೀಕೆ

| Published : Jan 17 2024, 01:47 AM IST / Updated: Jan 17 2024, 01:48 AM IST

ಸಾರಾಂಶ

ದಲಿತರೆಲ್ಲಾರೂ ಕಾಂಗ್ರೆಸ್ ಪರವಾಗಿ ಇದ್ದಾರೆ ಅನ್ನೋ ತಪ್ಪು ಕಲ್ಪನೆಯಲ್ಲಿದ್ದಾರೆ, ಕಾಂಗ್ರೆಸ್ ನಲ್ಲಿ ದೊಡ್ಡ ದೊಡ್ಡ ದಲಿತ ನಾಯಕರಿದ್ದಾರೆ ಅವರೆಲ್ಲಾ ಅವರ ಕುಟುಂಬಕ್ಕೆ ಮಾತ್ರ ಸೀಮಿತರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಾಗದೇ ಎಲ್ಲಾ ವರ್ಗಗದ ಜನಾಂಗದವರನ್ನು ಸಮಾನಾಗಿ ಕಂಡು ಅಧಿಕಾರ ಇರುವವರೆಗೂ ಕಳಂಕ ರಹಿತನಾಗಿ ಕೆಲಸ ಮಾಡಿದ್ದೇನೆ ಮಾಡುತ್ತಿದ್ದೇನೆ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಹೊವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಭೀಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಮನೆ ಮಗನಾಗಿ ಪ್ರತಿಯೊಬ್ಬರ ಕಷ್ಟದಲ್ಲಿ ಭಾಗಿಯಾಗಿ ಕೆಲಸ ಮಾಡಿದ್ದೇನೆ, ದಲಿತ ಸಂಘಟನೆಗಳ ತವರೂರು ಕೋಲಾರ ಜಿಲ್ಲೆ, ಅಂಬೇಡ್ಕರ್ ಹಾದಿಯಲ್ಲಿ ನಾವೆಲ್ಲಾ ಸಾಗುತ್ತಿದ್ದೇವೆ, ನರೇಂದ ಮೋದಿ ಅಂಬೇಡ್ಕರ್‌ರ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದಾರೆ ಪಂಚ ತೀರ್ಥಗಳನ್ನು ಕಟ್ಟಿದ್ದಾರೆ ಎಂದರು. ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌

ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಟ್ಟಿಲ್ಲ, ಬಿಜೆಪಿ ಅಂದ್ರೆ ದಲಿತ ವಿರೋದಿ ಸಂವಿಧಾನ ವಿರೋದಿ ಎಂದು ಜನರ ಬಳಿ ಬಿಂಬಿಸುತ್ತಾರೆ. ಅಂದು ಅಂಬೇಡ್ಕರ್ ಚುನಾವಣೆಗೆ ನಿಂತಾಗ ಜನಸಂಘ ಸಹಕಾರ ನೀಡಿತ್ತು ಕಾಂಗ್ರೆಸ್ ಪಕ್ಷ ಯಾವುದೇ ಸಹಕಾರ ನೀಡಿಲ್ಲ ಹಾಗಾಗಿ ಹಾಗಿನ ಎಲ್ಲಾ ಇತಿಹಾಸ ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸಕಲೇಶಪುರ ಶಾಸಕರು ಹಾಗೂ ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು ಮಾತನಾಡಿ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಹಲವಾರು ಮುಖಂಡರನ್ನು ಒಂದು ಕಡೆ ಸೇರಿಸಿ ಬಿಜೆಪಿ ಪಕ್ಷ ಪರವಾಗಿ ಇದ್ದೇವೆ ಮುಂಬರುವ ಚುನಾವಣೆಯಲ್ಲಿ ಇಡೀ ಸಮುದಾಯ ಬಿಜೆಪಿ ಪರ ನಿಂತು ರಾಜ್ಯದಲ್ಲಿ ೨೮ ಸ್ಥಾನಕ್ಕೆ ೨೮ ಸ್ಥಾನ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸುತ್ತೇವೆ ಹಾಗಾಗಿ ಪ್ರತಿ ಜಿಲ್ಲೆಯಲ್ಲೂ ಭೀಮ ಸಮಾವೇಶ ಮಾಡುತ್ತೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಡೀ ದಲಿತ ಸಮುದಾಯ ಬಿಜೆಪಿ ಪರವಾಗಿ ನಿಂತಿದ್ದರ ಪರಿಣಾಮ ಬಿಜೆಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ದಲಿತ ನಾಯಕರು ಕುಟುಂಬಕ್ಕೆ ಸೀಮಿತ

ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತರೆಲ್ಲಾರೂ ಕಾಂಗ್ರೆಸ್ ಪರವಾಗಿ ಇದ್ದಾರೆ ಅನ್ನೋ ತಪ್ಪು ಕಲ್ಪನೆಯಲ್ಲಿದ್ದಾರೆ, ಕಾಂಗ್ರೆಸ್ ನಲ್ಲಿ ದೊಡ್ಡ ದೊಡ್ಡ ದಲಿತ ನಾಯಕರಿದ್ದಾರೆ ಅವರೆಲ್ಲಾ ಅವರ ಕುಟುಂಬಕ್ಕೆ ಮಾತ್ರ ಸೀಮಿತರಾಗಿದ್ದಾರೆ, ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಖರ್ಗೆ ಪರಮೇಶ್ವರ್ ಜೊತೆ ಬಲಗೈ ಸಮುದಾಯ ವರ್ಗಗಳು ಇದ್ದಾರೆ, ಅನ್ನೋದನ್ನ ಪ್ರಚಾರ ಪಡಿಸಬೇಕಾಗಿತ್ತು, ಭೀಮ ಸಮಾವೇಶದ ಮೂಲಕ ಅವರಿಗೆ ಉತ್ತರ ನೀಡಿದ್ದೇವೆ ಎಂದರು.

ಭೀಮ ಸಮಾವೇಶದಲ್ಲಿ ದಲಿತ ಸಮುದಾಯ ಯಾರ ಪರವಾಗಿದೆ ಎನ್ನುವ ಸಂದೇಶ ರವಾನೆಯಾಗಿದೆ, ರಾಜ್ಯದಲ್ಲಿ ಬಿಜೆಪಿ ಬಿಟ್ಟರೆ ಕಾಂಗ್ರೆಸ್‌ನವರು ಮೋಸ ವಂಚನೆ ಮಾಡ್ತಾರೆ, ಅನ್ನೋದು ದಲಿತರಿಗಾಗಿ ಹಣ ಇಟ್ಟಿದ್ದೇವೆ ಅಂತ ಹೇಳ ೧೧,೧೪೦ ಕೋಟಿ ರೂ.ಗಳನ್ನು ಲೂಟಿ ಮಾಡಿದವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನಮ್ಮ ಹೆಸರು ಹೇಳಿ ಒಂದು ಕೈಯಲ್ಲಿ ಕೊಟ್ಟಂಗೆ ಮಾಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಇದು ಜನರಿಗೆ ತಿಳಿದಿದೆ ಎಂದರು.

ಭೀಮ ಸಮಾವೇಶದಲ್ಲಿ ಆರ್.ಎಸ್.ಎಸ್ ಸಂಚಾಲಕ ವಾದಿರಾಜ್, ಮಾಜಿ ಶಾಸಕ ಮಹೇಶ್, ರಾಷ್ಟ್ರೀಯ ದಲಿತ ಮುಖಂಡ ಚೀನಾ ರಾಮು, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ ಇದ್ದರು.೧೬ಕೆಎಲ್‌ಆರ್-೧೦ಕೋಲಾರದ ಹೊವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಭೀಮ ಸಮಾವೇಶ ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು.

೧೬ಕೆಎಲ್‌ಆರ್-೧೦ ಕೋಲಾರದ ಹೊವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ನಡೆದ ಭೀಮ ಸಮಾವೇಶವನ್ನು ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು.