ಸಾರಾಂಶ
ಸರ್ಕಾರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಹಾಲು ಉತ್ಪಾದಕರಿಗೆ 5 ಸಬ್ಸಿಡಿ ಹಣದ ಸುಮಾರು 1500 ಕೋಟಿ ಹಣ ಉಳಿಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ರೈತರ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ.
ಶ್ರೀರಂಗಪಟ್ಟಣ : ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಸರ್ಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಆರೋಪಿಸಿದರು.
ಪಟ್ಟಣ ಕುವೆಂಪು ವೃತ್ತದ ಬೆಂಗಳೂರು - ಮೈಸೂರು ಹೆದ್ದಾರಿ ಬಳಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆಗೆ ಮಾಡುವುದಾಗಿ ಬೆದರಿಕೆ ಮಾಡಿ ನೇರವಾಗಿ ದೂರವಾಣಿ ಮೂಲಕ ಹಣ ಕೇಳುತ್ತಿದ್ದಾರೆ. ಅಧಿಕಾರಿಗಳು ಸಹ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಭ್ರಷ್ಟಾಚಾರ ರಹಿತ ಅಧಿಕಾರ ನಡೆಸುವುದಾಗಿ ಹೇಳಿ ಅಧಿಕಾರ ಹಿಡಿದ ಸರ್ಕಾರ ಆರಂಭದಿದಂಲೂ ರೈತರ ಹಾಲಿನ ಸಬ್ಸಿಡಿ ಹಣ, ಕೇಂದ್ರ ಸರ್ಕಾರ ಭರಿಸಬೇಕಿದ್ದ ಕಿಸಾನ್ ಸನ್ಮಾನ್ ಸೇರಿದಂತೆ ಇತರೆ ಯೋಜನೆಗಳ ಹಣ ನೀಡಿದೇ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಹಾಲು ಉತ್ಪಾದಕರಿಗೆ 5 ಸಬ್ಸಿಡಿ ಹಣದ ಸುಮಾರು 1500 ಕೋಟಿ ಹಣ ಉಳಿಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ರೈತರ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ಅತಿವೃಷ್ಠಿ ಹಾಗೂ ಅನಾವೃಷ್ಠಿಯಲ್ಲಿ ಈ ಸರ್ಕಾರದ ಯಾವುದೇ ಸಾರ್ವಜನಕರ ಕೈಹಿಡಿಯದೇ ಕೇವಲ ಭ್ರಷ್ಟಾಚಾರವನ್ನು ಮಾತ್ರ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಸಾರ್ವಜನಕರು ಹಾಗೂ ಸರ್ಕಾರದ ಖಜಾನೆ ಹಣವನ್ನು ಕಾಯುವಂತೆ ಕೀ ನೀಡಿದರೆ, ಖಜಾನೆ ಲೂಟಿ ಹೊಡೆಯುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದ ವೇಳೆ ಯಾವುದೇ ಆಧಾರ ರಹಿತವಾಗಿ ನಮ್ಮ ಮೇಲೆ 40% ಆರೋಪ ಮಾಡಿದ್ದರು. ಆದರೆ, ಇವರು 100ಕ್ಕೆ 100% ಹಣವನ್ನ ನೇರವಾಗಿ ಖಜಾನೆಯಿಂದಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.