ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ ಏಮಾರಿಸುತ್ತಿದೆ

| Published : Apr 17 2024, 01:23 AM IST

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ ಏಮಾರಿಸುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೇಸ್ ಮತದಾರರನ್ನು ಗ್ಯಾರಂಟಿಗಳ ರೂಪದಲ್ಲಿ ಯಾಮಾರಿಸುವ ಕೆಲಸ ಮಾಡುತ್ತಿದೆ ಹಾಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮೈತ್ರಿಯ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಮತ ಹಾಕಲಿ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಯಾರೇ ಆಗಲಿ ಮೀನು ಕೊಟ್ಟು ಸಾಂಬಾರು ಮಾಡಿ ತಿನ್ನು ಎನ್ನುವುದಲ್ಲ. ಮೀನು ಹಿಡಿಯುವುದನ್ನು ಕಲಿಸಬೇಕು ಆಗ ದೇಶ, ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರಿಗೆ ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ ತಿರುಗೇಟು ಕೊಟ್ಟರು.

ತಾಲೂಕಿನ ಆನೂರಿನಲ್ಲಿ ನಡೆದ ಪಂಚಾಯತಿ ಮಟ್ಟದ ಸಭೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಪ್ರಚಾರ ನಡೆಸಿ ಮಾತನಾಡಿ, ರಾಮಮಂದಿರ ಪ್ರತಿಯೊಬ್ಬ ಭಾರತೀಯನ ಕನಸು ಅಂತಹ ಕನಸನ್ನು ನನಸು ಮಾಡಿ ಶ್ರೀರಾಮ ಮಂದಿರವನ್ನು ಭವ್ಯವಾಗಿ ನಿರ್ಮಿಸಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದು ಎಂದರು.

ಗ್ಯಾರಂಟಿ ಹೆಸರಲ್ಲಿ ಏಮಾರಿಸುತ್ತಿದೆ

ಕಾಂಗ್ರೇಸ್ ಮತದಾರರನ್ನು ಗ್ಯಾರಂಟಿಗಳ ರೂಪದಲ್ಲಿ ಯಾಮಾರಿಸುವ ಕೆಲಸ ಮಾಡುತ್ತಿದೆ ಹಾಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹಾಗೂ ದೇಶ ಶಾಂತಿ ಮತ್ತು ನೆಮ್ಮದಿಯಿಂದ ಅಭಿವೃದ್ದಿ ಕಡೆ ಸಾಗಲು ತಾವೆಲ್ಲ ಮೈತ್ರಿಯ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ರನ್ನು ಗೆಲ್ಲಿಸಿ ಮೋದಿಯವರ ಕೈ ಬಲಪಡಿಸಬೇಕೆಂದರು

ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ, ದೇಶದ ರಕ್ಷಣೆಗಾಗಿ ಈ ಚುನಾವಣೆ ದೇಶದಲ್ಲಿ ನಡೆಯುತ್ತಿದೆ. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರನ್ನು ಗೆಲ್ಲಿಸುವುದರ ಮೂಲಕ ಪ್ರಧಾನಿ ಮೋದಿರ ಕೈ ಬಲಪಡಿಸುವಂತೆ ಕರೆ ನೀಡಿದರು.

ಪರಿಶ್ರಮಕ್ಕೆ ಮತ ನೀಡಿ

ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತಿರುವ ಹಾಗೂ ಧಾರ್ಮಿಕ ಕ್ಷೇತ್ರ ಮತ್ತು ಸಂಸ್ಕೃತಿಗೆ ಹೆಚ್ಚಿನ ಮನ್ನಣೆ ನೀಡುತ್ತಿರುವ ಏಕೈಕ ನಾಯಕರೆಂದರೆ ಮೋದಿ. ಅವರ ಪರಿಶ್ರಮಕ್ಕೆ ಮತ ನೀಡುವುದರ ಮೂಲಕ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕೆಂದರು,

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್, ಅಭ್ಯರ್ಥಿ ಮಲ್ಲೇಶ್ ಬಾಬು, ಸೀಕಲ್ ರಾಮಚಂದ್ರಗೌಡ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ದಿನಮಿಂದಹಳ್ಳಿ ಬೈರೆಡ್ಡಿ, ಟಮೋಟ ಗೌಸ್, ಕುರುಬೂರು ನಟರಾಜ್, ರಮೇಶ್, ರಾಜಣ್ಣ ಉಪಸ್ಥಿತರಿದ್ದರು.