ನಿಮ್ಮ ಆಸ್ತಿಯನ್ನು ಎಕ್ಸ್‌ರೇ ಮಾಡಿ ಕಾಂಗ್ರೆಸ್‌ ಜಪ್ತಿ ಮಾಡುತ್ತೆ: ಮೋದಿ

| Published : Apr 24 2024, 02:27 AM IST

ಸಾರಾಂಶ

ಸಂಪತ್ತಿನ ಎಕ್ಸ್ ರೇ ಮಾಡಲಾಗುವುದು ಎಂದು ಕಾಂಗ್ರೆಸ್‌ ನಾಯಕ (ರಾಹುಲ್‌ ಗಾಂಧಿ) ಹೇಳಿದ್ದಾರೆ. ಅಂದರೆ ಸಂಪತ್ತನ್ನು ಪೆಟ್ಟಿಗೆಯಲ್ಲಿ ಇಟ್ಟಿದ್ದರೆ ಅಥವಾ ಗೋಡೆಯಲ್ಲಿ ಬಚ್ಚಿಟ್ಟಿದ್ದರೆ ಅದನ್ನು ಎಕ್ಸ್ ರೇ ಮೂಲಕ ಹುಡುಕುತ್ತಾರೆ. ನಂತರ ಅಗತ್ಯಕ್ಕಿಂತ ಹೆಚ್ಚಿರುವ ನಿಮ್ಮ ಆಸ್ತಿಯನ್ನೆಲ್ಲ ವಶಪಡಿಸಿಕೊಂಡು ಜನರಿಗೆ ಹಂಚುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಿಟಿಐ ಜೈಪುರ

ರಾಜಸ್ಥಾನದ ಟೋಂಕ್‌ನಲ್ಲಿ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ’ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿದರು. ‘ಕಾಂಗ್ರೆಸ್‌ನ ಮತಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕೀಯವನ್ನು ನಾನು ಬಹಿರಂಗಪಡಿಸಿದ್ದೇನೆ. ನಿಮ್ಮ ಸಂಪತ್ತನ್ನು ಕಿತ್ತುಕೊಂಡು ‘ಆಯ್ದ’ ಜನರಿಗೆ ಹಂಚಲು ಕಾಂಗ್ರೆಸ್ ಆಳವಾದ ಪಿತೂರಿ ನಡೆಸುತ್ತಿದೆ ಎಂಬ ಸತ್ಯವನ್ನು ನಾನು ದೇಶದ ಮುಂದೆ ಮಂಡಿಸಿದ್ದೇನೆ. ತನ್ನ ಗುಟ್ಟು ರಟ್ಟಾಗಿದ್ದು ಕಾಂಗ್ರೆಸ್‌ಗೆ ಎಷ್ಟು ಕೋಪ ತಂದಿದೆಯೆಂದರೆ ಅವರು ಅವರನ್ನು ಎಲ್ಲೆಡೆ ನಿಂದಿಸಲು ಪ್ರಾರಂಭಿಸಿದ್ದಾರೆ’ ಎಂದು ಕಿಡಿಕಾರಿದರು.‘ಸತ್ಯಕ್ಕೆ ಹೆದರಿ ಕಾಂಗ್ರೆಸ್ ತನ್ನ ನೀತಿಗಳನ್ನು ಏಕೆ ಮರೆಮಾಚುತ್ತಿದೆ? ನೀವು ನೀತಿ ರೂಪಿಸಿದ್ದು ನಿಜ. ಆದರೆ ಮೋದಿ ಅದರ ರಹಸ್ಯ ಬಹಿರಂಗಪಡಿಸಿದಾಗ ಮತ್ತು ನಿಮ್ಮ ಹಿಡನ್ ಅಜೆಂಡಾ ಹೊರಬಂದಾಗ ನೀವು ನಡುಗುತ್ತೀರಿ’ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.