ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಸುದ್ದಿ ಬರುತ್ತದೆ ಅಂತ ಹೇಳಿದ್ದು, ನಾವೆಲ್ಲರು ಬಹಳ ಖುಷಿಯಾಗಿದ್ದೇವೆ. ಇನ್ನೆರಡು ಮೂರು ದಿನಗಳಲ್ಲಿ ಒಳ್ಳೆ ಸುದ್ದಿ ಬರಲಿ ಅನ್ನೋದೆ ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಡಿಕೆಶಿ ಸಿಎಂ ಆಗುವುದು ಖಚಿತವೆಂದು ಪರೋಕ್ಷವಾಗಿ ತಿಳಿಸಿದ್ದಾರೆ.

 ರಾಮನಗರ : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಸುದ್ದಿ ಬರುತ್ತದೆ ಅಂತ ಹೇಳಿದ್ದು, ನಾವೆಲ್ಲರು ಬಹಳ ಖುಷಿಯಾಗಿದ್ದೇವೆ. ಇನ್ನೆರಡು ಮೂರು ದಿನಗಳಲ್ಲಿ ಒಳ್ಳೆ ಸುದ್ದಿ ಬರಲಿ ಅನ್ನೋದೆ ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಡಿಕೆಶಿ ಸಿಎಂ ಆಗುವುದು ಖಚಿತವೆಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಸುಮ್ಮನೆ ಓಡಾಡುವವರಿಗೆ ಕೂಲಿ ಕೊಡಲು ಆಗುತ್ತಾ?

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲಸ ಮಾಡಿರುವವರಿಗೆ ಕೂಲಿ ಕೊಡುತ್ತೇವೆ. ಸುಮ್ಮನೆ ಓಡಾಡುವವರಿಗೆ ಕೂಲಿ ಕೊಡಲು ಆಗುತ್ತಾ? ಡಿ.ಕೆ.ಶಿವಕುಮಾರ್ ಅವರು ಕೆಲಸ ಮಾಡಿ ಬೆವರು ಸುರಿಸಿದ್ದಾರೆ. ಹಾಗಾಗಿ ಅವರಿಗೆ ಕೂಲಿ ಕೊಡಬೇಕು ಎಂದು ಹೇಳಿದರು.

ನಾನೊಬ್ಬ ಸಣ್ಣ ಶಾಸಕ, ನನಗೇನು ನೇತೃತ್ವ ಕೊಡಲ್ಲ

ನಾನೊಬ್ಬ ಸಣ್ಣ ಶಾಸಕ, ನನಗೇನು ನೇತೃತ್ವ ಕೊಡಲ್ಲ. ನಾನು ಈ ಜಿಲ್ಲೆಯ ಮಗ, ಡಿ.ಕೆ.ಶಿವಕುಮಾರ್ ಅವರೂ ಈ ಜಿಲ್ಲೆಯ ಮಗ. ಈ ಸಂದರ್ಭದಲ್ಲಿ ನಾನು ಅವರ ಜೊತೆ ಇರಬೇಕು. ಅವರ ಜೊತೆ ಇದ್ದು ಸಹಕಾರ ಕೊಡುವುದು ನಮ್ಮ ಧರ್ಮ ಎಂದು ಹೇಳಿದರು.

ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡಿಲ್ಲ, ಒಂದಷ್ಟು ವಿಚಾರವಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಅಲ್ಲಿ ಹೋಗಿ ಶಾಸಕರ ಜೊತೆ ಚರ್ಚೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಅಂತ ಚರ್ಚೆ ಮಾಡಿ ವಾಪಸ್ ಬಂದಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.