ಮಾಜಿ ಶಾಸಕ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ : ಪೆಟ್ರೋಲ್‌ನಿಂದ ಸುಟ್ಟು ಬೆಂಬಲಿಗರ ವಿರುದ್ಧ ಆಕ್ರೋಶ

| Published : Aug 09 2024, 12:33 AM IST / Updated: Aug 09 2024, 04:18 AM IST

ಮಾಜಿ ಶಾಸಕ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ : ಪೆಟ್ರೋಲ್‌ನಿಂದ ಸುಟ್ಟು ಬೆಂಬಲಿಗರ ವಿರುದ್ಧ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪಾದಯಾತ್ರೆ ವೇಳೆ ಪ್ರೀತಂಗೌಡ ಬೆಂಬಲಿಗರು ಗೌಡರ ಗೌಡ ಪ್ರೀತಂಗೌಡ ಎಂಬ ಘೋಷಣೆ ಕೂಗಿದ್ದರಿಂದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಪಾದಯಾತ್ರೆಯಲ್ಲಿ ಪ್ರೀತಂಗೌಡ ಭಾಗಿಯಾಗಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ, ಆಕ್ರೋಶಗೊಂಡಿದ್ದರು.

 ಮಂಡ್ಯ :  ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಯದಲ್ಲಿ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ ಪರ ಘೋಷಣೆ ಕೂಗಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಇದ್ದ ಫ್ಲೆಕ್ಸ್‌ಗಳನ್ನು ಪೆಟ್ರೋಲ್‌ನಿಂದ ಸುಟ್ಟು ಅವರ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಸಮೀಪ ಮೈಸೂರು-ಬೆಂಗಳೂರು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವ ನಾಯಕರನ್ನ ಸ್ವಾಗತಿಸಲು ಹಾಕಿದ್ದ ಫ್ಲೆಕ್ಸ್‌ಗಳಲ್ಲಿದ್ದ ಪ್ರೀತಂಗೌಡ ಭಾವಚಿತ್ರ ಹಾಕಿರೋದಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಪಾದಯಾತ್ರೆ ವೇಳೆ ಪ್ರೀತಂಗೌಡ ಬೆಂಬಲಿಗರು ಗೌಡರ ಗೌಡ ಪ್ರೀತಂಗೌಡ ಎಂಬ ಘೋಷಣೆ ಕೂಗಿದ್ದರಿಂದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಪಾದಯಾತ್ರೆಯಲ್ಲಿ ಪ್ರೀತಂಗೌಡ ಭಾಗಿಯಾಗಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ, ಆಕ್ರೋಶಗೊಂಡಿದ್ದರು. ಮತ್ತೊಂದೆಡೆ ಪ್ರೀತಂಗೌಡ ಪರವಾಗಿ ಬೆಂಬಲಿಗರು ಘೋಷಣೆ ಕೂಗಿದ್ದು ಉಭಯ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತ ತಲುಪುವಂತೆ ಮಾಡಿತ್ತು. ಕೊನೆಗೆ ಎರಡೂ ಪಕ್ಷದವರು ತಮ್ಮ ತಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದರು. ಪಾದಯಾತ್ರೆ ಸಾಗಿದ ಬಳಿಕ ಸಂಜೆಯ ನಂತರ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗಳಿಗೆ ಹಚ್ಚಿರುವುದು ಕಂಡುಬಂದಿದೆ.

ಎಚ್‌ಡಿಕೆ, ಪ್ರೀತಂಗೌಡ ಇಬ್ಬರಿಗೂ ಸಮಾನ ಗೌರವ: ಸಿ.ಟಿ.ರವಿ

ಕನ್ನಡಪ್ರಭ ವಾರ್ತೆ ಮಂಡ್ಯಎಚ್.ಡಿ.ಕುಮಾರಸ್ವಾಮಿ ಎನ್‌ಡಿಎ ನಾಯಕರಲ್ಲಿ ಒಬ್ಬರು ಅದೇ ರೀತಿ ಪ್ರೀತಂಗೌಡ ಅವರು ಹಾಸನದಲ್ಲಿ ವರ್ಚಸ್ವಿ ನಾಯಕ. ನಾವು ಇಬ್ಬರನ್ನು ಸಮಾನ ಗೌರವದಿಂದ ಕಾಣುತ್ತೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಮೈತ್ರಿ ಹಿನ್ನೆಲೆಯಲ್ಲಿ ನಾವು ಯಾರನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಪ್ರೀತಂಗೌಡ ಇನ್ನೂ ಚಿಕ್ಕವರಿದ್ದಾರೆ. ಹಾಸನದಲ್ಲಿ ಅವರದ್ದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಕುಮಾರಸ್ವಾಮಿ ಅವರು ಜೆಡಿಎಸ್‌ನ ನಾಯಕರಾಗಿರುವುದರಿಂದ ವೈಮನಸ್ಸಿಗೆ ಎಡೆಮಾಡಿಕೊಡದಂತೆ ಮುನ್ನಡೆಸಿಕೊಂಡು ಹೋಗುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾವು ಉದ್ದೇಶಪೂರ್ವಕವಾಗಿ ಯಾರನ್ನೂ ಕರೆಸಿಲ್ಲ. ಗಲಾಟೆ, ಗೊಂದಲ ಎಬ್ಬಿಸುವ ಸಂಚನ್ನೂ ನಡೆಸಿಲ್ಲ. ಪಾದಯಾತ್ರೆಗೆ ಬಂದಿದ್ದ ಸಾವಿರಾರು ಜನರಲ್ಲಿ ಕೆಲವರಷ್ಟೇ ಘೋಷಣೆ ಕೂಗಿದ್ದಾರೆ. ಅದಕ್ಕೆ ಯಾರ ಪ್ರಚೋದನೆಯೂ ಇರಲಿಲ್ಲ. ಕೆಲವರಿಂದಾದ ತಪ್ಪನ್ನು ಸರಿಪಡಿಸಿಕೊಂಡು ಹೊಂದಾಣಿಕೆಯಿಂದ ಸಾಗುವುದಾಗಿ ತಿಳಿಸಿದರು.