ತಜ್ಞರೊಂದಿಗೆ ಚರ್ಚಿಸಿಯೇ ಗ್ಯಾರಂಟಿ ಘೋಷಣೆ

| Published : Apr 24 2024, 02:32 AM IST

ಸಾರಾಂಶ

ಆದರೆ ಕಾಂಗ್ರೆಸ್ ಪಕ್ಷವು ಯಾವುದೇ ಯೋಜನೆಯ ಭರವಸೆ ನೀಡುವಾಗ ಅದರ ಸಾಧಕ ಭಾಧಕಗಳನ್ನು ಅರ್ಥಿಕ ತಜ್ಞರೊಂದಿಗೆ ಚರ್ಚಿಸಿಯೇ ಭರವಸೆ ಘೋಷಿಸಿದೆ

ಕನ್ನಡಪ್ರಭ ವಾರ್ತೆ ಕೋಲಾರಚುನಾವಣೆಗೆ ಇನ್ನು ೨ ದಿನಗಳು ಮಾತ್ರ ಬಾಕಿ ಉಳಿದಿದ್ದು ಬಹಿರಂಗ ಮತಯಾಚನೆ ಅಂತಿಮಗೊಳ್ಳಲಿದೆ, ದೇಶವನ್ನು ಮುನ್ನಡೆಸುವ ಜನಾಭಿಪ್ರಾಯ ಸಂಗ್ರಹವಾಗಲಿದೆ, ಪ್ರಮುಖವಾಗಿ ಎರಡು ಪಕ್ಷಗಳು ತನ್ನ ಪ್ರಣಾಳಿಕೆ ಜನರ ಮುಂದಿಟ್ಟಿದೆ. ಇದನ್ನು ಆಧರಿಸಿ ಮತ ಹಾಕುವ ಮೂಲಕ ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವಂತ ಜವಾಬ್ದಾರಿಯು ಈ ದೇಶದ ಪ್ರಜೆಗಳನ್ನು ಅವಲಂಬಿಸಿದೆ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಎಲ್.ಹನುಮಂತಪ್ಪ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ದೇಶದಲ್ಲಿ ಪ್ರಥಮ ಭಾರಿಗೆ ಆಶ್ಚರ್ಯಕರವಾದ ಗ್ಯಾರಂಟಿಗಳನ್ನು ಕರ್ನಾಟಕ ರಾಜ್ಯದಲ್ಲಿ ಪ್ರಕಟಿಸಿ ಅನುಷ್ಠಾನಕ್ಕೆ ತಂದಿದೆ. ಪ್ರತಿ ಪಕ್ಷಗಳು ಈ ಗ್ಯಾರಂಟಿಗಳನ್ನು ತರಲು ಸಾಧ್ಯವೇ ಇಲ್ಲ ಎಂದರು.

ತಜ್ಞರ ಜತೆ ಚರ್ಚಿಸಿಯೇ ಘೋಷಣೆ

ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ಟೀಕಿಸುತ್ತಿದ್ದರು. ಆದರೆ ಅನುಷ್ಠಾನಗೊಂಡ ನಂತರ ಈಗ ಈ ಗ್ಯಾರಂಟಿಗಳು ಸಮರ್ಪಕವಾಗಿ ಜನತೆ ತಲುಪಿಸುವಲ್ಲಿ ವಿಫಲವಾಗಿದೆ ಎಂಬ ರಾಗ ಎಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಯಾವುದೇ ಯೋಜನೆಯ ಭರವಸೆ ನೀಡುವಾಗ ಅದರ ಸಾಧಕ ಭಾಧಕಗಳನ್ನು ಅರ್ಥಿಕ ತಜ್ಞರೊಂದಿಗೆ ಚರ್ಚಿಸಿಯೇ ಭರವಸೆ ಘೋಷಿಸಿದೆ ಎಂದು.

ಬಿಜೆಪಿ ಸರ್ಕಾರದ ಮೋದಿ ಆಡಳಿತದಲ್ಲಿ ಯಾವುದೇ ಹಗರಣಗಳಿಲ್ಲ ಎನ್ನುತ್ತಾರೆ ಆದರೆ ಚುನಾವಣಾ ಬಾಂಡ್‌ಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳಾಗಿದೆ, ಇದರಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಪರೋಕ್ಷವಾಗಿ ಭಾಗಿಯಾಗುವ ಮೂಲಕ ಶೇ.೯೦ ರಷ್ಟು ಪಾಲು ಬಿಜೆಪಿ ಪಕ್ಷದ್ದಾಗಿದೆ, ಸುಮಾರು ೬೩೦೦ ಸಾವಿರ ಕೋಟಿ ಬಿಜೆಪಿ ಪಕ್ಷಕ್ಕೆ ಬಂದಿದೆ. ಉಳಿದ ಶೇ.೧೦ರಷ್ಟು ಇತರೆ ಪಕ್ಷಗಳಿಗೆ ಸೇರಿದೆ ಎಂದು ತಿಳಿಸಿದರು.

ನುಡಿದಂತೆ ನಡೆಯುವ ಪಕ್ಷ

ಕಾಂಗ್ರೆಸ್ ಪಕ್ಷವು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಹೊರತು ಮೋದಿಯವರ ರೀತಿಯಲ್ಲಿ ಭರವಸೆ ಈಡೇರಿಸದೆ ವಂಚಿಸುವುದಿಲ್ಲ. ಕೋಲಾರ ಜಿಲ್ಲೆಯಲ್ಲಿ ೨೫೦೦ ವಸತಿ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದ್ದಾರೆ ಒಂದು ಮನೆಯಾದರೂ ನಿರ್ಮಿಸಿ ಕೊಟಿದ್ದಾರಾ ಮೋದಿ ಪ್ರಧಾನಿಯ ಗೌರವಯುತ ಸ್ಥಾನದಲ್ಲಿದ್ದು ಈ ರೀತಿ ಹಸಿ ಸುಳು ಹೇಳಿ ಜನರನ್ನು ಯಾಮಾರಿಸಿ ಮತಗಳನ್ನು ಕಸಿಯುವುದು ಅವರ ಸ್ಥಾನಮಾನಗಳಿಗೆ ಯೋಗ್ಯವಾದದ್ದಲ್ಲ ಎಂದು ಕಿವಿಮಾತು ತಿಳಿಸಿದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಒಬಿಸಿ ರಾಜ್ಯ ಉಪಾಧ್ಯಕ್ಷ ವೆಂಕಟೇಶಗೌಡ, ಜಿಲ್ಲಾ ಓಬಿಸಿ ಅಧ್ಯಕ್ಷ ಅಶೋಕ್, ಜಿ.ಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಮುದುವತ್ತಿ ಗಾ.ಪಂ.ಅಧ್ಯಕ್ಷ ಹನುಮಂತಪ್ಪ ಇದ್ದರು.