ಸಾರಾಂಶ
ನನಗೆ ಕೆರಗೋಡಿಗೆ ಹೋಗಲು ಭಯವಿಲ್ಲ. ಅಲ್ಲಿ ಶಾಂತಿ ಕದಡುವುದು ಬೇಡ ಎಂಬ ಉದ್ದೇಶದಿಂದ ನಾನು ಹೋಗಿಲ್ಲ. ನಾನು ಅಲ್ಲಿಗೆ ಹೋದರೆ ಕೆಲವರು ಪ್ರಚೋದನೆ ಮಾಡುತ್ತಾರೆ. ಆಗ ಮತ್ತೆ ಶಾಂತಿ ಕದಡಿದಂತೆ ಆಗುತ್ತದೆ. ಇನ್ನೂ ಕೆಲವು ದಿನಗಳ ಬಳಿಕ ಕೆರಗೋಡಿಗೆ ಹೋಗುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ

ಕೆಲವು ದಿನಗಳ ಬಳಿಕ ಕೆರಗೋಡಿಗೆ ಹೋಗುತ್ತೇನೆ. ಜನರ ಸಮಸ್ಯೆ ಏನೆಂಬುದನ್ನು ತಿಳಿದು ಬಗೆಹರಿಸುತ್ತೇನೆ. ಮಂಡ್ಯ ಜನರಿಗೆ ಬಾವುಟ, ಧ್ವಜ ಹೋರಾಟ ಇದ್ಯಾವುದೂ ಗೊತ್ತಿಲ್ಲ. ಅವರಿಗೆ ಗೊತ್ತಿರೋದು ಕಾವೇರಿ ಹೋರಾಟ ಮಾತ್ರ. ಕೆಲವರು ಇದನ್ನು ಪ್ರಚೋದನೆ ಮಾಡುತ್ತಿದ್ದಾರೆ ಅಷ್ಟೇ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಅವರಿಗೆ ಈ ಘಟನೆ ದೊಡ್ಡದು ಆಗುತ್ತಿಲ್ಲವಲ್ಲಾ ಎಂಬ ಚಿಂತೆ ಕಾಡುತ್ತಿದೆ. ಅದಕ್ಕೆ ಅವರು ಧ್ವಜ ಅಭಿಯಾನ ಮಾಡುತ್ತಾ ಇದ್ದಾರೆ. ಅವರು ನನಗೂ ಧ್ವಜ ಕೊಡಲಿ. ನಾನೂ ಸಹ ನಮ್ಮ ಮನೆಯ ಮೇಲೂ ಧ್ವಜ ಹಾರಿಸುತ್ತೇನೆ.
ನಾನೂ ಸಹ ದೇವರ ಭಕ್ತ, ದೇವರ ಪೂಜೆ ಮಾಡುತ್ತೇನೆ. ನಾನು ಮಾಡುವಷ್ಟು ಪೂಜೆಯನ್ನು ಅವರು ಮಾಡುವುದಿಲ್ಲ. ಭಾನುವಾರದಿಂದ ಇಡೀ ವಾರ ದೇವರ ಪೂಜೆ ಮಾಡುತ್ತೇನೆ ಎಂದರು.
ಮೂರು ನಾಲ್ಕು ಜನರು ಅಷ್ಟೇ ಈ ವಿಚಾರದಲ್ಲಿ ತುಪ್ಪ ಸುರಿಯುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೂ ದಾರಿ ತಪ್ಪಿಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಇದೆಲ್ಲಾ ಇಷ್ಟ ಇಲ್ಲ.
ರೈತರು ಹಣ ಹಾಕಿ ಕಟ್ಟಿರೋ ಸ್ತಂಭ ಅಣ್ಣ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಕುಮಾರಸ್ವಾಮಿ ಅವರು ಬಂದದ್ದು. ನೈಜ ಸ್ಥಿತಿಯನ್ನು ಕುಮಾರಸ್ವಾಮಿ ಅವರಿಗೆ ಹೇಳದೆ ದಾರಿ ತಪ್ಪಿಸಿದ್ದಾರೆ ಎಂದು ದೂರಿದರು.