ಮೋದಿ ಆಡಳಿತದಲ್ಲಿ ಬಲಿಷ್ಟವಾಗಿ ಬೆಳೆದ ಭಾರತ

| Published : Mar 24 2024, 01:30 AM IST

ಸಾರಾಂಶ

ದೇಶ ಮೊದಲು ಪಕ್ಷ ನಂತರ ವ್ಯಕ್ತಿ ಅನಂತರ ಎಂಬ ಸಿದ್ಧಾಂತದ ಮೇರೆಗೆ ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ, ಬಿಜೆಪಿ ಆಡಳಿತದ ಈ ೧೦ ವರ್ಷದಲ್ಲಿ ಮಾಡಿದ ಪರಿಣಾಮ ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದೆ

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೧೦ ವರ್ಷಗಳಲ್ಲಿ ಭಾರತ ದೇಶವನ್ನು ಅಭಿವೃದ್ಧಿಯಲ್ಲಿ ವಿಕಾಸಗೊಳಿಸಿದ್ದಾರೆ, ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಬರೆದು ಸಲ್ಲಿಸಬಹುದೆಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಕಾರ್ಪತಿ ಅಮರ್ ಹೇಳಿದರು.

ನಗರದ ತಾಲೂಕು ಕಚೇರಿ ಮುಂಭಾಗದ ರಸ್ತೆಯಲ್ಲಿ ಬಿಜೆಪಿಯ ವಿಕಸಿತ ಭಾರತ ಮೋದಿ ಗ್ಯಾರಂಟಿ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಿ ಮುಂದೆ ಯಾವ ರೀತಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯ ಸಲ್ಲಿಸಬಹುದು ಎಂದು ತಿಳಿಸಿದರು.

ಭಾರತ ವಿಶ್ವದಲ್ಲೇ ಬಲಿಷ್ಠ

ದೇಶ ಮೊದಲು ಪಕ್ಷ ನಂತರ ವ್ಯಕ್ತಿ ಅನಂತರ ಎಂಬ ಸಿದ್ಧಾಂತದ ಮೇರೆಗೆ ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ, ೭೦ ವರ್ಷದಲ್ಲಿ ಕಾಣದ ಅಭಿವೃದ್ಧಿ ಕಾರ್ಯಕ್ರಮ ಬಿಜೆಪಿ ಆಡಳಿತದ ಈ ೧೦ ವರ್ಷದಲ್ಲಿ ಮಾಡಿದ ಪರಿಣಾಮ ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದೆ ಕೋವಿಡ್ ನಿರ್ವಹಣೆ, ಲಸಿಕೆ ಸ್ವದೇಶಿಯಾಗಿ ತಯಾರಿಸಿ ದೇಶಿ ವಾಸಿಗಳಿಗೆ ನೀಡುವುದರ ಜತೆಗೆ ವಿದೇಶಗಳು ನೀಡಿದ ಹೆಗ್ಗಳಿಕೆ ಭಾರತದಾಗಿದೆ ಎಂದರು.

ವಾಜಪೇಯಿ ಪ್ರಧಾನ ಮಂತ್ರಿ ಆಗಿದ್ದ ಐದು ವರ್ಷ ಕಾಲ ದೇಶ ವಿಕಾಸ ಖಂಡಿತು. ರಸ್ತೆಗಳ ಅಭಿವೃದ್ಧಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮೂಲಕ ದೇಶವನ್ನು ಸಂಪರ್ಕ ಮಾಡುವುದರ ಮೂಲಕ ಕ್ರಾಂತಿಯನ್ನೇ ಮಾಡಿದರು ಇದಕ್ಕೂ ಮೊದಲು ಆಡಳಿತ ಮಾಡಿದ ಪಕ್ಷದ ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷರಾದ ವಿ.ಆದಿನಾರಾಯಣ, ಎಂ.ವಿ.ವೇಣುಗೋಪಾಲ್, ಸಂಪಂಗಿ, ಪ್ರಧಾನ ಕಾರ್ಯದರ್ಶಿಗಳಾದ ಮೈಕ್ ವಿ.ಟಿ.ಶಂಕರ್, ಆರ್.ಕೆ.ವಿಶ್ವನಾಥ್ ಕುಮಾರ್, ಕಾರ್ಯದರ್ಶಿಗಳಾದ ಹೇಮಂತ್, ಪ್ರಕಾಶ್ ರಾವ್, ಭೀಮಣ್ಣ, ನಾಗರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಧಾ ರವಿಂದ್ರ, ಯೂವಮೋರ್ಚಾ ಅಧ್ಯಕ್ಷ ಕೆ.ವಿ.ಜನಾರ್ಧನಗೌಡ, ಸುಕುಮಾರ್ ಇದ್ದರು.